
‘ಬಿಗ್ ಬಾಸ್’ ಮನೆಯಲ್ಲಿ ಯಾರು ಯಾವಾಗ ಬದಲಾಗುತ್ತಾರೆ ಎಂದು ಊಹಿಸೋದು ಕಷ್ಟ. ಈಗ ಧ್ರುವಂತ್ ವಿಷಯದಲ್ಲೂ ಹೀಗೆಯೇ ಆಗಿದೆ. ಗಿಲ್ಲಿ (Gilli) ಜೊತೆ ಸದಾ ಕಿತ್ತಾಡುತ್ತಿದ್ದ ಅವರು ಏಕಾಏಕಿ ಬದಲಾಗಿದ್ದಾರೆ. ಈ ಹಿಂದೆ ಮಾಡಿದ ಬೇಸರಕ್ಕೆ ಗಿಲ್ಲಿ ಬಳಿ ಧ್ರುವಂತ್ ಕ್ಷಮೆ ಕೇಳಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ನಡೆದ ಈ ಬೆಳವಣಿಗೆ ಅಚ್ಚರಿ ತಂದಿದೆ.
ಬಿಗ್ ಬಾಸ್ ಕನ್ನಡದಲ್ಲಿ ಧ್ರುವಂತ್ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. ಅವರು ಯಾವ ಕ್ಷಣದಲ್ಲಿ ಹೇಗಿರುತ್ತಾರೆ ಎಂಬುದನ್ನು ಊಹಿಸೋದು ಕಷ್ಟ. ಅವರು ಬಹುತೇಕ ಸಂದರ್ಭಗಳಲ್ಲಿ ಗಿಲ್ಲಿ ಜೊತೆ ಕಿತ್ತಾಡಿಕೊಳ್ಳುತ್ತಾ ಕಾಣಿಸುತ್ತಿದ್ದರು. ಗಿಲ್ಲಿ ಏನೇ ಹೇಳಿದರೂ ಅದನ್ನು ವಿರೋಧಿಸುತ್ತಿದ್ದರು. ಜನವರಿ 1ರ ಎಪಿಸೋಡ್ನಲ್ಲೂ ಹಾಗೆಯೇ ಆಗಿದೆ.
ಗಿಲ್ಲಿಗೆ ರ್ಯಾಪ್ ಸಾಂಗ್ ಬರೆಯುವಂತೆ ಬಿಗ್ ಬಾಸ್ ಸೂಚಿಸಿದರು. ಮನೆಯ ಸದಸ್ಯರು ಹಾಗೂ ಇಷ್ಟು ದಿನಗಳ ಜರ್ನಿ ಬಗ್ಗೆ ಇದರಲ್ಲಿ ವಿವರಣೆ ಇರಬೇಕು ಎಂಬ ಸೂಚನೆ ಇತ್ತು. ಈ ಹಾಡು ಬರೆಯುವಾಗ ಗಿಲ್ಲಿ ಬಳಿ ಬಂದ ಧ್ರುವಂತ್ ಕಿರಿಕ್ ಮಾಡಿಕೊಂಡರು. ‘ನನ್ನ ಹೆಸರನ್ನು ಹಾಡಿನಿಂದ ತೆಗಿ’ ಎಂದು ಪದೇ ಪದೇ ಹೇಳಿದರು.
ಇದನ್ನೂ ಓದಿ: ಗೆಲ್ಲೋ ಮೊದಲೇ ಅಶ್ವಿನಿ ಎದುರು ಬೀಗಿದ ಗಿಲ್ಲಿ ನಟ; ಕೊನೆಗೆ ಸಿಕ್ಕಿದ್ದು ಸೋಲು
ಅಲ್ಲೇ ಇದ್ದ ರಘು ಅವರು ಇದನ್ನು ಅಲ್ಲಗಳೆದಿದ್ದಾರೆ. ‘ಪಾಸಿಟಿವ್ ಆಗಿ ಮಾತ್ರ ಹಾಡನ್ನು ಬರೆಯಲು ಹೇಳಿದ್ದೇನೆ. ಹೀಗಾಗಿ, ನಿನ್ನ ಬಗ್ಗೆ ಕೆಟ್ಟದಾಗಿ ಇರೋದಿಲ್ಲ’ ಎಂದು ರಘು ಗಿಣಿಗೆ ಹೇಳಿದಂತೆ ಹೇಳಿದರೂ ಕಿವಿಗೆ ಹಾಕಿಕೊಂಡಿಲ್ಲ ಧ್ರುವಂತ್. ನಂತರ ಹಾಡಿನಲ್ಲಿ ಧ್ರುವಂತ್ ಬಗ್ಗೆ ಇದ್ದ ಸಾಲುಗಳು ಕೇಳಿ ಅವರೇ ಖುಷಿಪಟ್ಟರು.
We’re still in Season 12, right?
Or am I watching footage from another season 🤔 #BBK12
— ಅಲ್ಪಸಂಖ್ಯಾತ (@alpasankhyata) January 1, 2026
‘ಧ್ರುವಂತ್ ಅಂದ್ರೆ ಭಕ್ತಿ, ಅದೇ ಅವರಿಗೆ ಶಕ್ತಿ’ ಎಂದು ಹಾಡಿನಲ್ಲಿ ಬರೆದಿದ್ದರು ಗಿಲ್ಲಿ. ಈ ಸಾಲು ಧ್ರುವಂತ್ಗೆ ಖುಷಿ ಕೊಟ್ಟಿದೆ. ಇದಾದ ಬಳಿಕ ಅವರು ಕ್ಷಮೆ ಕೇಳಿದರೇ ಎಂಬ ಪ್ರಶ್ನೆ ಮೂಡಿದೆ. ‘ಹ್ಯಾಪಿ ನ್ಯೂ ಇಯರ್’ ಎಂದು ಇಬ್ಬರೂ ವಿಶ್ ಮಾಡಿಕೊಂಡರು. ಆ ಬಳಿಕ ಗಿಲ್ಲಿಗೆ ಫ್ಲೈಯಿಂಗ್ ಕಿಸ್ ಕೊಟ್ಟರು. ಕ್ಷಮೆ ಕೇಳಿದರು. ಇದನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.