‘ನಿನ್ನ ಜತೆ ಮಾತನಾಡೋದು ಪಾಯಿಂಟ್​ಲೆಸ್​ ಅನಿಸುತ್ತಿದೆ’; ಮಂಜುನ ದೂರ ಮಾಡಿ ಒಬ್ಬಂಟಿಯಾದ ದಿವ್ಯಾ

| Updated By: ರಾಜೇಶ್ ದುಗ್ಗುಮನೆ

Updated on: Jul 30, 2021 | 3:36 PM

ಜುಲೈ 28ರ ಎಪಿಸೋಡ್​ನಲ್ಲಿ ಮಂಜು ಹಾಗೂ ದಿವ್ಯಾ ಸುರೇಶ್​ ನಡುವೆ ಸಣ್ಣ ಮಾತಿಗೆ ಆರಂಭವಾದ ಜಗಳ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಇಬ್ಬರೂ ಮಾತನಾಡುವುದನ್ನೇ ನಿಲ್ಲಿಸಿದ್ದರು.

‘ನಿನ್ನ ಜತೆ ಮಾತನಾಡೋದು ಪಾಯಿಂಟ್​ಲೆಸ್​ ಅನಿಸುತ್ತಿದೆ’; ಮಂಜುನ ದೂರ ಮಾಡಿ ಒಬ್ಬಂಟಿಯಾದ ದಿವ್ಯಾ
ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​
Follow us on

ದಿವ್ಯಾ ಸುರೇಶ್​ ಬಿಗ್​ ಬಾಸ್​ ಮನೆಯಲ್ಲಿ ದಿನಕಳೆದಂತೆ ಎಲ್ಲರಿಂದಲೂ ದೂರವಾಗುತ್ತಿದ್ದಾರೆ. ಮಂಜು ಪಾವಗಡ ಜತೆ ದಿವ್ಯಾ ಹೆಚ್ಚು ಸಲುಗೆಯಿಂದ ಇದ್ದರು. ಆದರೆ, ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಇಬ್ಬರೂ ಮೊದಲಿನಷ್ಟು ಆಪ್ತವಾಗಿಲ್ಲ. ಇಬ್ಬರ ನಡುವೆ ಜಗಳಗಳು ನಡೆಯುತ್ತಲೇ ಇವೆ. ಈಗ ಮತ್ತೊಮ್ಮೆ ದಿವ್ಯಾ-ಮಂಜು ನಡುವೆ ಗಂಭೀರವಾದ ಜಗಳ ನಡೆದಿದೆ.

ಜುಲೈ 28ರ ಎಪಿಸೋಡ್​ನಲ್ಲಿ ಮಂಜು ಹಾಗೂ ದಿವ್ಯಾ ಸುರೇಶ್​ ನಡುವೆ ಸಣ್ಣ ಮಾತಿಗೆ ಆರಂಭವಾದ ಜಗಳ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಇಬ್ಬರೂ ಮಾತನಾಡುವುದನ್ನೇ ನಿಲ್ಲಿಸಿದ್ದರು. ಒಂದು ದಿನ ಕಳೆದರೂ ಇಬ್ಬರೂ ಪರಸ್ಪರ ಮಾತನಾಡಿಕೊಂಡಿಲ್ಲ. ಈ ವಿಚಾರದ ಬಗ್ಗೆ ದಿವ್ಯಾ ಅವರು ವೈಷ್ಣವಿ ಜತೆ ಚರ್ಚೆ ಮಾಡಿದ್ದಾರೆ.

‘ನಾನು ಮಂಜುಗೆ ಏನನ್ನೂ ಹೇಳಿಲ್ಲ. ಆದಾಗ್ಯೂ ಆತ ಜಗಳವಾಡಿದ್ದಾನೆ. ಇಲ್ಲಿಯವರೆಗೆ ನನ್ನನ್ನೂ ಮಾತನಾಡಿಸೋಕೂ ಬಂದಿಲ್ಲ. ಎಷ್ಟೊಂದು ವಿಚಿತ್ರ ಅನಿಸುತ್ತಿದೆ ನನಗೆ ಅದು’ ಎಂದು ವೈಷ್ಣವಿ ಬಳಿ ಅಳಲು ತೋಡಿಕೊಂಡಿದ್ದಾರೆ ದಿವ್ಯಾ  ಸುರೇಶ್​.

ಇದಾದ ಬೆನ್ನಲ್ಲೇ ಮಂಜು ಜತೆ ದಿವ್ಯಾ ಮಾತನಾಡಿದ್ದಾರೆ. ‘ಬಯ್ಯುವಂತಹದ್ದು ನಾನು ಏನು ಮಾಡಿದೆ? ಅದನ್ನೆಲ್ಲ ಕೇಳೋಕೆ ನೀನ್ಯಾರು ಅಂತ ಕೇಳಿದೆ. ಆ ರೀತಿ ಪ್ರಶ್ನೆ ಮಾಡೋ ತರಹ ನಾನೇನು ಹೇಳಿಲ್ಲ. ನಿನ್ನ ಜತೆ ಮಾತಾಡೋದು ಪಾಯಿಂಟ್​ಲೆಸ್​ ಅನಿಸುತ್ತದೆ’ ಎಂದ ದಿವ್ಯಾ ಒಂದು ಕ್ಷಣವೂ ಅಲ್ಲಿ ನಿಲ್ಲದೆ ತೆರಳಿದರು.

ದಿವ್ಯಾ ಸುರೇಶ್​ ಹೆಚ್ಚು ಕ್ಲೋಸ್​ ಆಗಿದ್ದಿದ್ದು ಪ್ರಿಯಾಂಕಾ ತಿಮ್ಮೇಶ್​ಗೆ. ಆದರೆ, ಪ್ರಿಯಾಂಕಾ ಎಲಿಮಿನೇಟ್​ ಆಗಿದ್ದಾರೆ. ಶಮಂತ್​ ಜತೆ ದಿವ್ಯಾ ಚೆನ್ನಾಗಿದ್ದಾರೆ. ಆದರೆ, ಕ್ಲೋಸ್​ನೆಸ್ ಬರುತ್ತಿಲ್ಲ. ಈಗ ಮಂಜು ಜತೆ ಪದೇಪದೇ ಜಗಳವಾಗುತ್ತಿದೆ. ಈಗ ಮಂಜು ಜತೆ ಮಾತನಾಡುವುದಿಲ್ಲ ಎಂದು ದಿವ್ಯಾ ಶಪಥ ಮಾಡಿದ್ದಾರೆ. ಹೀಗಾಗಿ, ಮನೆಯಲ್ಲಿ ದಿನಕಳೆದಂತೆ ಅವರು ಮತ್ತಷ್ಟು ಒಂಟಿಯಾಗುತ್ತಿದ್ದಾರೆ.

ಇದನ್ನೂ ಓದಿ: ದಿವ್ಯಾ ಸುರೇಶ್​ ಮೇಲೆ ನನಗೆ ನಂಬಿಕೆ ಇಲ್ಲ; ಎಲ್ಲರ ಎದುರು ನೇರವಾಗಿ ಹೇಳಿದ ಮಂಜು ಪಾವಗಡ

‘ನೀವು ನಡೆದುಕೊಂಡ ರೀತಿ ನಿಮ್ಮ ವ್ಯಕ್ತಿತ್ವಕ್ಕೆ ಸೂಕ್ತವಲ್ಲ’; ಪಂಚಾಯ್ತಿಯಲ್ಲಿ ವೈಷ್ಣವಿಗೆ ಬುದ್ಧಿ ಹೇಳಿದ ಕಿಚ್ಚ ಸುದೀಪ್​