Vanshika: ‘ಗಿಚ್ಚಿ ಗಿಲಿಗಿಲಿ’ ಶೋ ಗೆದ್ದ ಬಳಿಕ ವಂಶಿಕಾ-ಶಿವು ಮೊದಲ ರಿಯಾಕ್ಷನ್​

| Updated By: ಮದನ್​ ಕುಮಾರ್​

Updated on: Sep 20, 2022 | 8:44 AM

Gicchi Gili Gili Winner: ಮಾಸ್ಟರ್​ ಆನಂದ್​ ಪುತ್ರಿ ವಂಶಿಕಾ ನಟನೆಗೆ ಎಲ್ಲರೂ ಮನ ಸೋತಿದ್ದಾರೆ. ‘ಗಿಚ್ಚಿ ಗಿಲಿಗಿಲಿ’ ಶೋ ಗೆಲ್ಲಿಸಿದ ಎಲ್ಲರಿಗೂ ಆಕೆ ಪ್ರೀತಿಭರಿತವಾಗಿ ಧನ್ಯವಾದ ಅರ್ಪಿಸಿದ್ದಾಳೆ.

Vanshika: ‘ಗಿಚ್ಚಿ ಗಿಲಿಗಿಲಿ’ ಶೋ ಗೆದ್ದ ಬಳಿಕ ವಂಶಿಕಾ-ಶಿವು ಮೊದಲ ರಿಯಾಕ್ಷನ್​
ವಂಶಿಕಾ, ಶಿವು
Follow us on

‘ಕಲರ್ಸ್​ ಕನ್ನಡ’ (Colors Kannada) ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ‘ಗಿಚ್ಚಿ ಗಿಲಿಗಿಲಿ’ (Gicchi Gili Gili) ಶೋ ಅಂತ್ಯವಾಗಿದೆ. ಈ ಕಾರ್ಯಕ್ರಮದ ಫಿನಾಲೆಯಲ್ಲಿ ವಂಶಿಕಾ ಅಂಜನಿ ಕಶ್ಯಪ್ (Vanshika)​ ಹಾಗೂ ಶಿವು ವಿನ್​ ಆಗಿದ್ದಾರೆ. 5 ತಿಂಗಳ ಕಾಲ ಈ ಶೋ ನಡೆದುಬಂತು. ಟ್ರೋಫಿ ಗೆದ್ದ ಬಳಿಕ ವಂಶಿಕಾ ಮೊದಲ ರಿಯಾಕ್ಷನ್​ ನೀಡಿದ್ದಾಳೆ. ಕಿರುತೆರೆ ಮೂಲಕ ಆಕೆಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿದೆ. ಅವಳ ಚುರುಕುತನಕ್ಕೆ ಎಲ್ಲರೂ ಬೆರಗಾಗಿದ್ದಾರೆ. ‘ಈ ಶೋ ಗೆದ್ದಿದ್ದು ತುಂಬ ಖುಷಿ ಆಗಿದೆ’ ಎಂದು ಆಕೆ ನಗು ಚೆಲ್ಲಿದ್ದಾಳೆ. ಶಿವು ಜೊತೆ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದಿದ್ದ ವಂಶಿಕಾ, ತನ್ನ ಮಾತುಗಳನ್ನು ಹಂಚಿಕೊಂಡಿದ್ದಾಳೆ. ನಿರ್ಣಾಯಕರಾದ ಸೃಜನ್​ ಲೋಕೇಶ್​, ಸಾಧು ಕೋಕಿಲ ಮತ್ತು ಶ್ರುತಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ ಶಿವು.

ಅನೇಕ ಸ್ಕಿಟ್​ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ವಂಶಿಕಾ ಹಾಗೂ ಶಿವು ವಿನ್​ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಶೋಗೆ ಮೊದಲು ಮಂಜು ಪಾವಗಡ ಅವರು ನಿರೂಪಕನಾಗಿದ್ದರು. ನಂತರ ನಿರಂಜನ್​ ದೇಶಪಾಂಡೆ ಬಂದರು. 10 ಜೋಡಿಗಳಾಗಿ 20 ಕಲಾವಿದರು ಇದರಲ್ಲಿ ಪರ್ಫಾರ್ಮೆನ್ಸ್​ ನೀಡಿ ಗಮನ ಸೆಳೆದಿದ್ದರು. ಅಂತಿಮವಾಗಿ ಶಿವು-ವಂಶಿಕಾ ಜೋಡಿಗೆ ‘ಗಿಚ್ಚಿ ಗಿಲಿಗಿಲಿ’ ಟ್ರೋಫಿ ಸಿಕ್ಕಿತು.

ಇದನ್ನೂ ಓದಿ
ಕಿರುತೆರೆಯಿಂದ ಹಿರಿತೆರೆಗೆ ಮಾಸ್ಟರ್ ಆನಂದ್ ಮಗಳು ವಂಶಿಕಾ; ಮಾತಿನ ಮಲ್ಲಿಗೆ ಸಿನಿಮಾ ಆಫರ್
‘ನನ್ನಮ್ಮ ಸೂಪರ್​ ಸ್ಟಾರ್​’ ವಿನ್ನರ್​ ವಂಶಿಕಾ-ಯಶಸ್ವಿನಿ; ಟ್ರೋಫಿ ಜೊತೆ ಸಿಕ್ಕಿರುವ ಬಹುಮಾನದ ಹಣ ಎಷ್ಟು?
ರಶ್ಮಿಕಾ ರೀತಿಯಲ್ಲಿ ಸೂಪರ್ ಆಗಿ​ ಡಾನ್ಸ್ ಮಾಡಿದ ವಂಶಿಕಾ; ‘ಪುಷ್ಪ ಪಾರ್ಟ್​ 10’ನಲ್ಲಿ ನೀನೇ ಇರ್ತೀಯಾ ಎಂದ ಸೃಜನ್
‘ಮಗಳು ವಂಶಿಕಾಳಿಂದ ಜನರು ನನ್ನನ್ನು ಮತ್ತೆ ಪ್ರೀತಿಸುತ್ತಿದ್ದಾರೆ’; ಮಾಸ್ಟರ್​ ಆನಂದ್ ಭಾವುಕ ನುಡಿ

ಮಾಸ್ಟರ್​ ಆನಂದ್​ ಪುತ್ರಿ ವಂಶಿಕಾ ನಟನೆಗೆ ಎಲ್ಲರೂ ಮನ ಸೋತಿದ್ದಾರೆ. ಶೋ ಗೆಲ್ಲಿಸಿದ ಎಲ್ಲರಿಗೂ ಆಕೆ ಪ್ರೀತಿಭರಿತವಾಗಿ ಧನ್ಯವಾದ ಅರ್ಪಿಸಿದ್ದಾಳೆ. ‘ಲವ್​ ಯೂ..’ ಎನ್ನುತ್ತ ತನ್ನ ಅಭಿಮಾನಿಗಳಿಗೆ ಆಕೆ ಫ್ಲೈಯಿಂಗ್​ ಕಿಸ್​ ನೀಡಿದ್ದಾಳೆ. ಕನ್ನಡದ ಕಿರುತೆರೆಯಲ್ಲಿ ವಂಶಿಕಾಗೆ ಇದು ಎರಡನೇ ಗೆಲುವು. ಈ ಹಿಂದೆ ‘ನನ್ನಮ್ಮ ಸೂಪರ್​ ಸ್ಟಾರ್​’ ಶೋನಲ್ಲೂ ಆಕೆ ವಿನ್ನರ್​ ಆಗಿದ್ದಳು. ಆ ಶೋ ಮೂಲಕ ಆಕೆಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತ್ತು. ನಂತರ ‘ಗಿಚ್ಚಿ ಗಿಲಿ ಗಿಲಿ’ ಕಾರ್ಯಕ್ರಮದಲ್ಲೂ ವಂಶಿಕಾ ಎಲ್ಲರ ಮನ ಗೆದ್ದಳು.

ಒಟ್ಟಾರೆ ಈ ರಿಯಾಲಿಟಿ ಶೋ ಜರ್ನಿ ಹೇಗಿತ್ತು? ರಿಹರ್ಸಲ್​ ನಡೆಯುವಾಗ ವಂಶಿಕಾ ಎಷ್ಟು ತರಲೆ ಮಾಡುತ್ತಿದ್ದಳು? ತಮ್ಮ ಸ್ಕಿಟ್​ ಆಯ್ಕೆ ಯಾವ ರೀತಿ ಇರುತ್ತಿತ್ತು.. ಎಂಬಿತ್ಯಾದಿ ವಿಷಯಗಳ ಬಗ್ಗೆ ಶಿವು ಅವರು ಲೈವ್​ ಬಂದು ಮಾತನಾಡಿದ್ದಾರೆ. ಶೋ ಗೆದ್ದ ಖುಷಿಗೆ ವಂಶಿಕಾ ಕುಣಿದು ಕುಪ್ಪಳಿಸಿದ್ದಾಳೆ. ಈಗ ಆಕೆಗೆ ಸಿನಿಮಾ ಅವಕಾಶಗಳು ಹರಿದು ಬರುತ್ತಿವೆ. ಬಾಲ ಕಲಾವಿದೆಯಾಗಿ ಅವಳಿಗೆ ಸಖತ್​ ಡಿಮ್ಯಾಂಡ್​ ಸೃಷ್ಟಿ ಆಗಿದೆ. ‘ವಂಶಿಕಾಳದ್ದು ವಯಸ್ಸಿಗೂ ಮೀರಿದ ಪ್ರತಿಭೆ’ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:42 am, Tue, 20 September 22