ತಾಯಿಯ ಹೇಳಿಕೆಯಿಂದ ವಿವಾದ; ಪ್ರತಿಕ್ರಿಯಿಸಿದ ತ್ರಿವಿಕ್ರಮ್
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹನುಮಂತ ವಿಜೇತರಾದ ನಂತರ, ತ್ರಿವಿಕ್ರಮ್ ಅವರ ತಾಯಿ ಹನುಮಂತ ಗೆಲ್ಲಬಾರದಿತ್ತು ಎಂದು ಹೇಳಿದ್ದರು. ಇದರಿಂದ ಉಂಟಾದ ವಿವಾದಕ್ಕೆ ತ್ರಿವಿಕ್ರಮ್ ಪ್ರತಿಕ್ರಿಯಿಸಿದ್ದು, ತಾಯಿಯ ಪ್ರೀತಿಯ ವ್ಯಕ್ತಪಡಿಸುವಿಕೆ ಇದಾಗಿದ್ದು, ವಿವಾದ ಮಾಡುವ ವಿಷಯವಲ್ಲ ಎಂದು ಹೇಳಿದ್ದಾರೆ. ಹನುಮಂತನ ಗೆಲುವಿನ ಬಗ್ಗೆ ತನಗೆ ಸಂತೋಷವಿದೆ ಎಂದೂ ಅವರು ಹೇಳಿದ್ದಾರೆ.
![ತಾಯಿಯ ಹೇಳಿಕೆಯಿಂದ ವಿವಾದ; ಪ್ರತಿಕ್ರಿಯಿಸಿದ ತ್ರಿವಿಕ್ರಮ್](https://images.tv9kannada.com/wp-content/uploads/2025/01/trivikram-22-1.jpg?w=1280)
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗಿದ್ದಾರೆ. ಹನುಮಂತ ಅವರು ವಿನ್ನರ್ ಆಗಿದ್ದಾರೆ. ಈ ವಿಚಾರದಲ್ಲಿ ಕೆಲವರಿಗೆ ಬೇಸರ ಇದೆ. ತ್ರಿವಿಕ್ರಮ್ ಅವರು ವಿನ್ ಆಗಬೇಕು ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದರು. ಈ ರೀತಿಯ ಅಭಿಪ್ರಾಯಪಟ್ಟವರಲ್ಲಿ ತ್ರಿವಿಕ್ರಮ್ ತಾಯಿ ಕೂಡ ಒಬ್ಬರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಬಗ್ಗೆ ತ್ರಿವಿಕ್ರಮ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ನನ್ನ ಮಗ ಗೆಲ್ಲಬೇಕಿತ್ತು’ ಎಂದು ತ್ರಿವಿಕ್ರಮ್ ತಾಯಿ ಹೇಳಿದ್ದರೆ ಅದು ವಿವಾದ ಆಗುತ್ತಲೇ ಇರಲಿಲ್ಲ. ಅವರು ಹನುಮಂತ ಗೆಲ್ಲಬಾರದಿತ್ತು, ಆತ ಏನೂ ಮಾಡಿಲ್ಲ ಎಂದಿದ್ದರು. ಇದು ಸಾಕಷ್ಟು ಟ್ರೋಲ್ ಆಗಿತ್ತು. ಇದು ವಿವಾದ ಮಾಡುವ ವಿಚಾರ ಅಲ್ಲ ಎಂದು ತ್ರಿವಿಕ್ರಮ್ ಅವರು ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹನುಮಂತ ಗೆಲ್ಲಬಾರದಿತ್ತು. ಆತ ಏನೂ ಮಾಡಿಲ್ಲ. ನನ್ನ ಮಗ ಗೆಲ್ಲಬೇಕು ಎಂದಲ್ಲ, ತ್ರಿವಿಕ್ರಮ್ ಅಥವಾ ರಜತ್ ಯಾರೇ ವಿನ್ ಆದರೂ ಖುಷಿ ಇತ್ತು’ ಎಂದು ತ್ರಿವಿಕ್ರಮ್ ತಾಯಿ ಹೇಳಿದ್ದರು. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣ ಆಗಿತ್ತು. ಈ ಕುರಿತು ತ್ರಿವಿಕ್ರಮ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಗ ಗೆಲ್ಲಬೇಕು ಎಂದು ಎಲ್ಲಾ ತಾಯಂದರಿಗೂ ಇರುವ ಆಸೆ. ಈ ಆಸೆಯನ್ನೇ ತಾಯಿ ಕೂಡ ವ್ಯಕ್ತಪಡಿಸಿದ್ದಾರೆ ಎಂಬುದು ತ್ರಿವಿಕ್ರಮ್ ಮಾತು. ಬೇರೆ ಯಾರೇ ಗೆದ್ದರೂ ಅವರಿಗೆ ಬೇಸರ ಆಗುತ್ತದೆ ಎಂಬುದು ತ್ರಿವಿಕ್ರಮ್ ಅಭಿಪ್ರಾಯ. ‘ತಾಯಿ ಪ್ರೀತಿ ಅಷ್ಟೇ. ಇದನ್ನು ವಿವಾದ ಮಾಡುವ ವಿಚಾರ ಎನೂ ಇಲ್ಲ’ ಎಂದು ತ್ರಿವಿಕ್ರಮ್ ಹೇಳಿದ್ದಾರೆ.
ಹನುಮಂತ ಗೆದ್ದ ವಿಚಾರ ತ್ರಿವಿಕ್ರಮ್ಗೆ ಖುಷಿ ಇದೆಯೇ? ಖಂಡಿತವಾಗಿಯೂ ಖುಷಿ ಇದೆ ಎಂಬುದು ತ್ರಿವಿಕ್ರಮ್ ಮಾತು. ಹನುಮಂತಗೆ ದೊಡ್ಡ ಅಭಿಮಾನಿ ಬಳಗ ಇದೆ ಎಂಬುದು ತ್ರಿವಿಕ್ರಮ್ಗೆ ಗೊತ್ತಿತ್ತಂತೆ. ಅವರಿಗೆ 5 ಕೋಟಿ ವೋಟ್ ಬಿದ್ದಿದೆ ಎಂಬ ವಿಚಾರದಲ್ಲಿ ತ್ರಿವಿಕ್ರಮ್ ಅವರಿಗೆ ಯಾವುದೇ ಅಚ್ಚರಿ ಕೂಡ ಆಗಿಲ್ಲ ಅನ್ನೋದು ವಿಶೇಷ.
ಇದನ್ನೂ ಓದಿ: ಬಿಗ್ ಬಾಸ್ ಮುಗಿಸಿದ ತ್ರಿವಿಕ್ರಮ್ಗೆ ‘ಸಿಸಿಎಲ್’ನಲ್ಲಿ ಇಲ್ಲ ಚಾನ್ಸ್ ? ಉತ್ತರಿಸಿದ ಸುದೀಪ್
ಈ ಮೊದಲು ನಡೆದ ಸುದ್ದಿಗೋಷ್ಠಿ ಸಂದರ್ಭದಲ್ಲಿ ತ್ರಿವಿಕ್ರಮ್ ಹಾಗೂ ಹನುಮಂತ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ತ್ರಿವಿಕ್ರಮ್ ಅವರು ಹನುಮಂತನ ಜೊತೆಯೇ ಇದ್ದರು. ಅವರನ್ನು ಕೈ ಹಿಡಿದು ಸುದ್ದಿಗೋಷ್ಠಿಗೆ ಕರೆ ತಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:57 am, Thu, 30 January 25