
‘ಬಿಗ್ ಬಾಸ್’ ಗೆದ್ದ ಬಳಿಕ ಸ್ಪರ್ಧಿಗಳಿಗೆ ಸಿಗೋ ಖ್ಯಾತಿ ಅಷ್ಟಿಷ್ಟಲ್ಲ. ಬಿಗ್ ಬಾಸ್ ಗೆದ್ದ ಬಳಿಕ ಸ್ಪರ್ಧಿಗಳು ನಾನಾ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಅಭಿಮಾನಿಗಳನ್ನು ಭೇಟಿ ಮಾಡಿ ಖುಷಿ ಪಡುತ್ತಾರೆ. ಆದರೆ, ಹನುಮಂತ ಮಾತ್ರ ಸಿಂಪಲ್ ವ್ಯಕ್ತಿ. ಅವರು ಬಿಗ್ ಬಾಸ್ ಗೆದ್ದ ಬಳಿಕವೂ ಗದ್ದೆಯಲ್ಲಿ ಮರದ ನೆರಳಲ್ಲಿ ಮಲಗಿದ್ದಾರೆ ಎನ್ನುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದ ಅಸಲಿಯತ್ತು ಇಲ್ಲಿದೆ.
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತವೆ. ಇದರಲ್ಲಿ ನಿಜ ಯಾವುದು, ಸುಳ್ಳು ಯಾವುದು ಎಂಬುದು ಹೇಳುವುದೇ ಕಷ್ಟ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಎಲ್ಲಾ ವಿಡಿಯೋಗಳನ್ನು ನಂಬಲು ಸಾಧ್ಯವೇ ಇಲ್ಲ. ಅಷ್ಟರಮಟ್ಟಿಗೆ ಪರಿಸ್ಥಿತಿ ಬಂದು ನಿಂತಿದೆ.
ಈಗ ಸೋಶಿಯಲ್ ಮೀಡಿಯಾದಲ್ಲಿ ಹನುಮಂತ ಅವರ ವಿಡಿಯೀ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೋರ್ವ ರಸ್ತೆಯಿಂದ ಹನುಮಂತನ ಭೇಟಿ ಮಾಡಿಸುತ್ತೇನೆ ಎಂದು ಗದ್ದೆ ಕಡೆ ತೆರಳುತ್ತಾರೆ. ಗದ್ದೆಯಲ್ಲಿ ಹನುಮಂತ ಅವರು ಕಂಬಳಿ ಹಾಸಿ, ಮರದ ನೆರಳಲ್ಲಿ ಮಲಗಿರುವ ರೀತಿ ಇದೆ. ‘ಎಲ್ಲರೂ ಬಿಗ್ ಬಾಸ್ ಗೆದ್ರೆ ಟ್ರೋಫಿ ಇಟ್ಟುಕೊಂಡು ರೋಡ್ ಶೋ ಮಾಡುತ್ತಾರೆ, ಆದರೆ ಹನುಮಂತ ನೋಡ್ರಿ’ ಎಂದು ವಿಡಿಯೋಗೆ ಕ್ಯಾಪ್ಶನ್ ಕೊಡಲಾಗಿದೆ.
ಆದರೆ, ಇದರಲ್ಲಿ ಯಾವುದೇ ಸತ್ಯ ಇಲ್ಲ. ಇದು ಹಳೆಯ ವಿಡಿಯೋ. ಹನುಮಂತ ಅವರು ಸದ್ಯ ಬೆಂಗಳೂರಿನಲ್ಲೇ ಇದ್ದಾರೆ. ಅವರು ಇನ್ನೂ ಊರಿಗೆ ತೆರಳಿಲ್ಲ. ಅವರು ‘ಬಾಯ್ಸ್ vs ಗರ್ಲ್ಸ್’ ಶೋನ ಶೂಟಿಂಗ್ ಕೂಡ ಮಾಡಬೇಕಿತ್ತು. ಈ ಕಾರಣದಿಂದ ಅವರು ಬಿಗ್ ಬಾಸ್ ಗೆದ್ದ ಬಳಿಕವೂ ಬೆಂಗಳೂರಲ್ಲೇ ಇದ್ದರು. ಇಂದು (ಜನವರಿ 30) ಅವರು ಊರಿಗೆ ಹೋಗುವ ಸಾಧ್ಯತೆ ಇದೆ. ಹೀಗಾಗಿ, ವೈರಲ್ ಆಗಿರೋದು ಫೇಕ್ ವಿಡಿಯೋ.
ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ಹನುಮಂತನ ಮದುವೆ ಮಾತುಕತೆ ಹೇಗೆ ನಡೆದಿದೆ? ಉತ್ತರ ನೀಡಿದ ತಾಯಿ
ಹನುಮಂತ ಅವರು ಸಿಂಪಲ್ ವ್ಯಕ್ತಿ. ಜೀ ಕನ್ನಡದಲ್ಲಿ ಅವರು ಗಮನ ಸೆಳೆದ ಬಳಿಕವೂ ಊರಲ್ಲಿ ಕುರಿ ಕಾಯುವ ಕೆಲಸ ಮುಂದುವರಿಸಿದ್ದರು. ಈಗ ಬಿಗ್ ಬಾಸ್ ಬಳಿಕ ಅವರು ಏನು ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:09 am, Thu, 30 January 25