‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ 73 ದಿನಗಳ ಕಳೆದಿವೆ. ಇನ್ನು ಉಳಿದಿರುವುದು ಕೆಲವೇ ದಿನಗಳ ಮಾತ್ರ. ಹಾಗಾಗಿ ಎಲ್ಲರೂ ತಮ್ಮ ಆಟದ ಮೇಲೆ ಗಮನ ಹರಿಸುತ್ತಿದ್ದಾರೆ. ಮೊದಲು ಸ್ನೇಹಿತರಾಗಿದ್ದವರೆಲ್ಲ ಈಗ ದುಷ್ಮನ್ಗಳ ರೀತಿ ಆಗಿದ್ದಾರೆ. ಅದರಲ್ಲೂ ಗೌತಮಿ ಜಾದವ್ ಮತ್ತು ಮೋಕ್ಷಿತಾ ಪೈ ಅವರ ನಡುವಿನ ಜಗಳ ಜಾಸ್ತಿ ಆಗಿದೆ. ಈಗ ಮೋಕ್ಷಿತಾ ಪೈ ಅವರಿಗೆ ಗೌತಮಿ ಇನ್ನಷ್ಟು ಸಂಕಷ್ಟ ತಂದೊಡ್ಡಿದ್ದಾರೆ. ಮುಂದಿನ ವಾರಕ್ಕೆ ಕ್ಯಾಪ್ಟನ್ ಆಗುವ ಅವಕಾಶವನ್ನು ಮೋಕ್ಷಿತಾ ಅವರಿಂದ ಗೌತಮಿ ತಪ್ಪಿಸಿದ್ದಾರೆ.
ಪ್ರತಿ ವಾರ ಕ್ಯಾಪ್ಟೆನ್ಸಿ ಟಾಸ್ಕ್ ನಡೆಯುತ್ತದೆ. ಅದರಲ್ಲಿ ಗೆಲ್ಲಲು ಎಲ್ಲರೂ ಕಷ್ಟಪಡುತ್ತಾರೆ. ಯಾಕೆಂದರೆ, ಒಮ್ಮೆ ಕ್ಯಾಪ್ಟನ್ ಆದರೆ ಮುಂದಿನ ವಾರಕ್ಕೆ ಇಮ್ಯುನಿಟಿ ಸಿಗುತ್ತದೆ. ಅಂದರೆ, ನಾಮಿನೇಷನ್ನಿಂದ ಬಜಾಚ್ ಆಗುತ್ತಾರೆ. ಹಾಗಾಗಿ ಎಲ್ಲರಿಗೂ ಕ್ಯಾಪ್ಟನ್ ಆಗಬೇಕು ಎಂಬ ಆಸೆ ಇರುತ್ತದೆ. ಕಳೆದ ವಾರ ಕ್ಯಾಪ್ಟನ್ ಆಗುವ ಅವಕಾಶ ಕಳೆದುಕೊಂಡಿದ್ದ ಮೋಕ್ಷಿತಾ ಅವರಿಗೆ ಈ ವಾರ ಕೂಡ ಚಾನ್ಸ್ ಮಿಸ್ ಆಗಿದೆ.
ಕ್ಯಾಪ್ಟೆನ್ಸಿ ಟಾಸ್ಕ್ಗಾಗಿ ಎರಡು ತಂಡಗಳಲ್ಲಿ ಪೈಪೋಟಿ ನಡೆಯುತ್ತಿದೆ. ಒಂದು ತಂಡಕ್ಕೆ ಹನುಮಂತ ಲೀಡರ್ ಆಗಿದ್ದರೆ, ಇನ್ನೊಂದು ತಂಡವನ್ನು ಗೌತಮಿ ಜಾದವ್ ಮುಂದುವರಿಸುತ್ತಿದ್ದಾರೆ. ಮೊದಲ ಸುತ್ತಿನಲ್ಲಿ ಗೌತಮಿಯ ತಂಡ ಸೋತಿತು. ಆಗ ಇಬ್ಬರನ್ನು ಕ್ಯಾಪ್ಟೆನ್ಸಿ ಆಟದಿಂದ ಹೊರಗೆ ಇರಬೇಕಾಯಿತು. ಆಗ ಮೋಕ್ಷಿತಾ ಮತ್ತು ತ್ರಿವಿಕ್ರಮ್ ಹೆಸರನ್ನು ಗೌತಮಿ ಹೇಳಿದರು.
ಇದನ್ನೂ ಓದಿ: ಮುಖಕ್ಕೆ ಹೊಡೆದಂತೆ ಮಾತಾಡಿದ ಗೌತಮಿ; ಸ್ನೇಹ ಮಾಡಿದ್ದಕ್ಕೆ ಮಂಜುಗೆ ಸಿಕ್ಕಿದ್ದು ಇಷ್ಟೇ
ಕಳೆದ ವಾರ ಕ್ಯಾಪ್ಟೆನ್ಸಿ ಟಾಸ್ಕ್ನಲ್ಲಿ ಮೋಕ್ಷಿತಾ ಇದ್ದರು. ಆದರೆ ಸ್ವಾಭಿಮಾನದ ಕಾರಣಕ್ಕಾಗಿ ಅವರು ಗೌತಮಿಯ ಬಳಿ ಸಹಾಯ ಕೇಳುವ ಬದಲು ಆಟವನ್ನು ಬಿಟ್ಟುಕೊಡಲು ನಿರ್ಧರಿಸಿದ್ದರು. ಆದ್ದರಿಂದ ಅವರಿಗೆ ಕ್ಯಾಪ್ಟನ್ ಆಗುವ ಅವಕಾಶ ತಪ್ಪಿ ಹೋಗಿತ್ತು. ಮೋಕ್ಷಿತಾ ಅವರ ಅವಕಾಶವನ್ನು ಬಳಸಿಕೊಂಡು ಗೌತಮಿ ಕ್ಯಾಪ್ಟನ್ ಆಗಿದ್ದರು. ಈ ವಾರ ಕೂಡ ಮೋಕ್ಷಿತಾಗೆ ಕ್ಯಾಪ್ಟನ್ ಆಗುವ ಅವಕಾಶ ಕೈತಪ್ಪಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.