ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬರುತ್ತಿದೆ ಹೊಸ ಧಾರಾವಾಹಿ; ಎಷ್ಟು ಗಂಟೆಗೆ?

| Updated By: ರಾಜೇಶ್ ದುಗ್ಗುಮನೆ

Updated on: Sep 11, 2021 | 9:25 PM

ಮೂಲ ಧಾರಾವಾಹಿಯಲ್ಲಿ ಈ ಕಥೆ ಸಾಗೋದು ಪಶ್ಚಿಮ ಬಂಗಾಳದಲ್ಲಿ. ಈ ಕಥೆ ನಡೆಯೋದು ಸ್ವಾತಂತ್ರ್ಯೋತ್ಸವಕ್ಕೂ ಮೊದಲು. ಕನ್ನಡದಲ್ಲಿ ಈ ಊರೂಗಳ ಹೆಸರನ್ನು ಬದಲಿಸಿ, ನೇಟಿವಿಟಿಗೆ ತಕ್ಕಂತೆ ಡಬ್​ ಮಾಡುವ ಸಾಧ್ಯತೆ ಇದೆ.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬರುತ್ತಿದೆ ಹೊಸ ಧಾರಾವಾಹಿ; ಎಷ್ಟು ಗಂಟೆಗೆ?
 ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬರುತ್ತಿದೆ ಹೊಸ ಧಾರಾವಾಹಿ; ಎಷ್ಟು ಗಂಟೆಗೆ?
Follow us on

ವೀಕ್ಷಕರನ್ನು ಸೆಳೆಯೋಕೆ ವಾಹಿನಿಗಳ ಮಧ್ಯೆ ಕಾಂಪಿಟೇಷನ್​ ಇದ್ದೇ ಇರುತ್ತದೆ. ಈ ಕಾರಣಕ್ಕೆ ಹೊಸಹೊಸ ಧಾರಾವಾಹಿಗಳ ಮೂಲಕ ವಾಹಿನಿಗಳು ವೀಕ್ಷಕರ ಎದುರು ಬರುತ್ತಿವೆ. ಇನ್ನು, ಅನೇಕ ಧಾರಾವಾಹಿಗಳು ಬೇರೆ ಭಾಷೆಯಿಂದ ಡಬ್​ ಆಗಿ ಕನ್ನಡದಲ್ಲಿ ಪ್ರಸಾರ ಆಗುತ್ತಿವೆ. ಈಗ ಕಲರ್ಸ್​ ಕನ್ನಡ ವಾಹಿನಿ ಹೊಸ ಧಾರಾವಾಹಿ ಜತೆಗೆ ವೀಕ್ಷಕರ ಎದುರು ಬರುತ್ತಿದೆ. ಇದರ ಪ್ರೋಮೋವನ್ನು ವಾಹಿನಿ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

‘ಚಿಕ್ಕೆಜಮಾನಿ’ ಧಾರಾವಾಹಿ ಸೆಪ್ಟೆಂಬರ್ 20ರಿಂದ ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆರಂಭಿಸಲಿದೆ. ಅಂದಹಾಗೆ, ಇದು ಡಬ್​ ಧಾರಾವಾಹಿ. ಹಿಂದಿಯಲ್ಲಿ ‘ಬ್ಯಾರಿಸ್ಟರ್​ ಬಾಬು’ ಹೆಸರಿನ ಧಾರಾವಾಹಿ ಕಳೆದ ವರ್ಷ ಫೆಬ್ರವರಿ 11ರಂದು ಪ್ರಸಾರ ಆರಂಭಿಸಿತ್ತು. ಬಾಂಧಿತಾ ದಾಸ್ ಎಂಬ ಬಾಲಕಿಯನ್ನು ಬ್ಯಾರಿಸ್ಟರ್ ಅನಿರುದ್ಧ್ ರಾಯ್ ಚೌಧರಿ ಮದುವೆ ಆಗುತ್ತಾನೆ. ಅನಿರುದ್ಧ್ ಸಮಾಜದ ವಿರುದ್ಧ ಹೋರಾಡುತ್ತಾನೆ. ಈ ಧಾರಾವಾಹಿಯಲ್ಲಿ ಬಾಲಕಿಯ ವಯಸ್ಸು ಕೇವಲ 11 ವರ್ಷ. ಈ ಮೂಲಕ ಸಮಾಜದ ಅನೇಕ ಕೆಟ್ಟ ಸಂಪ್ರದಾಯಗಳ ವಿರುದ್ಧ ಹೋರಾಡಲು ಈ ಧಾರಾವಾಹಿ ಸ್ಫೂರ್ತಿದಾಯಕವಾಗಲಿದೆ.

ಮೂಲ ಧಾರಾವಾಹಿಯಲ್ಲಿ ಈ ಕಥೆ ಸಾಗೋದು ಪಶ್ಚಿಮ ಬಂಗಾಳದಲ್ಲಿ. ಈ ಕಥೆ ನಡೆಯೋದು ಸ್ವಾತಂತ್ರ್ಯ ಪೂರ್ವದಲ್ಲಿ. ಕನ್ನಡದಲ್ಲಿ ಈ ಊರೂಗಳ ಹೆಸರನ್ನು ಬದಲಿಸಿ, ನೇಟಿವಿಟಿಗೆ ತಕ್ಕಂತೆ ಡಬ್​ ಮಾಡುವ ಸಾಧ್ಯತೆ ಇದೆ. ಸದ್ಯ, ಕಲರ್ಸ್​ ಕನ್ನಡ ವಾಹಿನಿ ‘ಚಿಕ್ಕೆಜಮಾನಿ’ ಧಾರಾವಾಹಿಯ ಪ್ರೋಮೋ ಹಂಚಿಕೊಂಡಿದೆ. ಈ ಪ್ರೋಮೋಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲವರು ಡಬ್​ ಮಾಡಿ ಧಾರಾವಾಹಿ ಪ್ರಸಾರ ಮಾಡಿರುವುದನ್ನು ವಿರೋಧಿಸಿದ್ದಾರೆ. ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ‘ಚಿಕ್ಕೆಜಮಾನಿ’ ಪ್ರಸಾರವಾಗಲಿದೆ.

ಕೊವಿಡ್​ ಮೊದಲನೇ ಅಲೆ ಕಾಣಿಸಿಕೊಂಡ ನಂತರದಲ್ಲಿ ಧಾರಾವಾಹಿ ಶೂಟಿಂಗ್​ ನಿಂತಿತ್ತು. ಈ ವೇಳೆ ವಾಹಿನಿಗಳಿಗೆ ಧಾರಾವಾಹಿ ಪ್ರಸಾರ ಮಾಡೋಕೆ ಸಾಧ್ಯವಾಗಿರಲಿಲ್ಲ. ಆಗ, ವಾಹಿನಿಗಳು ಡಬ್ಬಿಂಗ್​ ಕಾನ್ಸೆಪ್ಟ್​ಗೆ ಹೆಚ್ಚು ಒತ್ತು ನೀಡಿದವು. ಬೇರೆಬೇರೆ ಭಾಷೆಯ ಜನಪ್ರಿಯ ಧಾರಾವಾಹಿಗಳನ್ನು ಡಬ್​ ಮಾಡಿ ಪ್ರಸಾರ ಮಾಡೋಕೆ ಆರಂಭಿಸಿವೆ. ಇದನ್ನು ಅನೇಕರು ವಿರೋಧಿಸಿದ್ದಾರೆ ಕೂಡ.

ಇದನ್ನೂ ಓದಿ: ‘ಡಾ. ರಾಜ್​ಕುಮಾರ್​ ನೋಡಿ ಮೆಚ್ಚಿದ್ದ ಧಾರಾವಾಹಿ ಅದು’; ಅಪರೂಪದ ಕ್ಷಣ ನೆನಪಿಸಿಕೊಂಡ ಶ್ರೀದೇವಿ

ರವಿ ಬೆಳಗೆರೆ ಅವರ ‘ಹೇಳಿ ಹೋಗು ಕಾರಣ’ ಅತಿ ಶೀಘ್ರದಲ್ಲೇ ಧಾರಾವಾಹಿಯಾಗಿ ಪ್ರಸಾರ; ಕುತೂಹಲ ಹುಟ್ಟಿಸಿದ ಪ್ರೊಮೊ

Published On - 8:43 pm, Sat, 11 September 21