‘ಗಿಣಿರಾಮ’ ಸಂಭಾವನೆ ರಿವೀಲ್ ಮಾಡಿದ ನಟಿ ನಯನಾ; ಇಷ್ಟು ಕಡಿಮೆಯಾ?

| Updated By: ರಾಜೇಶ್ ದುಗ್ಗುಮನೆ

Updated on: Apr 07, 2025 | 12:52 PM

ಗಿಣಿರಾಮ ಧಾರಾವಾಹಿಯ ನಟಿ ನಯನಾ ನಾಗರಾಜ್ ಅವರ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಅವರ ಕಡಿಮೆ ಸಂಭಾವನೆ, ವೈಯಕ್ತಿಕ ವೆಚ್ಚಗಳು, ಮತ್ತು ಧಾರಾವಾಹಿಯಿಂದ ಬ್ಯಾನ್ ಆಗಿದ್ದ ಸಂಗತಿಯನ್ನು ತಿಳಿಸುತ್ತದೆ. ಅವರ ಆರ್ಥಿಕ ಸಂಕಷ್ಟಗಳು ಮತ್ತು ತಾಯಿಯ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ನಯನಾ ಹೇಳಿಕೊಂಡಿದ್ದಾರೆ.

‘ಗಿಣಿರಾಮ’  ಸಂಭಾವನೆ ರಿವೀಲ್ ಮಾಡಿದ ನಟಿ ನಯನಾ; ಇಷ್ಟು ಕಡಿಮೆಯಾ?
ನಯನಾ ನಾಗರಾಜ್
Follow us on

‘ಗಿಣಿರಾಮ’ ಧಾರಾವಾಹಿ ನಟಿ ನಯನಾ ನಾಗರಾಜ್ (Nayana Nagaraj) ಅವರು ‘ಗಿಣಿರಾಮ’ ಧಾರಾವಾಹಿ ಮಾಡಿ ಫೇಮಸ್ ಆದವರು. ಅವರ ಜೀವನವನ್ನು ಸಂಕಷ್ಟಕ್ಕೆ ತಳ್ಳಿದ ಧಾರಾವಾಹಿ ಇದು ಎಂದರೂ ತಪ್ಪಾಗಲಾರದು. ಏಕೆಂದರೆ ಅವರಿಗೆ ಈ ಧಾರಾವಾಹಿಯಿಂದ ಸಾಕಷ್ಟು ತೊಂದರೆ ಆಯಿತು. ಅವರ ವೃತ್ತಿ ಜೀವನ ಕೊನೆ ಮಾಡಿದ್ದೂ ಇದೇ ಧಾರಾವಾಹಿ. ಅವರು ಧಾರವಾಹಿ ಸೆಟ್​ನಲ್ಲಿ ಒಬ್ಬರನ್ನು ಎದುರು ಹಾಕಿಕೊಂಡರು. ಇದರಿಂದ ತೊಂದರೆಗಳು ಶುರುವಾದವು. ಹಾಗಾದರೆ ನಟಿ ನಯನಾ ಎದುರಿಸದ ತೊಂದರೆಗಳೇನು? ಅವರಿಗೆ ಬರುತ್ತಿದ್ದ ಸಂಭಾವನೆ ಎಷ್ಟು ಎಂಬುದನ್ನು ನೋಡೋಣ.

ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್​ಗೆ ನಯನಾ ಅವರು ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರು ಸಂಭಾವನೆ ಬಗ್ಗೆ ಹೇಳಿಕೊಂಡಿದ್ದಾರೆ. ‘ನನಗೆ ದಿನಕ್ಕೆ 4 ಸಾವಿರ ರೂಪಾಯಿ ಬರುತ್ತಿತ್ತು. 12-13 ದಿನಗಳ ಕಾಲ ಶೂಟ್ ಇರುತ್ತಿತ್ತು. ನಮಗೆ ಅಷ್ಟೂ ಸಿಗಲ್ಲ ಎಂದು ಕೆಲವರು ಹೇಳಿದ್ದಾರೆ. ಆದರೆ, ಅವರಿಗೆ ನನ್ನಷ್ಟು ಖರ್ಚು ಇರಲಿಲ್ಲ. ಏಕೆಂದರೆ ನನಗೆ ಸಾಕಷ್ಟು ಖರ್ಚು ಇರುತ್ತಿತ್ತು. ಬರುತ್ತಿದ್ದ ಹಣದಲ್ಲೇ ಉಳಿಸಿ ಮದುವೆ ಮಾಡಿಕೊಂಡೆ’ ಎಂದು ಅವರು ಹೇಳಿದ್ದಾರೆ.

‘ನನಗೆ ಕಾಸ್ಮೆಟಿಕ್ಸ್​ಗೆ ಖರ್ಚಾಗುತ್ತದೆ. ಇಯರ್​ರಿಂಗ್ ರಿಪೀಟ್ ಆಗುತ್ತಿದೆ, ಬ್ಲೌಸ್ ರಿಪೀಟ್ ಆಗುತ್ತಿದೆ, ಸೀರೆ ರಿಪೀಟ್ ಆಗುತ್ತಿದೆ ಎಂದು ಹೇಳುತ್ತಾರೆ. ಧಾರಾವಾಹಿಗಳಲ್ಲಿ ಸೀರೆ ನೀಡಲ್ಲ. ಸೀರೆ ಕಡಿಮೆ ರೇಟ್​ಗೆ ಸಿಕ್ಕರೂ ಬ್ಲೌಸ್​ ಹೊಲಿಸೋಕೆ ರೇಟ್ ಜಾಸ್ತಿ. ಬರೋ ಹಣ ಎಲ್ಲವೂ ಇದಕ್ಕೆ ಬೇಕು’ ಎಂದಿದ್ದಾರೆ ನಯನಾ.

ಇದನ್ನೂ ಓದಿ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ
ಒಮನ್​ನಲ್ಲಿ ರಶ್ಮಿಕಾ-ವಿಜಯ್ ಸುತ್ತಾಟ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರು
‘ಬುದ್ಧಿವಂತರು ಪ್ರೀತಿಸುತ್ತಾರೆ, ಮೂರ್ಖರು ಮದುವೆಯಾಗುತ್ತಾರೆ’; RGV
ರಿಯಾಲಿಟಿ ಶೋಗಳಲ್ಲಿ ಡಬಲ್ ಮೀನಿಂಗ್ ಡೈಲಾಗ್; ರವಿಚಂದ್ರನ್ ಬೇಸರ

‘ಗಿಣಿ ರಾಮ ಉತ್ತರ ಕರ್ನಾಟಕದವರು ಪಾತ್ರ ಎಂಬ ಕಾರಣಕ್ಕೆ ಆರಂಭದಲ್ಲಿ ಇಳಕಲ್ ಸೀರೆ ಉಟ್ಟಿಕೊಳ್ಳಬೇಕಿತ್ತು. ಒಂದೂವರೆ ಸಾವಿರ ಅದಕ್ಕೆ ಖರ್ಚಾಗುತ್ತಿತ್ತು. ಹೀರೋಗೆ ಹೇಳುತ್ತಿರಲಿಲ್ಲ, ನನಗೆ ಮಾತ್ರ ಹೇಳುತ್ತಿದ್ದರು. ಹೆಣ್ಣುಮಕ್ಕಳನ್ನು ನೋಡುತ್ತಾರೆ ಎಂದು ಚಾನೆಲ್​ನವರು ಹೇಳುತ್ತಿದ್ದರು’ ಎಂದಿದ್ದಾರೆ ನಯನಾ.

‘ನನ್ನ ಅಮ್ಮನಿಗೆ ಕಿಡ್ನಿ ಸಮಸ್ಯೆ ಇದೆ. ಟ್ರಾನ್ಸ್​​ಪ್ಲಾಂಟ್ ಒಂದೇ ಆಯ್ಕೆ ಇರೋದು. ವೈದ್ಯಕೀಯ ಖರ್ಚು ಬೇರೆ. ಟ್ಯಾಬ್ಲೆಟ್ ಒಂದು ಬಾಕ್ಸ್​ಗೆ 10 ಸಾವಿರ ರೂಪಾಯಿ. ನಾನು ಯಾರಿಗೂ ಹೇಳಿಲ್ಲ. ನನ್ನ ಮನೆಯಲ್ಲಿರುವ ಪ್ರಾಬ್ಲಂ ಇದೆ ಎಂದು ಅವರಿಗೆ ಹೇಳಿಲ್ಲ’ ಎಂದಿದ್ದಾರೆ ನಯನಾ.

ಇದನ್ನೂ ಓದಿ: ‘ಇವುಗಳು ನನ್ನ ಸಂಬಂಧ ಹಾಳು ಮಾಡಿತು, ಸಾಯಲೂ ಪ್ರಯತ್ನಿಸಿದ್ದೆ’; ಬ್ರೇಕಪ್ ಕಥೆ ಬಿಚ್ಚಿಟ್ಟ ಅನುಪಮಾ ಗೌಡ

ನಯನಾ ಅವರು ಈಗ ಧಾರಾವಾಹಿಗಳಿಂದ ಬ್ಯಾನ್ ಆಗಿ ಹೊರಗೆ ಉಳಿದುಕೊಂಡಿದ್ದಾರೆ. ಅವರು ಯಾವುದೇ ಧಾರಾವಾಹಿಗಳಲ್ಲಿ ನಟಿಸುತ್ತಿಲ್ಲ. ಅವರಿಗೆ ವಿವಾಹ ಆಗಿದ್ದು ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:51 pm, Mon, 7 April 25