‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸಾಕಷ್ಟು ಅಚ್ಚರಿಯ ಎಲಿಮಿನೇಷನ್ಗಳು ನಡೆದು ಹೋಗಿವೆ. ಶಿಶಿರ್ ಅವರು ಹೊರ ಹೋಗುತ್ತಿದ್ದಂತೆ ಗೋಲ್ಡ್ ಸುರೇಶ್ ಕೂಡ ದೊಡ್ಮನೆಯಿಂದ ಹೊರ ಹೋಗಬೇಕಾದ ಪರಿಸ್ಥಿತಿ ಬಂದಿದೆ. ‘ಮನೆಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ ಆಗಿದೆ’ ಎಂದು ದೊಡ್ಮನೆಯಲ್ಲಿ ಘೋಷಣೆ ಮಾಡಲಾಯಿತು. ಆ ಬಳಿಕ ಸುರೇಶ್ ಹೊರ ಹೋದರು. ಅವರು ಹೊರ ಹೋಗಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಚರ್ಚೆಗಳು ನಡೆದಿವೆ.
ಗೋಲ್ಡ್ ಸುರೇಶ್ ಎಲಿಮಿನೇಟ್ ಆಗಲು ಕಾರಣ ಏನು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಆರಂಭದಲ್ಲಿ ಗೋಲ್ಡ್ ಸುರೇಶ್ ತಂದೆ ಮೃತಪಟ್ಟರು ಎಂದು ವರದಿ ಆಯಿತು. ಆದರೆ, ಈ ಬಗ್ಗೆ ಅವರ ತಂದೆಯೇ ಸ್ಪಷ್ಟನೆ ಕೊಟ್ಟರು. ‘ನನಗೆ ಏನೂ ಆಗಿಲ್ಲ. ನಾನು ಆರೋಗ್ಯವಾಗಿ ಇದ್ದೇನೆ’ ಎಂದು ಹೇಳಿದ್ದರು. ಜೊತೆಗೆ ಊರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹೇಳಿಕೊಂಡಿದ್ದರು.
ಹಾಗಾದರೆ, ಏನು ಆ ತುರ್ತುಪರಿಸ್ಥಿತಿ ಎಂಬ ಬಗ್ಗೆ ಚರ್ಚೆಗಳು ಆಗಿವೆ. ಬಿಗ್ ಬಾಸ್ ಆದೇಶ ನೀಡುವಾಗ ‘ಹೆಚ್ಚು ಚಿಂತಿಸುವ ಅಗತ್ಯ ಇಲ್ಲ’ ಎಂದು ಹೇಳಿದ್ದಾರೆ. ಇದೇ ವಿಚಾರ ಇಟ್ಟುಕೊಂಡು ಐಶ್ವರ್ಯಾ ಅವರು ಚರ್ಚೆ ಮಾಡಿದ್ದಾರೆ. ಸುರೇಶ್ ಅವರು ಎಲಿಮಿನೇಟ್ ಆಗಲು ನಿಜವಾದ ಕಾರಣ ಏನು ಎಂಬುದನ್ನು ಚರ್ಚಿಸಿದ್ದಾರೆ.
‘ಬಹುಶಃ ಬಿಸ್ನೆಸ್ನಲ್ಲಿ ಏನೋ ತೊಂದರೆ ಆಗಿರಬಹುದು ಎಂದು ನನಗೆ ಅನಿಸುತ್ತಿದೆ. ಕುಟುಂಬದಲ್ಲಿ ತೊಂದರೆ ಆಗಿದ್ದರೆ ಹೆದರುವ ಅಗತ್ಯ ಇಲ್ಲ ಎಂದೆಲ್ಲ ಹೇಳುತ್ತಿರಲಿಲ್ಲ. ಉದ್ಯಮದಲ್ಲಿಯೇ ಏನೋ ತೊಂದರೆ ಆಗಿದೆ. ಅವರು ಏನನ್ನೂ ಓಪನ್ ಆಗಿ ಹೇಳಿಕೊಂಡವರಲ್ಲ. ಇತ್ತೀಚೆಗೆ ಅವರು ಸಾಕಷ್ಟು ಸೈಲೆಂಟ್ ಆಗಿದ್ದರು’ ಎಂದು ಐಶ್ವರ್ಯಾ ಹೇಳಿದ್ದಾರೆ. ಈ ವಿಚಾರ ನಿಜ ಇರಬಹುದು ಎಂದು ಅನೇಕರಿಗೆ ಅನಿಸಿದೆ.
ಇದನ್ನೂ ಓದಿ: ಶಿಶಿರ್ ಎಲಿಮಿನೇಷನ್ಗೆ ಕಾರಣ ಆಗಿದ್ದು ಐಶ್ವರ್ಯಾ? ಮೂಡಿದೆ ಅನುಮಾನ
ಸುರೇಶ್ ಅವರು ಸಾಲ ಮಾಡಿಕೊಂಡಿದ್ದರು ಎಂದು ಕೆಲವು ಕಡೆಗಳಲ್ಲಿ ವರದಿ ಆಗಿದೆ. ಆದರೆ, ನಿಜ ವಿಚಾರ ಏನು ಏಂಬುದನ್ನು ಸುರೇಶ್ ಅವರೇ ಮಾಧ್ಯಮಗಳ ಎದುರು ಬಂದು ಹೇಳಿಕೊಳ್ಳಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:27 am, Tue, 17 December 24