Drone Prathap: ಹೆಲಿಕಾಪ್ಟರ್‌ನಲ್ಲಿ ಅರಿಶಿಣ-ಕುಂಕುಮ ಕೊಟ್ಟು ಪ್ರಪೋಸ್ ಮಾಡಿದ ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್ ಅವರು ‘ಭರ್ಜರಿ ಬ್ಯಾಚುಲರ್ಸ್ 2’ ಕಾರ್ಯಕ್ರಮದಲ್ಲಿ ಗಗನಾ ಅವರಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಪೋಸಲ್ ಮಾಡಿದ್ದಾರೆ. ಬಿಗ್ ಬಾಸ್‌ನಲ್ಲಿ ಸರಳವಾಗಿದ್ದ ಪ್ರತಾಪ್ ಈಗ ಹೊಸ ಲುಕ್‌ನಲ್ಲಿದ್ದಾರೆ. ಅವರ ಈ ಪ್ರಪೋಸಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .

ಡ್ರೋನ್ ಪ್ರತಾಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿ ಆಗಿದ್ದರು. ಅಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದ ರೀತಿಯೇ ಬೇರೆ. ಸಿಂಪಲ್ ಆಗಿ ಇರುತ್ತಿದ್ದ ಅವರು ಸಾಕಷ್ಟು ಮುಗ್ಧನಂತೆ ನಟಿಸುತ್ತಿದ್ದರು. ಈಗ ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್ 2’ ವೇದಿಕೆ ಮೇಲೆ ಬೇರೆಯದೇ ಪ್ರತಾಪ್ (Drone Prathap) ನೋಡಲು ಸಿಗುತ್ತಿದ್ದಾರೆ. ಈಗ ಪ್ರತಾಪ್ ಅವರು ಗಗನಾಗೆ ಪ್ರಪೋಸ್ ಮಾಡಿದ್ದಾರೆ. ಈ ಸಂದರ್ಭದ ಪ್ರೋಮೋನ ಅವರು ಹಂಚಿಕೊಂಡಿದ್ದಾರೆ. ಆ ಕ್ಷಣ ಹೇಗಿತ್ತು ಎಂಬುದನ್ನು ನೀವೇ ನೋಡಿ.
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಪ್ರಸಾರ ಆರಂಭಿಸಿದೆ. ಜೀ ಕನ್ನಡದಲ್ಲಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಕಾರ್ಯಕ್ರಮ ಪ್ರಸಾರ ಕಾಣುತ್ತಿದೆ. ಒಂದಷ್ಟು ಬ್ಯಾಚುಲರ್ಸ್ಗಳು ಈ ಕಾರ್ಯಕ್ರಮಕ್ಕೆ ಬರುತ್ತಾರೆ. ಅವರಿಗೆ ಸರಿ ಹೊಂದುವ ಹುಡುಗಿಯರನ್ನು ಆಯ್ಕೆ ಮಾಡಲಾಗುತ್ತದೆ. ನಂತರ ಇವರುಗಳು ಒಟ್ಟಾಗಿ ಟಾಸ್ಕ್ ಆಡಬೇಕು. ಡ್ರೋನ್ ಪ್ರತಾಪ್, ಹುಲಿ ಕಾರ್ತಿಕ್, ರಕ್ಷಕ್ ಬುಲೆಟ್ ಸೇರಿದಂತೆ ಅನೇಕರು ‘ಭರ್ಜರಿ ಬ್ಯಾಚುಲರ್ಸ್ 2’ ವೇದಿಕೆ ಏರಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಬಳಿಕ ಮೋಕ್ಷಿತಾ ಮಾಲ್ಡೀವ್ಸ್ಗೆ ಹಾರಿದ್ದು ನಿಜವೇ?
ಡ್ರೋನ್ ಪ್ರತಾಪ್ ಅವರು ‘ಬಿಗ್ ಬಾಸ್’ ಮನೆಯಲ್ಲಿ ಸಿಂಪಲ್ ಆಗಿದ್ದವರು. ಈಗ ಅವರ ಲುಕ್ ಬದಲಾಗಿದೆ. ಅವರ ಹೇರ್ ಸ್ಟೈಲ್ ಬದಲಿಸಿ ಹೊಸ ಲುಕ್ ನೀಡಲಾಗಿದೆ. ಅವರ ಈ ಲುಕ್ ಎಲ್ಲರಿಗೂ ಇಷ್ಟ ಆಗುತ್ತಿದೆ. ಅವರಿಗೆ ಜೊತೆಯಾಗಿ ಗಗನಾ ಸಿಕ್ಕಿದ್ದಾರೆ.
View this post on Instagram
ಗಗನಾ ಅವರನ್ನು ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ ಡ್ರೋನ್ ಪ್ರತಾಪ್. ಹೆಲಿಕಾಪ್ಟರ್ ಮೇಲೆ ಅರಿಷಿಣ-ಕುಂಕುಮ ಕೊಟ್ಟು ಪ್ರಪೋಸ್ ಮಾಡಿದ್ದಾರೆ. ಈ ಮೂಲಕ ಭಿನ್ನವಾಗಿ ಪ್ರಪೋಸ್ ಮಾಡಿದ ಖ್ಯಾತಿ ಅವರಿಗೆ ಸಿಕ್ಕಿದೆ. ಅಲ್ಲದೆ, ವೇದಿಕೆ ಮೇಲೆ ಡ್ರೋನ್ ಪ್ರತಾಪ್ ಅವರು ಗಗನಾಗೆ ಕಾಲ್ಗೆಜ್ಜೆ ತೊಡಿಸಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ನನ್ನನ್ನು ಮಾತ್ರ ಯಾಕೆ ಅರೆಸ್ಟ್ ಮಾಡಿದ್ದಾರೆ? ನ್ಯಾಯ ಕೇಳಿದ ಡ್ರೋನ್ ಪ್ರತಾಪ್
‘ಅವರು ಹಾಗೇನೆ ಬಂಗಾರ’ ಎಂದು ಕೆಲವರು ಹೇಳಿದ್ದಾರೆ. ‘ಡ್ರೋನ್ ಪ್ರತಾಪ್ ಸರ್ಪ್ರೈಸ್ ಕೊಡೋದ್ರಲ್ಲಿ ಎತ್ತಿದ ಕೈ’ ಎಂದು ಕೆಲವರು ಹೇಳಿದ್ದಾರೆ. ಡ್ರೋನ್ ಪ್ರತಾಪ್ ಈ ಮೊದಲು ನೆಗೆಟಿವ್ ಆಗಿ ಹೈಲೈಟ್ ಆಗಿದ್ದರು. ಈಗ ಅವರು ಪಾಸಿಟಿವ್ ಆಗಿ ಸುದ್ದಿ ಆಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:54 am, Thu, 6 March 25







