ವೈಲ್ಡ್​ ಕಾರ್ಡ್ ಸ್ಪರ್ಧಿಗಳಿಗೆ ಹೆದರಿದ ಗಗನ್? ಬ್ಯಾಕ್​ಗ್ರೌಂಡ್ ವೆರಿಫಿಕೇಶನ್ ಮಾಡಿದ ಚಿನ್ನಪ್ಪ

ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಟವಾಡುತ್ತಿರುವ ನಟ ಗಗನ್ ಚಿನ್ನಪ್ಪ ಅವರಿಗೆ ಹೊಸದಾಗಿ ವೈಲ್ಡ್‌ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳಿಂದ ಆತಂಕ ಶುರುವಾಗಿದೆ. ಕುಮಾರಿ ಹಾಗೂ ಲಕ್ಷ್ಮಿ ಗೌಡ ಅವರ ಆಗಮನದಿಂದ ಗಗನ್ ಎದುರಾಳಿಗಳ ಬಗ್ಗೆ ಚಿಂತಿತರಾಗಿ ಧನುಷ್ ಬಳಿ ಬ್ಯಾಕ್‌ಗ್ರೌಂಡ್ ವಿಚಾರಿಸುತ್ತಿದ್ದಾರೆ.

ವೈಲ್ಡ್​ ಕಾರ್ಡ್ ಸ್ಪರ್ಧಿಗಳಿಗೆ ಹೆದರಿದ ಗಗನ್? ಬ್ಯಾಕ್​ಗ್ರೌಂಡ್ ವೆರಿಫಿಕೇಶನ್ ಮಾಡಿದ ಚಿನ್ನಪ್ಪ
ಗಗನ್-ಕುಮಾರಿ

Updated on: Oct 13, 2026 | 7:01 AM

ಮುಖ್ಯಾಂಶಗಳು

  • ದೊಡ್ಮನೆಗೆ ಕಾಲಿಟ್ಟ ಹೊಸ ವೈಲ್ಡ್‌ಕಾರ್ಡ್ ಸ್ಪರ್ಧಿಗಳು
  • ಗಗನ್ ಚಿನ್ನಪ್ಪ ಮನಸ್ಸಿನಲ್ಲಿ ಮೂಡಿದ ಆತಂಕದ ನೆರಳು
  • ಧನುಷ್ ಬಳಿ ಸ್ಪರ್ಧಿಗಳ ಬಗ್ಗೆ ವಿಚಾರಿಸಿದ ಗಗನ್

ನಟ ಗಗನ್ ಚಿನ್ನಪ್ಪ ಅವರು ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಟ ಆಡುತ್ತಿದ್ದಾರೆ. ಆಗಾಗ ಅವರ ಆಟ ಹಳಿ ತಪ್ಪಿದರೂ ಮತ್ತೆ ಅವರು ಅದನ್ನು ಸರಿ ಮಾಡಿಕೊಂಡು ಮುಂದಕ್ಕೆ ಹೋಗುತ್ತಿದ್ದಾರೆ. ಈಗ ಬಿಗ್ ಬಾಸ್ ಮನೆಗೆ ಬಂದ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಬಗ್ಗೆ ಅವರಿಗೆ ಭಯ ಶುರುವಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಅವರು ಧನುಷ್ ಬಳಿಕ ಕೇಳಿದ ಪ್ರಶ್ನೆ ಹೀಗೊಂದು ಅನುಮಾನ ಹುಟ್ಟುಹಾಕಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಈಗಾಗಲೇ ಸೋನಿಕಾ, ಪ್ರಶಾಂತ್ ಹಾಗೂ ಗಾನವಿ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅವರ ಆಟ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿನ ಬದಲಾವಣೆ ಏನನ್ನೂ ತಂದಿಲ್ಲ. ಈ ಹಿನ್ನೆಲೆಯಲ್ಲಿ ಅಗ್ನಿಪರೀಕ್ಷೆಯಲ್ಲಿ ಆಡಿ ಗಮನ ಸೆಳೆದಿದ್ದ ಕುಮಾರಿ ಹಾಗೂ ಲಕ್ಷ್ಮಿ ಗೌಡ ಅವರನ್ನು ಬಿಗ್ ಬಾಸ್ ಮನೆಗೆ ಕರೆತರಲಾಗಿದೆ. ಇವರು ಬರುತ್ತಿದ್ದಂತೆ ಮನೆಗೆ ಹೊಸ ಹುಮ್ಮಸ್ಸು ಬಂದಿದೆ.

ಅಕ್ಟೋಬರ್ 12ರ ಸಂಚಿಕೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ದೊಡ್ಮನೆ ಪ್ರವೇಶ ಮಾಡಿದರು. ಕುಮಾರಿ ಅವರು ತಮ್ಮ ಮಾತಿನ ಮೂಲಕ ಗಮನ ಸೆಳೆದರು. ಎಲ್ಲರ ಮುಖದಲ್ಲೂ ನಗು ತರಿಸಿದರು. ಇದನ್ನು ನೋಡಿ ಗಗನ್ ಅವರು ಟೆನ್ಷನ್ ಆಗಿದ್ದಾರೆ. ಧನುಷ್ ಬಳಿ ಅವರ ಬಗ್ಗೆ ವಿಚಾರಿಸಿದ್ದಾರೆ.

ಇದನ್ನೂ ಓದಿ: ‘ಫೇವರಿಸಂ ಮಾಡಲ್ಲ’; ಬಿಗ್ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ತಾಂಡವ್-ಗಗನ್​ಗೆ ಕಿಚ್ಚ ಸುದೀಪ್ ಕ್ಲಾಸ್

‘ಕುಮಾರಿ ಹಾಗೂ ಲಕ್ಷ್ಮಿ ಅವರು ಹೇಗೆ? ಚೆನ್ನಾಗಿ ಟಾಸ್ಕ್ ಆಡುತ್ತಾರಾ’ ಎಂದು ಗಗನ್ ಅವರು ಧನುಷ್ ಬಳಿ ಕೇಳಿದರು. ‘ಹೌದು, ಚೆನ್ನಾಗಿ ಟಾಸ್ಕ್ ಆಡುತ್ತಾರೆ’ ಎಂದು ಧನುಷ್ ಉತ್ತರ ಕೊಟ್ಟರು. ಆ ಬಳಿಕ ‘ಎಲ್ಲರಿಗೂ ಅವರು ಗೌರವ ಕೊಡುತ್ತಾರಾ’ ಎಂದು ಕೇಳಿದರು. ಆಗ ಧನುಷ್, ‘ಕುಮಾರಿ ತುಂಬಾ ಮುಗ್ಧೆ. ಎಲ್ಲರನ್ನೂ ಗೌರವಿಸುತ್ತಾರೆ’ ಎಂದು ಪಾಸಿಟಿವ್ ಉತ್ತರ ಕೊಟ್ಟರು. ಗಗನ್ ಅವರು ಬಿಗ್ ಬಾಸ್ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಹೀಗಾಗಿ, ಕುಮಾರಿ ಹಾಗೂ ಲಕ್ಷ್ಮಿ ಅವರು ದೊಡ್ಡ ಮಟ್ಟದಲ್ಲಿ ತಮಗೆ ಎದುರಾಳಿ ಆಗುತ್ತಾರಾ ಎಂಬುದನ್ನು ಅವರು ಪರೀಕ್ಷಿಸಿಕೊಂಡಂತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us