ಭಾನುವಾರ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ ದರ್ಶನ್ ನಟನೆಯ ‘ದಿ ಡೆವಿಲ್’

The Devil Movie: ಚಾಲೆಂಜಿಂಗ್ ಸ್ಟಾರ್ ದರ್ಶನ್ ದ್ವಿಪಾತ್ರದಲ್ಲಿ ನಟಿಸಿರುವ 'ದಿ ಡೆವಿಲ್' ಸಿನಿಮಾ ಕಿರುತೆರೆಗೆ ಆಗಮಿಸುತ್ತಿದೆ. ಪ್ರಕಾಶ್ ವೀರ್ ನಿರ್ದೇಶನದ ಈ ರಾಜಕೀಯ ಕಥಾಹಂದರದ ಚಿತ್ರವು ಆಗಸ್ಟ್ 30ರಂದು ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಿ ಪ್ರಸಾರವಾಗಲಿದೆ.

ಭಾನುವಾರ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ ದರ್ಶನ್ ನಟನೆಯ ‘ದಿ ಡೆವಿಲ್’
ದರ್ಶನ್

Updated on: Aug 29, 2026 | 1:17 PM

ಮುಖ್ಯಾಂಶಗಳು

  • ದರ್ಶನ್ ದ್ವಿಪಾತ್ರದ ‘ದಿ ಡೆವಿಲ್’
  • ಜೀ ಕನ್ನಡದಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್
  • ಆಗಸ್ಟ್ 30ರಂದು ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ (Devil Movie) ಥಿಯೇಟರ್​ ಹಾಗೂ ಒಟಿಟಿಯಲ್ಲಿ ಯಶಸ್ಸು ಕಂಡಿದೆ. ಈ ಮೊದಲು ಸಿನಿಮಾ ಒಟಿಟಿಯಲ್ಲಿ ಪ್ರಸಾರ ಕಂಡಿತ್ತು. ಈಗ ಚಿತ್ರ ಕಿರುತೆರೆಯಲ್ಲಿ ಪ್ರಸಾರ ಆಗಲು ಸಜ್ಜಾಗಿದೆ. ಆಗಸ್ಟ್ 30ರಂದು ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಈ ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಪ್ರಸಾರವಾಗಲಿದೆ. ಥಿಯೇಟರ್ ಹಾಗೂ ಒಟಿಟಿಯಲ್ಲಿ ಚಿತ್ರವನ್ನು ಮಿಸ್ ಮಾಡಿಕೊಂಡವರು ಟಿವಿಯಲ್ಲಿ ವೀಕ್ಷಿಸಬಹುದು.

ಚಿತ್ರದ ಕಥಾಹಂದರ

‘ದಿ ಡೆವಿಲ್’ ರಾಜಕೀಯ ಹಿನ್ನೆಲೆಯುಳ್ಳ ಕಥೆಯಾಗಿದ್ದು, ಅಧಿಕಾರ, ನಾಯಕತ್ವ ಮತ್ತು ಜವಾಬ್ದಾರಿಗಳ ಸುತ್ತ ಸಾಗುತ್ತದೆ. ಒಂದೇ ತರಹ ಕಾಣುವ ಇಬ್ಬರು ವ್ಯಕ್ತಿಗಳ ಜೀವನದಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಮುಖ್ಯ ವಸ್ತುವಾಗಿದೆ. ಚಿತ್ರದಲ್ಲಿ ದರ್ಶನ್ ಅವರು ಧನುಷ್ ರಾಜಶೇಖರ್ ಮತ್ತು ಕೃಷ್ಣ ಎಂಬ ದ್ವಿಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎರಡೂ ಪಾತ್ರಗಳು ಭಿನ್ನ ಶೇಡ್​ಗಳನ್ನು ಹೊಂದಿವೆ ಅನ್ನೋದು ವಿಶೇಷ.

ಕಥೆಯ ತಿರುವು

ಮುಖ್ಯಮಂತ್ರಿ ರಾಜಶೇಖರ್ (ಮಹೇಶ್ ಮಂಜ್ರೇಕರ್) ಅವರ ಮಗ ಧನುಷ್ (ದರ್ಶನ್) ಲಂಡನ್​ನಲ್ಲಿ ವಾಸವಿರುತ್ತಾರೆ. ಆತನಿಗೆ ರಾಜಕೀಯದಲ್ಲಿ ಆಸಕ್ತಿ ಇರುವುದಿಲ್ಲ. ಇದೇ ವೇಳೆ, ಹೋಟೆಲ್ ನಡೆಸುತ್ತಾ ನಟನಾಗುವ ಕನಸು ಕಾಣುವ ಕೃಷ್ಣ (ದರ್ಶನ್) ಧನುಷ್‌ನಂತೆಯೇ ಕಾಣುವುದರಿಂದ, ಆತನ ಜಾಗದಲ್ಲಿ ಕೃಷ್ಣನನ್ನು ನಿಲ್ಲಿಸಲಾಗುತ್ತದೆ. ಕೃಷ್ಣ ನಿಧಾನವಾಗಿ ಜನರ ಹಾಗೂ ರುಕ್ಮಿಣಿ (ರಚನಾ ರೈ) ಅವರ ವಿಶ್ವಾಸ ಗಳಿಸುತ್ತಾನೆ. ಆದರೆ, ಅಸಲಿ ಧನುಷ್ ವಾಪಸ್ಸಾದಾಗ ಕಥೆಗೆ ತಿರುವು ಸಿಗುತ್ತದೆ.

ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರದಲ್ಲಿ ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್ ಮತ್ತು ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದರ್ಶನ್ ಅವರ ದ್ವಿಪಾತ್ರದ ಅಭಿನಯವಿರುವ ‘ದಿ ಡೆವಿಲ್’ ಆಗಸ್ಟ್ 30ರಂದು ಸಂಜೆ 7 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ: ‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ನೇರವಾಗಿ ಕಾರಣ ತಿಳಿಸಿದ ಚಿಕ್ಕಣ್ಣ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿದ್ದಾಗಲೇ ಅವರ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಂಡಿತ್ತು. ಇದೀಗ ಅವರು ಜೈಲಿನಲ್ಲಿರುವಾಗಲೇ ಆ ಚಿತ್ರ ಟಿವಿಯಲ್ಲೂ ಪ್ರಸಾರವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us