AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಸ್ತಕ ಇಟ್ಟುಕೊಳ್ಳಲು ಸಹ ಸ್ಥಳವಿಲ್ಲ: ಮನೆ ಕಟ್ಟಿಕೊಳ್ಳಲಾಗದ ಬಗ್ಗೆ ಕವಿ ದೊಡ್ಡರಂಗೇಗೌಡ ಬೇಸರ

Weekend With Ramesh: ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಈ ಶನಿವಾರದ ಅತಿಥಿಯಾಗಿ ಆಗಮಿಸಿದ್ದ ಸಾಹಿತಿ ದೊಡ್ಡರಂಗೇಗೌಡರು, ಇರಲು ಸರಿಯಾದ ಮನೆ ಮಾಡಿಕೊಳ್ಳಲಾಗದೇ ಇರುವ ತಮ್ಮ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಪುಸ್ತಕ ಇಟ್ಟುಕೊಳ್ಳಲು ಸಹ ಸ್ಥಳವಿಲ್ಲ: ಮನೆ ಕಟ್ಟಿಕೊಳ್ಳಲಾಗದ ಬಗ್ಗೆ ಕವಿ ದೊಡ್ಡರಂಗೇಗೌಡ ಬೇಸರ
ದೊಡ್ಡರಂಗೇಗೌಡ
ಮಂಜುನಾಥ ಸಿ.
|

Updated on:May 28, 2023 | 4:54 PM

Share

ವೀಕೆಂಡ್ ವಿತ್ ರಮೇಶ್ (Weekend With Ramesh) ಐದನೇ ಸೀಸನ್​ನ ಈ ವಾರಾಂತ್ಯದ ಶನಿವಾರದ ಅತಿಥಿಯಾಗಿ ಸಾಹಿತಿ, ಕನ್ನಡ ಪ್ರೇಮಿ, ಗೀತ ಸಾಹಿತಿ ದೊಡ್ಡರಂಗೇಗೌಡರು (Doddarangegowda) ಸಾಧಕರ ಕುರ್ಚಿಯನ್ನು ಅಲಂಕರಿಸಿದ್ದರು. ತಮ್ಮ ಬಾಲ್ಯ, ಶಿಕ್ಷಣ, ಹಳ್ಳಿ, ಅಲ್ಲಿಯ ಜೀವನ ತಮ್ಮ ಮೇಲೆ, ತಮ್ಮ ಸಾಹಿತ್ಯದ ಮೇಲೆ ಬೀರಿದ ಪ್ರಭಾವದ ಬಗ್ಗೆ ಮಾತನಾಡಿದ ದೊಡ್ಡರಂಗೇಗೌಡರು ತಮ್ಮ ಇಡೀಯ ಜೀವನವನ್ನು ಮೆಲುಕು ಹಾಕಿದ ಬಳಿಕ ಕೊನೆಯಲ್ಲಿ ತಮಗೊಂದು ಸರಿಯಾದ ಮನೆ ಮಾಡಿಕೊಳ್ಳಲು ಈಗಲೂ ಆಗದೇ ಇರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.

ವೀಕೆಂಡ್ ವಿತ್ ರಮೇಶ್​ನ ಪ್ರತಿ ಎಪಿಸೋಡ್​ನ ಕೊನೆಯಲ್ಲಿ ನಟ ರಮೇಶ್ ಕೇಳುವ ಕೊನೆಯ ಪ್ರಶ್ನೆ, ಧನ್ಯವಾದ ಹೇಳುವುದಾದರೆ ಯಾರಿಗೆ? ಕ್ಷಮೆ ಕೇಳುವುದಾದರೆ ಯಾರಿಗೆ? ಏತಕ್ಕೆ? ಎಂಬುದು. ಅಂತೆಯೇ ದೊಡ್ಡರಂಗೇಗೌಡರಿಗೂ ಇದೇ ಪ್ರಶ್ನೆ ಎದುರಾದಾಗ. ಧನ್ಯವಾದವನ್ನು ತಮ್ಮ ತಾಯಿಯವರಿಗಷ್ಟೆ ಹೇಳಿದರು. ನನ್ನ ತಾಯಿ ನನ್ನ ಗುರುವೂ ಸಹ ಹೌದು. ಆಕೆಯ ಮಾರ್ಗದರ್ಶನದಿಂದಲೇ ನಾನು ಏನನ್ನಾದರೂ ಸಾಧಿಸಲಾಯ್ತು ಎಂದಿದ್ದಾರೆ. ದೊಡ್ಡರಂಗೇಗೌಡರ ತಾಯಿಯ ಹೆಸರು ಅಕ್ಕಮ್ಮ.

ಇನ್ನು ಯಾರಿಗೆ ಕ್ಷಮೆ ಕೇಳಬೇಕು ಎಂಬ ಪ್ರಶ್ನೆ ಬಂದಾಗ. ಭಾವುಕರಾದ ದೊಡ್ಡರಂಗೇಗೌಡರು. ನಾನು ನನ್ನ ಜೀವಮಾನದಲ್ಲಿ ನನ್ನ ಕುಟುಂಬಕ್ಕಾಗಿ ಒಂದು ಸರಿಯಾದ ಮನೆ ಕಟ್ಟಿಸಿಕೊಡಲಾಗಲಿಲ್ಲ. ಈಗಿರುವ ಮನೆಯಲ್ಲಿ ನನ್ನ ಪುಸ್ತಕಗಳನ್ನು ಇಟ್ಟುಕೊಳ್ಳಲು ಸಹ ಸರಿಯಾಗಿ ಜಾಗವಿಲ್ಲ. ನನ್ನ ಬಳಿ ರಾಶಿ ಪುಸ್ತಕಗಳಿವೆ ಅವುಗಳನ್ನು ಇಟ್ಟುಕೊಳ್ಳಲು ಸಹ ಮನೆಯಲ್ಲಿ ಜಾಗವಿಲ್ಲ, ನನ್ನ ಮಗ ಹಾಗೂ ಮನೆಯ ಇತರರು ಆ ಪುಸ್ತಕಗಳನ್ನೇ ಬದಿಗೆ ಸರಿಸಿ ಮಲಗುವ ಸ್ಥಿತಿ ಇದೆ.

ನಾನು ಈವರೆಗೆ ಏಳು ಬಾರಿ ಬಿಡಿಎಗೆ ನಿವೇಶನಕ್ಕಾಗಿ ಅರ್ಜಿ ಹಾಕಿದ್ದೇನೆ ಆದರೆ ಪ್ರತಿಬಾರಿಯೂ ಅದು ರದ್ದಾಗಿದೆ. ಅರ್ಜಿ ಹಾಕಿದ ಬಳಿಕ ಅಲ್ಲಿ ಹೋಗಿ ನಾನು ವಶೀಲಿಬಾಜಿ ಮಾಡಿಲ್ಲವಾದ್ದರಿಂದ ನನಗೆ ಸೈಟು ದೊರಕಿಲ್ಲ. ಸರ್ಕಾರಗಳು ಬರಹಗಾರರಿಗೆ ಸಹಾಯ ಮಾಡಲಿಲ್ಲವಾದರೆ ಬಹಳ ಕಷ್ಟವಾಗುತ್ತದೆ. ಸರ್ಕಾರಗಳು ಬರಹಗಾರರಿಗೆ ನೆರವು ನೀಡಬೇಕು. ನಾನು ನನ್ನ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಅದರಲ್ಲೂ ನನ್ನ ಪತ್ನಿಯನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಆ ಬಗ್ಗೆ ನನಗೆ ಈಗಲೂ ಬೇಸರವಿದೆ ಎಂದಿದ್ದಾರೆ ಹಿರಿಯ ಕವಿ ದೊಡ್ಡರಂಗೇಗೌಡರು.

ಇದನ್ನೂ ಓದಿ:ಕರ್ನಾಟಕದಲ್ಲಿ ಮತ್ತೊಮ್ಮೆ ಗೋಕಾಕ್ ಚಳವಳಿ ಆಗಬೇಕಿದೆ: ಪ್ರೊ. ದೊಡ್ಡರಂಗೇಗೌಡ

1956ರಲ್ಲಿ ಶಿರಾ ತಾಲ್ಲೂಕು ಬರಗೂರಿನಲ್ಲಿ ಜನಿಸಿದ ದೊಡ್ಡರಂಗೇಗೌಡರ ಬಾಲ್ಯ ಕಳೆದಿದ್ದು ಮಧುಗಿರಿ ಬಳಿಯ ಕುರುಬರಹಳ್ಳಿಯಲ್ಲಿ. ಅಕ್ಕಮ್ಮ ಅವರ ತಾಯಿ ಎಂಟು ಮಕ್ಕಳಲ್ಲಿ ದೊಡ್ಡರಂಗೇಗೌಡರು ಸಹ ಒಬ್ಬರು. 1964 ರೈಲ್ವೆ ಮೇಲ್ ಸರ್ವೀಸ್​ನಲ್ಲಿ ಕೆಲಸ ಆರಂಭಿಸಿದ ದೊಡ್ಡರಂಗೇಗೌಡರು ಬಳಿಕ ಎನ್​ಎಲ್ಎನ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 32 ವರ್ಷಗಳ ಕಾಲದ ಸೇವೆ ಸಲ್ಲಿಸಿದರು, ಆರು ವರ್ಷ ಶೇಷಾದ್ರಿಪುರಂ ಕನ್ನಡ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾಗಿ ದುಡಿದರು. ವಿಶೇಷವೆಂದರೆ ಒಮ್ಮೆ ವಿಧಾನಪರಿಷತ್ತಿನ ಸದಸ್ಯರು (ಎಂಎಲ್​ಸಿ) ಸಹ ಆಗಿದ್ದಾರೆ. ಈವರೆಗೆ ಕನ್ನಡ ಸಾಹಿತ್ಯಕ್ಕೆ 114 ಕೃತಿಗಳನ್ನು ನೀಡಿದ್ದಾರೆ. 700ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ರಚಿಸಿದ್ದಾರೆ, 12 ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. ಈ ಸಾಧಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮತ್ತು ಪದ್ಮಶ್ರೀ ಸಹ ಲಭಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Sun, 28 May 23

ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ