AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವರಿಂದಾಗಿ ನಾನು ಇನ್ನೂ ಇಂಡಸ್ಟ್ರಿಯಲ್ಲಿದ್ದೇನೆ’; ಛಾಯಾ ಸಿಂಗ್

ಛಾಯಾ ಸಿಂಗ್, 'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಪತಿ, ನಟ ಕೃಷ್ಣ ಅವರ ಬೆಂಬಲದಿಂದಲೇ ಚಿತ್ರರಂಗದಲ್ಲಿ ಇಷ್ಟು ವರ್ಷಗಳಿಂದ ಮುಂದುವರಿಯಲು ಸಾಧ್ಯವಾಗಿದೆ ಎಂದು ಸಂತಸ ಹಂಚಿಕೊಂಡರು. ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಸಕ್ರಿಯವಾಗಿರಲು ಕೃಷ್ಣರ ಬೆಂಬಲವೇ ಮುಖ್ಯ ಕಾರಣ ಎಂದು ಛಾಯಾ ಸಿಂಗ್ ಹೇಳಿದರು.

‘ಅವರಿಂದಾಗಿ ನಾನು ಇನ್ನೂ ಇಂಡಸ್ಟ್ರಿಯಲ್ಲಿದ್ದೇನೆ’; ಛಾಯಾ ಸಿಂಗ್
ಛಾಯಾ ಸಿಂಗ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 17, 2025 | 8:43 AM

Share

ಛಾಯಾ ಸಿಂಗ್ ಅವರು ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಭೂಮಿಕಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರ ಸಾಕಷ್ಟು ಗಮನ ಸೆಳೆಯುವ ರೀತಿಯಲ್ಲಿ ಇದೆ. ಅವರದ್ದು ಪ್ರಬುದ್ಧ ಪಾತ್ರ. ಛಾಯಾ ಸಿಂಗ್ (Chaya Singh) ಅವರು ಈಗ ಒಬ್ಬರನ್ನು ಸ್ಮರಿಸಿಕೊಂಡಿದ್ದಾರೆ. ಅವರಿಂದಾಗಿ ನಾವು ಇಲ್ಲಿ ಇರೋದು ಎಂದು ಖುಷಿ ಖುಷಿಯಿಂದ ಹೇಳಿದ್ದಾರೆ. ಯಾರು ಅವರು? ಆ ಬಗ್ಗೆ ಇಲ್ಲಿದೆ ವಿವರ.

ಛಾಯಾ ಸಿಂಗ್ ಅವರು ರಜಪೂತ್ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಆ ಬಳಿಕ ಛಾಯಾ ಸಿಂಗ್ ಅವರು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದರು. ಕನ್ನಡ ಸಿನಿಮಾಗಳನ್ನು ಮಾಡಿದರು. ಈಗ ಅವರು ತಮಿಳು ಧಾರಾವಾಹಿಗಳನ್ನು ಮಾಡುತ್ತಿದ್ದಾರೆ. ಜೀ ತಮಿಳಿನ ‘ಗಟ್ಟಿಮೇಳಂ’ ಹೆಸರಿನ ಧಾರಾವಾಹಿಯಲ್ಲೂ ಅವರು ನಟಿಸುತ್ತಿದ್ದಾರೆ.

ಛಾಯಾ ಸಿಂಗ್ ಅವರಿಗೆ ಇತ್ತೀಚೆಗೆ ಜೀ ತಮಿಳು ಏರ್ಪಡಿಸಿದ್ದ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು. ಈ ವೇಳೆ ಅವರು ಪತಿ ಕೃಷ್ಣ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ಕೃಷ್ಣನ ಬೆಂಬಲದಿಂದ ನಾನು ಇನ್ನೂ ಇಂಡಸ್ಟ್ರಿಯಲ್ಲಿ ಇದ್ದೇನೆ’ ಎಂದು ಹೇಳಿದರು.

View this post on Instagram

A post shared by zeetamil (@zeetamizh)

ಕೃಷ್ಣ ಅವರು ಕಿರುತೆರೆ ನಟ. ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಅವರು ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಅವರು ಪತ್ನಿಯ ಬೆಂಬಲವಾಗಿ ನಿಂತಿದ್ದಾರೆ. ಧಾರಾವಾಹಿ ಶೂಟ್​ಗಾಗಿ ಛಾಯಾ ಅವರು ಬೆಂಗಳೂರಿಗೆ ಬರಬೇಕಾಗುತ್ತದೆ. ಆದರೆ, ಇದಕ್ಕೆ ಕೃಷ್ಣ ಅವರು ವಿರೋಧ ಹೊರಹಾಕಿಲ್ಲ. ಬದಲಿಗೆ ಪತ್ನಿಯನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ. ಇದು ಖುಷಿಯ ವಿಚಾರ. 2012ರಲ್ಲಿ ಛಾಯಾ ಹಾಗೂ ಕೃಷ್ಣ ವಿವಾಹ ಆದರು.

ಇದನ್ನೂ ಓದಿ: ‘ನಾನು ಮೊದಲು ಕೆಲಸ ಕೇಳಿಕೊಂಡು ಕನ್ನಡದ ಈ ನಟರ ಬಳಿ ಹೋಗಿದ್ದೆ’; ಛಾಯಾ ಸಿಂಗ್

ಛಾಯಾ ಸಿಂಗ್ ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ‘ಮಫ್ತಿ’ ಚಿತ್ರದಲ್ಲಿ ಛಾಯಾ ಅವರು ಶಿವರಾಜ್​ಕುಮಾರ್ ತಂಗಿ ಪಾತ್ರ ಮಾಡಿದ್ದರು. ‘ಭೈರತಿ ರಣಗಲ್’ ಸಿನಿಮಾದಲ್ಲಿ ಛಾಯಾ ಸಿಂಗ್ ಪಾತ್ರ ಪ್ರಮುಖವಾಗಿ ಕಾಣಿಸಿಕೊಂಡಿತ್ತು. ಅವರು ಧಾರಾವಾಹಿಗಳ ಜೊತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈ ಎಲ್ಲದಕ್ಕೂ ಪತಿಯ ಬೆಂಬಲ ಇದೆ. ಛಾಯಾ ಸಿಂಗ್ ಅವರಿಗೆ ಈ ಬಗ್ಗೆ ಖುಷಿ ಇದೆ. ಅವರ ನಟನೆಯ ‘ಅಮೃತಧಾರೆ’ ಒಳ್ಳೆಯ ಟಿಆರ್​ಪಿ ಪಡೆದುಕೊಂಡು ಮುಂದೆ ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.