
ಗಿಲ್ಲಿ ನಟ ಅವರು ಜೀ ಕನ್ನಡದಲ್ಲಿ (Zee Kannada) ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಜೀ ಕನ್ನಡ ಶೋಗಳಲ್ಲಿ ಪ್ರಾಪರ್ಟಿ ಕಾಮಿಡಿಯನ್ ಆಗಿ ಫೇಮಸ್ ಆಗಿದ್ದಾರೆ. ಅಂದರೆ, ಅವಕಾಶ ಸಿಕ್ಕಾಗ ಶೋಗಳ ಮೇಲೆ ಬಂದು ಕಾಮಿಡಿ ಮಾಡಿ ಹೋಗುತ್ತಾರೆ. ಈಗ ಅವರು ಜೀ ಕನ್ನಡದ ‘ಸರಿಗಮಪ’ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ವೇದಿಕೆ ಮೇಲೆ ಅವರು ಅನುಶ್ರೀಗೆ ಉಂಗುರ ಹಾಕಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.
ಗಿಲ್ಲಿ ನಟ ಅವರ ಜಿನವಾದ ಹೆಸರು ನಟರಾಜ್. ಗಿಲ್ಲಿ ಅವರು ಹುಟ್ಟಿ ಬೆಳೆದಿದ್ದು ಮಂಡ್ಯದ ಮಳವಳ್ಳಿಯಲ್ಲಿ. ಅಲ್ಲಿನ ಮಟದಪುರ ಅವರ ಊರು. ಅವರು ರೈತ ಹಿನ್ನೆಲೆಯಿಂದ ಬಂದವರು ಎಂಬುದು ಅನೇಕರಿಗೆ ಗೊತ್ತೇ ಇಲ್ಲ. ಎಸ್ಎಸ್ಎಲ್ಸಿ ಪಾಸ್ ಮಾಡಿದ ಬಳಿಕ ಅವರು ಐಟಿಐ ಓದಿದರು. ಡೈಲಾಗ್ಗಳನ್ನು ಹೇಳಿಕೊಂಡು, ಅದರಲ್ಲೂ ಲವ್ ಸಂಬಂಧಿತ ಡೈಲಾಗ್ನ ಹೇಳಿ ಫೇಮಸ್ ಆದವರು ಗಿಲ್ಲಿ ನಟ. ಅವರು ಈಗ ಬೆಂಗಳೂರಿನಲ್ಲಿ ಇದ್ದಾರೆ.
ಇತ್ತೀಚೆಗೆ ಸರಿಗಮಪ ವೇದಿಕೆ ಏರಿದ್ದಾರೆ. ಸಿಂಧನೂರಿನಲ್ಲಿ ಗಿಲ್ಲಿ ಅವರು ವೇದಿಕೆ ಏರಿದ್ದಾರೆ. ಈ ವೇದಿಕೆ ಮೇಲೆ ಅವರು ಅನುಶ್ರೀಗೆ ರಿಂಗ್ ಹಾಕಿದ್ದಾರೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ‘ಮೇ ಐ ಕಮಿನ್’ ಎನ್ನುತ್ತಾ ಬಂದಿದ್ದಾರೆ ಗಿಲ್ಲಿ ನಟ. ಅವರು ಜನರ ಮಧ್ಯೆಯಿಂದ ಎದ್ದು ಬಂದಿದ್ದಾರೆ.
ಇದನ್ನೂ ಓದಿ: ಜೀ ಕನ್ನಡದ ಹೊಸ ಧಾರಾವಾಹಿಗೆ ನಾಯಕಿ ಆದ ನಮ್ರತಾ ಗೌಡ
‘ಇದೇನು’ ಎಂದು ರಿಂಗ್ ತೋರಿಸಿದರು ಗಿಲ್ಲಿ ನಟ. ರಿಂಗ್ ಎಂದರು ಅನುಶ್ರೀ. ‘ಆ್ಯಂಕರ್ಗೆ ರಿಂಗ್ ಹಾಕಿದೆ. ಆ್ಯಂಕರಿಂಗ್ ಆಯ್ತು’ ಎಂದರು ಗಿಲ್ಲಿ. ‘ಕಷ್ಟಪಟ್ಟು ಹೈಸ್ಕೂಲ್ ಪಾಸ್ ಮಾಡಿದೆ. ಬೆಂಗಳೂರಿಗೆ ಬರೋಕೆ ಅಪ್ಪ ಅಮ್ಮನ ಫೇಸ್ ಮಾಡಿ, ಬಾಡಿಗೆ ಮನೆಗೆ ರೆಂಟ್ ಕಟ್ಟೋಕೆ ಒದ್ದಾಡಿ, ನಿತ್ಯ ಸಮಸ್ಯೆ ಜೊತೆ ಗುದ್ದಾಡಿ, ಕೆಲಸ ಇಲ್ಲದೆ ಒದ್ದಾಡಿ, ಜೀ ಕನ್ನಡ ಆಡಿಷನ್ಗೆ ಕ್ಯೂ ನಿಂತು, ಕಾಮಿಡಿ ಶೋನಲ್ಲಿ ಕಾಮಿಡಿ ಮಾಡಕಾಗ್ದೆ, ಡ್ಯಾನ್ಸ್ ಶೋನಲ್ಲಿ ಡ್ಯಾನ್ಸ್ ಮಾಡಕಾಗದೆ ನಿಮ್ಮನ್ನು ಗಾಡ್ ಮದರ್ ಆಗಿ ನಿಮ್ಮನ್ನು ತೆಗೆದುಕೊಂಡ ನನಗೆ ಆ್ಯಂಕರಿಂಗ್ ಬರಲ್ವ’ ಎಂದು ಗಿಲ್ಲಿ ನಟ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.