ಕನ್ನಡ ಚಿತ್ರರಂಗದಲ್ಲಿ ನಟ ಡಾಲಿ ಧನಂಜಯ (Daali Dhananjaya) ಮತ್ತು ನಟಿ ಅಮೃತಾ ಅಯ್ಯಂಗಾರ್ ಉತ್ತಮ ಜೋಡಿ ಎನಿಸಿಕೊಂಡಿದ್ದಾರೆ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಮತ್ತು ‘ಬಡವ ರಾಸ್ಕಲ್’ ಸಿನಿಮಾಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡ ಈ ಜೋಡಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಇಬ್ಬರ ನಟನೆಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ, ರಿಯಲ್ ಲೈಫ್ನಲ್ಲಿಯೂ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ (Amrutha Iyengar) ನಡುವೆ ಉತ್ತಮ ಬಾಂಧವ್ಯ ಇದೆ. ಇವರಿಬ್ಬರ ಬಗ್ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈಗ ಅಮೃತಾ ಅಯ್ಯಂಗಾರ್ ಅವರಿಗೆ ಡಾಲಿ ಧನಂಜಯ ಪ್ರಪೋಸ್ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ನಟ ಗಣೇಶ್ ನಡೆಸಿಕೊಡುತ್ತಿರುವ ‘ಗೋಲ್ಡನ್ ಗ್ಯಾಂಗ್’ (Golden Gang) ಶೋನಲ್ಲಿ ಇಂಥದ್ದೊಂದು ಸನ್ನಿವೇಶ ನಡೆದಿದೆ. ಪ್ರಪೋಸ್ ಮಾಡುವಾಗ ಧನಂಜಯ ನಾಚಿಕೊಂಡಿದ್ದಾರೆ. ಅಮೃತಾ ಅಯ್ಯಂಗಾರ್ ಕೂಡ ನಾಚಿ ನೀರಾಗಿದ್ದಾರೆ. ಒಬ್ಬರ ನಡುವಿನ ಆ ರೊಮ್ಯಾಂಟಿಕ್ ಸನ್ನಿವೇಶದ ಪ್ರೋಮೋವನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಅದು ಸಖತ್ ವೈರಲ್ ಆಗುತ್ತಿದೆ. ‘ಕಂಗ್ರಾಜುಲೇಷನ್ಸ್ ಡಾಲಿ ಭಾಯ್’ ಎಂದು ಈಗಾಗಲೇ ಫ್ಯಾನ್ಸ್ ಕಮೆಂಟ್ ಮಾಡಲು ಆರಂಭಿಸಿದ್ದಾರೆ.
ತಮ್ಮ ಬದುಕಿನ ಬೆಸ್ಟ್ ಸ್ನೇಹಿತರ ಬಗ್ಗೆ ಮಾತನಾಡುವ ಕಾರ್ಯಕ್ರಮವೇ ‘ಗೋಲ್ಡನ್ ಗ್ಯಾಂಗ್’. ಈ ಶೋನಲ್ಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ಪಾಲ್ಗೊಂಡಿದ್ದಾರೆ. ‘ಮಂಡಿಯೂರಿ ಬೇಡುವೆನು. ಹೃದಯ ಕಾಲಡಿ ಇಡುವೆನು. ತೆಗೆದು ಬಚ್ಚಿಟ್ಟುಕೋ. ಇಲ್ಲಾ.. ತುಳಿದು ಕಾಲ್ ತೊಳೆದುಕೋ. ಬೇಡ ಈ ಮೌನ, ಮಾಡು ತೀರ್ಮಾನ’ ಎಂದು ರೊಮ್ಯಾಂಟಿಕ್ ಆಗಿ ಕವಿತೆ ಹೇಳುವ ಮೂಲಕ ಡಾಲಿ ಪ್ರಪೋಸ್ ಮಾಡಿದ್ದಾರೆ. ಕೆಂಗುಲಾಬಿ ನೀಡಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಹೂವು ಸ್ವೀಕರಿಸಿದ ಅಮೃತಾ ಅವರು ‘ಬಡವ ರಾಸ್ಕಲ್’ ಚಿತ್ರದ ಹಾಡು ಹೇಳಿ ಪ್ರತಿಕ್ರಿಯಿಸಿದ್ದಾರೆ. ಇಬ್ಬರೂ ಪರಸ್ಪರ ತಬ್ಬಿಕೊಂಡು ಡ್ಯಾನ್ಸ್ ಮಾಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಈ ಎಪಿಸೋಡ್ ಜ.29 ಮತ್ತು ಜ.30ರ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ರಿಯಲ್ ಲೈಫ್ನಲ್ಲಿಯೂ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ಅವರ ಜೋಡಿಯನ್ನು ಜನರು ಇಷ್ಟಪಡುತ್ತಿದ್ದಾರೆ. ಜೀ ಕನ್ನಡ ಹಂಚಿಕೊಂಡ ಪ್ರೋಮೋಗೆ ಅಭಿಮಾನಿಗಳು ಮಾಡುತ್ತಿರುವ ಕಮೆಂಟ್ಗಳೇ ಅದಕ್ಕೆ ಸಾಕ್ಷಿ ಎನ್ನಬಹುದು.
‘ನಿಜಜೀವನದಲ್ಲೂ ಈ ಜೋಡಿ ತುಂಬ ಚೆನ್ನಾಗಿರುತ್ತೆ. ನೋಡಿದ್ರೆ ಡೌಟ್ ಬರ್ತಿದೆ’ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ‘ಒಳ್ಳೇ ಜೋಡಿ. ಬೇಗ ಸೇರಲಿ, ಜೊತೆಯಾಗಿ ಬದುಕು ಸಾಗಲಿ’ ಎಂದು ಮತ್ತೊಬ್ಬರು ಹಾರೈಸಿದ್ದಾರೆ. ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ಅವರು ಇದಕ್ಕೆಲ್ಲ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಈಗ ನಿರ್ಮಾಣ ಆಗಿದೆ.
ಇದನ್ನೂ ಓದಿ:
‘ನಾವು ಕಾಲಿಟ್ರೆ ಹೊಸ ಅಲೆ ಏಳತ್ತೆ’; ಸಿನಿಮಾ ಜರ್ನಿಯನ್ನು ಇನ್ನೊಂದು ರೀತಿ ಅರ್ಥೈಸಿದ ಧನಂಜಯ
Published On - 8:22 am, Fri, 28 January 22