Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್ ಅತಿಥಿಗಳು ಇವರೇ

Weekend With Ramesh: ಕಳೆದ ಭಾನುವಾರ ಪ್ರಸಾರವಾಗದೇ ನಿರಾಸೆ ಮೂಡಿಸಿದ್ದ ವೀಕೆಂಡ್ ವಿತ್ ರಮೇಶ್ ಈ ವಾರ ಇಬ್ಬರು ಅತಿಥಿಗಳೊಟ್ಟಿಗೆ ಬಂದಿದೆ. ಅತಿಥಿಗಳ್ಯಾರು ಗುರುತಿಸಬಲ್ಲಿರಾ?

Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್ ಅತಿಥಿಗಳು ಇವರೇ
ವೀಕೆಂಡ್ ವಿತ್ ರಮೇಶ್
Follow us
ಮಂಜುನಾಥ ಸಿ.
|

Updated on: May 26, 2023 | 9:22 PM

ವೀಕೆಂಡ್ ವಿತ್ ರಮೇಶ್ (Weekend With Ramesh) ಐದನೇ ಸೀಸನ್ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದ ಬೆನ್ನಲ್ಲೆ ಕಳೆದ ಭಾನುವಾರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಶನಿವಾರದ ಎಪಿಸೋಡ್​ನಲ್ಲಿ ಸ್ಯಾಂಡಲ್​ವುಡ್​ನ ಜನಪ್ರಿಯ ಗೀತ ಸಾಹಿತಿ ನಾಗೇಂದ್ರ ಪ್ರಸಾದ್ (Nagendra Prasad) ಅವರ ಜೀವನ ಪರಿಚಯಿಸಿದ್ದು ವೀಕೆಂಡ್ ವಿತ್ ರಮೇಶ್, ಭಾನುವಾರ ಪ್ರಸಾರವೇ ಆಗಲಿಲ್ಲ. ಇದು ಹಲವರಿಗೆ ಆಶ್ಚರ್ಯ ತಂದಿತ್ತು. ಮಾತ್ರವಲ್ಲದೆ, ಈ ವಾರವೂ ಸಹ ಬಹಳ ತಡವಾಗಿ ಅತಿಥಿಗಳ ಕುರಿತು ಪ್ರೋಮೋ ಬಿಡುಗಡೆ ಮಾಡಿದೆ.

ಈ ವಾರ ಒಬ್ಬರು ಹೆಸರಾಂತ ಸಾಹಿತಿ ಹಾಗೂ ಮತ್ತೊಬ್ಬರು ಹಿರಿಯ ನಟರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ. ಶನಿವಾರದ ಎಪಿಸೋಡ್​ಗೆ ಸಾಹಿತಿ ದೊಡ್ಡರಂಗೇಗೌಡರು ಅತಿಥಿಯಾಗಿದ್ದರೆ ಭಾನುವಾರದ ಎಪಿಸೋಡ್​ಗೆ ನಟ, ನಿರ್ಮಾಪಕ, ನಿರ್ದೇಶಕ ಜೈ ಜಗದೀಶ್ ಅತಿಥಿಯಾಗಿದ್ದಾರೆ. ಇಬ್ಬರು ಅತಿಥಿಗಳ ಎಪಿಸೋಡ್ ಪ್ರೋಮೋಗಳನ್ನು ಜೀ ಕನ್ನಡ ವಾಹಿನಿ ಈಗಾಗಲೇ ಹಂಚಿಕೊಂಡಿದೆ.

ದೊಡ್ಡರಂಗೇಗೌಡರು ನಾಡಿನ ಹೆಸರಾಂತ ಸಾಹಿತಿಗಳಾಗಿರುವ ಜೊತೆಗೆ ಚಿತ್ರರಂಗದೊಂದಿಗೂ ಗಾಢ ನಂಟು ಹೊಂದಿದ್ದಾರೆ. ಕೆಲವು ಅವಿಸ್ಮರಣೀಯ ಹಾಡುಗಳನ್ನು ದೊಡ್ಡರಂಗೇಗೌಡರು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ನೋಟದಾಗೆ ನಗೆಯ ಬೀರಿ, ಅಲೆಮನೆ ಸಿನಿಮಾದ ನಮ್ಮೂರ ಮಂದಾರ ಹೂವೆ, ತೇರಾ ಏರಿ ಅಂಬರದಾಗೆ ಹಾಡುಗಳು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಹಾಡುಗಳನ್ನು ದೊಡ್ಡರಂಗೇಗೌಡರು ಬರೆದಿದ್ದಾರೆ. 10 ಸಿನಿಮಾಕ್ಕೆ ಸಂಭಾಷಣೆ ಹಾಗೂ 100ಕ್ಕೂ ಹೆಚ್ಚು ಕಿರು-ಧಾರಾವಾಹಿಗಳಿಗೆ ಚಿತ್ರಕತೆ ಬರೆದಿದ್ದಾರೆ.

ಪದ್ಮಶ್ರೀ ಪುರಸ್ಕೃತರೂ ನಾಗಿರುವ ದೊಡ್ಡರಂಗೇಗೌಡರು ವೀಕೆಂಡ್ ವಿತ್ ರಮೇಶ್​ ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯ, ಶಿಕ್ಷಣ, ಸಾಹಿತ್ಯ ರಚನೆ, ಕನ್ನಡದ ಮೇಲಿನ ಪ್ರೇಮ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ ದೊಡ್ಡರಂಗೇಗೌಡರು ಹಾಗೂ ಇನ್​ಫೋಸಿಸ್​ನ ನಾರಾಯಣಮೂರ್ತಿಯರು ಶಾಲಾ ದಿನಗಳಲ್ಲಿ ಸಹಪಾಠಿಗಳಾಗಿದ್ದವರು. ಈ ಬಗ್ಗೆಯೂ ದೊಡ್ಡರಂಗೇಗೌಡರು ಮಾತನಾಡಿದ್ದಾರೆ.

ಇನ್ನು ಭಾನುವಾರದ ಅತಿಥಿ ಜೈ ಜಗದೀಶ್, ಕನ್ನಡದ ಜನಪ್ರಿಯ ನಟ. ಪುಟ್ಟಣ್ಣ ಕಣಗಾಲ್​ರಿಂದ 1976 ರಲ್ಲಿ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟ ಜೈ ಜಗದೀಶ್ ಐದು ದಶಕಗಳಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಾಯಕನಾಗಿ, ಪೋಷಕ ನಟನಾಗಿ, ವಿಲನ್ ಆಗಿ ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಿರುವ ಜೈ ಜಗದೀಶ್, ಶಿವರಾಜ್ ಕುಮಾರ್ ನಟನೆಯ ಭೂಮಿ ತಾಯಿ ಚೊಚ್ಚಲ ಮಗ ಸಿನಿಮಾ ಮೂಲಕ ನಿರ್ಮಾಣಕ್ಕೂ ಕೈ ಹಾಕಿದರು. ಕೆಲವು ಸಿನಿಮಾಗಳ ನಿರ್ದೇಶನವನ್ನೂ ಜೈ ಜಗದೀಶ್ ಮಾಡಿದ್ದಾರೆ. ಅವರ ನಟನೆಯ ಬಂಧನ, ಬೆಂಕಿಯಲ್ಲಿ ಅರಳಿದ ಗುಲಾಬಿ, ಮದುವೆ ಮಾಡು ತಮಾಷೆ ನೋಡಿ, ಗರ್ಜನೆ ಇನ್ನೂ ಹಲವು ಸಿನಿಮಾಗಳು ಕನ್ನಡ ಸಿನಿ ಪ್ರೇಮಿಗಳ ನೆನಪಿನಲ್ಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್