‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೇಲೆ ತಂದೆ-ತಾಯಿಯ ಪಾದ ಪೂಜೆ ಮಾಡಿದ ಡ್ರೋನ್ ಪ್ರತಾಪ್

ಡ್ರೋನ್ ಪ್ರತಾಪ್ ಅವರು ಮೊದಲು ಸಾಕಷ್ಟು ಟ್ರೋಲ್ ಆಗಿದ್ದರು, ಆದರೆ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಅವರ ಜೀವನ ಬದಲಾಯಿತು. ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಕುಟುಂಬದೊಂದಿಗೆ ಸಂಬಂಧವನ್ನು ಸುಧಾರಿಸಿಕೊಂಡರು. ಕಿಚ್ಚ ಸುದೀಪ್ ಅವರ ಬೆಂಬಲ ಅವರಿಗೆ ದೊಡ್ಡ ಪ್ರೋತ್ಸಾಹವಾಗಿತ್ತು. ಈಗ ಅವರು ಭರ್ಜರಿ ಬ್ಯಾಚುಲರ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ತಂದೆ ತಾಯಿಯ ಪಾದ ತೊಳೆದಿದ್ದಾರೆ.

‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೇಲೆ ತಂದೆ-ತಾಯಿಯ ಪಾದ ಪೂಜೆ ಮಾಡಿದ ಡ್ರೋನ್ ಪ್ರತಾಪ್
ಪ್ರತಾಪ್

Updated on: Apr 26, 2025 | 5:31 PM

ಡ್ರೋನ್ ಪ್ರತಾಪ್ (Drone Prathap) ಅವರು ಈ ಮೊದಲು ಸಾಕಷ್ಟು ಟ್ರೋಲ್ ಆಗಿದ್ದರು. ಇದಕ್ಕೆ ಕಾರಣ ಅವರು ನಡೆದುಕೊಂಡ ರೀತಿ. ಪ್ರತಾಪ್ ತಾವೇ ಡ್ರೋನ್ ತಯಾರಿಸಿದ್ದಾಗಿ ಹೇಳಿದ್ದರು. ಇದನ್ನು ನಂಬಿದ್ದ ಅವರು ಅನೇಕರು ಅವರನ್ನು ಹಾಡಿ ಹೊಗಳಿದರು. ಇದು ಸುಳ್ಳು ಎಂಬುದು ಗೊತ್ತಾಗುತ್ತಿದ್ದಂತೆ ಅವರನ್ನು ತೆಗಳಿದರು. ಆದರೆ, ಬಿಗ್ ಬಾಸ್ ಅವರ ಜೀವನ ಬದಲಿಸಿತು. ಈಗ ಅವರು ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದಾರೆ. ಪ್ರತಾಪ್ ಈ ಹಂತಕ್ಕೆ ಬರಲು ಕಿಚ್ಚ ಸುದೀಪ್ ಕಾರಣ ಎಂದಿದ್ದಾರೆ ಅವರ ತಾಯಿ. ವೇದಿಕೆ ಮೇಲೆ ತಂದೆ-ತಾಯಿಯ ಪಾದ ಪೂಜೆ ಮಾಡಿದ್ದಾರೆ ಪ್ರತಾಪ್.

ಡ್ರೋನ್ ಪ್ರತಾಪ್ ಅವರಿಗೆ ಹೊಸ ಜೀವನ ಕೊಟ್ಟಿದ್ದು ಬಿಗ್ ಬಾಸ್. ಈ ಮೊದಲು ಅವರು ಕುಟುಂಬದ ಜೊತೆ ಸರಿಯಾಗಿ ಸಂಪರ್ಕದಲ್ಲಿ ಇರಲಿಲ್ಲ. ಬಿಗ್ ಬಾಸ್​ಗೆ ಬಂದ ಬಳಿಕ ಪ್ರತಾಪ್ ತಪ್ಪನ್ನು ತಿದ್ದಿಕೊಂಡು ಮನೆಯವರ ಜೊತೆ ಮೊದಲಿನಂತೆ ಮಾತನಾಡಲು ಆರಂಭಿಸಿದರು. ಪ್ರತೀ ಹಂತದಲ್ಲಿ ಕುಗ್ಗಿದಾಗ ಸುದೀಪ್ ಅವರು ಪ್ರತಾಪ್​ಗೆ ಜೋಶ್ ತುಂಬುತ್ತಿದ್ದರು. ಈ ಕಾರಣದಿಂದಲೇ ‘ಬಿಗ್ ಬಾಸ್ ಕನ್ನಡ ಸೀನ್ 10’ರಲ್ಲಿ ಅವರು ರನ್ನರ್ ಅಪ್ ಆದರು.

ಇದನ್ನೂ ಓದಿ
ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನ ಖುಷಿ ಸುದ್ದಿ ಕೊಟ್ಟ ಸೋನಾಕ್ಷಿ-ಜಹೀರ್
ಶ್ರೀನಿಧಿ ಶೆಟ್ಟಿ ಹಾಗೂ ಯಶ್ ಬಗ್ಗೆ ತಪ್ಪು ತಿಳಿದುಕೊಂಡಿದ್ದ ಫ್ಯಾನ್ಸ್
‘ಉಗ್ರ ಸಿಕ್ಕಿದ್ದ, ಕುರಾನ್ ಓದಿಲ್ಲ ಎಂದು ಕಿರುಕುಳ ನೀಡಿದ್ದ’; ನಟಿ ಏಕ್ತಾ
‘ಕೆಜಿಎಫ್ 2’ ಜೋಡಿನ ಬಾಲಿವುಡ್​ನಲ್ಲಿ ಒಟ್ಟಿಗೆ ತರಲು ನಡೆದಿತ್ತು ಪ್ಲ್ಯಾನ್

ಡ್ರೋನ್ ಪ್ರತಾಪ್ ಅವರು ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ ವೀಕ್ ಇದ್ದಿದ್ದರಿಂದ ಇಡೀ ಕುಟುಂಬ ಅಲ್ಲಿಗೆ ಬಂದಿತ್ತು. ಈ ಸಂದರ್ಭದಲ್ಲಿ ಸುದೀಪ್ ಅವರು ಮಾಡಿದ ಸಹಾಯವನ್ನು ಪ್ರತಾಪ್ ತಾಯಿ ನೆನಪಿಸಿಕೊಳ್ಳೋಕೆ ಮರೆಯಲಿಲ್ಲ. ‘ಇದಕ್ಕೆಲ್ಲ ಕಾರಣ ಸುದೀಪ್. ಯಾವಾಗಲೂ ಮರೆಯಲ್ಲ. ಇಲ್ಲಿ ಬರೋಕೆ ಅವರೇ ಕಾರಣ’ ಎಂದು ಪ್ರತಾಪ್ ತಾಯಿ ಹೇಳಿದರು.

ಆ ಬಳಿಕ ಡ್ರೋನ್ ಪ್ರತಾಪ್ ಅವರು ವೇದಿಕೆ ಮೇಲೆ ತಂದೆ-ತಾಯಿಯ ಕಾಲನ್ನು ತೊಳೆದರು. ತಾಯಿ ಕಾಲಿಗೆ ಅರಿಶಿಣ ಕುಂಕುಮ ಹಾಕಿ ಪೂಜಿಸಿದರು. ಕಾಲಿಗೆ ತಲೆ ಒತ್ತಿ ನಮಸ್ಕರಿಸಿದರು. ಈ ಸಂದರ್ಭದ ಪ್ರೋಮೋ ವೈರಲ್ ಆಗಿ ಗಮನ ಸೆಳೆದಿದೆ.

ಇದನ್ನೂ ಓದಿ: ಹೆಲಿಕಾಪ್ಟರ್​​ನಲ್ಲಿ ಅರಿಶಿಣ-ಕುಂಕುಮ ಕೊಟ್ಟು ಪ್ರಪೋಸ್ ಮಾಡಿದ ಡ್ರೋನ್ ಪ್ರತಾಪ್

ಡ್ರೋನ್ ಪ್ರತಾಪ್​ಗೆ ಈಗ ತಪ್ಪಿನ ಅರಿವಾಗಿದೆ. ಎಲ್ಲವನ್ನೂ ಮರೆತು ಅವರು ಹೊಸ ಬಾಳು ಆರಂಭಿಸಿದ್ದಾರೆ. ‘ಬಿಗ್ ಬಾಸ್’ನಲ್ಲಿ ಕೊಂಚ ನಾಚಿಕೆ ಸ್ವಭಾವ ಮಾಡಿಕೊಂಡಿದ್ದ ಅವರು ‘ಭರ್ಜರಿ ಬ್ಯಾಚುಲರ್ಸ್​’ನಲ್ಲಿ ನಾಚಿಕೆ ಬಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:30 pm, Sat, 26 April 25