AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಫೇವರಿಸಂ ಮಾಡಲ್ಲ’; ಬಿಗ್ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ತಾಂಡವ್-ಗಗನ್​ಗೆ ಕಿಚ್ಚ ಸುದೀಪ್ ಕ್ಲಾಸ್

ಬಿಗ್ ಬಾಸ್ ಶೋ ನಲ್ಲಿ ಫೇವರಿಸಂ ನಡೆಯುತ್ತದೆ ಎಂದು ಆರೋಪಿಸಿ ಬಿಗ್ ಬಾಸ್ ಬಗ್ಗೆ ಕೀಳಾಗಿ ಮಾತನಾಡಿದ್ದ ಸ್ಪರ್ಧಿಗಳಾದ ತಾಂಡವ್ ಹಾಗೂ ಗಗನ್ ಅವರನ್ನು ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅವರ ಎಲ್ಲಾ ಅನುಮಾನಗಳಿಗೆ ಸ್ಪಷ್ಟವಾದ ಉತ್ತರಗಳನ್ನು ನೀಡಿ ಸ್ಪಷ್ಟನೆ ಕೊಟ್ಟರು.

‘ಫೇವರಿಸಂ ಮಾಡಲ್ಲ’; ಬಿಗ್ ಬಾಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ತಾಂಡವ್-ಗಗನ್​ಗೆ ಕಿಚ್ಚ ಸುದೀಪ್ ಕ್ಲಾಸ್
ಬಿಗ್ ಬಾಸ್ Image Credit source: Colors Kannada
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 10, 2026 | 10:15 PM

Share

ಮುಖ್ಯಾಂಶಗಳು

  • ಬಿಗ್ ಬಾಸ್ ಫೇವರಿಸಂ ಆರೋಪ
  • ತಾಂಡವ್-ಗಗನ್ ವಿರುದ್ಧ ಕಿಡಿಕಾರಿದ ಸುದೀಪ್
  • ಸುದೀಪ್ ಖಡಕ್ ಮಾತುಗಳು

ಬಿಗ್ ಬಾಸ್ ಶೋ ನಲ್ಲಿ ‘ಫೇವರಿಸಂ’ ಮಾಡಲಾಗುತ್ತದೆ ಎಂದು ಸ್ಪರ್ಧಿಗಳಾದ ಗಗನ್ ಹಾಗೂ ತಾಂಡವ್ ಮಾತನಾಡಿಕೊಂಡಿದ್ದರು. ಈ ವಿಷಯ ವೀಕೆಂಡ್ ವೀಕ್ಷಕರ ಮುಂದೆ ಚರ್ಚೆಗೆ ಬಂದಿದ್ದು, ಬಿಗ್ ಬಾಸ್ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಕಿಚ್ಚ ಸುದೀಪ್ ಅವರು ಇಬ್ಬರನ್ನೂ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ವಿವಾದಕ್ಕೆ ಕಾರಣವೇನು?

ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಂಗೀತಾ ಅವರನ್ನು ಕೊನೆಯದಾಗಿ ಕಳುಹಿಸಲಾಗಿತ್ತು. ಇದನ್ನು ಪ್ರಶ್ನಿಸಿದ ತಾಂಡವ್ ಹಾಗೂ ಗಗನ್, ಬಿಗ್ ಬಾಸ್ ನಿರ್ಮಾಣ ತಂಡವು ಕೆಲವರಿಗೆ ಮಾತ್ರ ‘ಫೇವರ್’ ಮಾಡುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಇವರು ಮಾತನಾಡಿದ ವೀಡಿಯೊ ತುಣುಕನ್ನು (VT) ಸುದೀಪ್ ಪ್ರದರ್ಶಿಸಿ ಪ್ರಶ್ನಿಸಿದರು.

ಸುದೀಪ್ ಅವರ ಖಡಕ್ ಮಾತುಗಳು:

‘ಬಿಗ್ ಬಾಸ್ ಫೇವರಿಸಂ ಮಾಡುತ್ತದೆಯೇ? ಇವತ್ತಿಂದ ಫೇವರಿಸಂ ಮಾಡೋಣ್ವಾ? ನಮಗೇನೂ ಆಗಬೇಕಾಗಿಲ್ಲ, ಇದು ಕೇವಲ ಒಂದು ಶೋ. ನಾವು ಯಾರಿಗಾದರೂ ಫೇವರ್ ಮಾಡಬೇಕು ಅಂದ್ರೆ ಅಷ್ಟು ಮೂರ್ಖರಂತೆ ಗೊತ್ತಾಗುವ ಹಾಗೆ ಮಾಡ್ತೀವಾ? ಯಾರು ಬೇಕಾದರೂ ಗೆಲ್ಲಲಿ ಎಂದು ಬಂದಿರುವಾಗ ನಮಗೆ ಫೇವರಿಸಂ ಮಾಡುವ ಅವಶ್ಯಕತೆ ಏನಿದೆ? ಈ ಹಿಂದೆ ಗೆದ್ದವರಿಗೂ ನಾವು ಹೀಗೆಯೇ ಮಾಡಿದ್ದೇವಾ? ಅವರು ಸೋತ್ರೆ ಇವರೇ ಸೋಲಿಸಿದರು ಎನ್ನುತ್ತೀರಿ, ಅದೇ ಗೆದ್ರೆ ಮಾತ್ರ ನಾವು ಮಾಡಿದೆವು ಎನ್ನುತ್ತೀರಲ್ಲ’ ಎಂದು ಸುದೀಪ್ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ‘ತಿದ್ದೋದಲ್ಲ, ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಮಯ’; ಬಿಗ್ ಬಾಸ್ ವೇದಿಕೆ ಮೇಲೆ ಗುಡುಗಿದ ಸುದೀಪ್

ಉಸ್ತುವಾರಿ ಜವಾಬ್ದಾರಿಯ ಸ್ಪಷ್ಟನೆ

‘ಆಸಿಯಾ ಅವರಿಗೆ ಉಸ್ತುವಾರಿ ಜವಾಬ್ದಾರಿ ಯಾಕೆ ಕೊಟ್ರಿ ಎಂದು ನೀವು ಪ್ರಶ್ನಿಸಿದ್ದೀರಲ್ಲ, ಅದಕ್ಕೆ ಕಾರಣ ಇಲ್ಲಿದೆ ಕೇಳಿ. ಇಲ್ಲಿಯವರೆಗೆ ಒಟ್ಟು 21 ಟಾಸ್ಕ್‌ಗಳು ನಡೆದಿವೆ. ಇದರಲ್ಲಿ ಮಂಜು 6 ಟಾಸ್ಕ್‌ಗಳಲ್ಲಿ ಹಾಗೂ ಗಗನ್ 4 ಟಾಸ್ಕ್‌ಗಳಲ್ಲಿ ಉಸ್ತುವಾರಿಯಾಗಿದ್ದರು. ಆದರೆ, ಈವರೆಗೆ ನಾಮಿನೇಟ್ ಆಗದೇ ಉಳಿದುಕೊಂಡವರು ಸಂಗೀತಾ ಹಾಗೂ ಆಸಿಯಾ. ಈ ಪೈಕಿ ಆಸಿಯಾಗೆ ಇದುವರೆಗೆ ಯಾವುದೇ ಅವಕಾಶ ಸಿಕ್ಕಿರಲಿಲ್ಲ, ಹಾಗಾಗಿ ಅವರಿಗೆ ಆ ಜವಾಬ್ದಾರಿ ನೀಡಲಾಯಿತು’ ಎಂದು ಸುದೀಪ್ ಸ್ಪಷ್ಟನೆ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ