ಮೊದಲ ವಾರವೇ ‘ಹಳ್ಳಿ ಪವರ್​’ನಿಂದ ಮೂವರು ಔಟ್? ಇಬ್ಬರು ಇಂಜುರಿ, ಒಬ್ಬರು ವಾಕ್​ಔಟ್

ಜೀ ಪವರ್‌ನಲ್ಲಿ ಪ್ರಸಾರವಾಗುತ್ತಿರುವ ‘ಹಳ್ಳಿ ಪವರ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವ ಸ್ಪರ್ಧಿಗಳು ಹಳ್ಳಿ ಜೀವನದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸ್ನೇಹಾ ಶೆಟ್ಟಿ ವಾಕೌಟ್ ಮಾಡುವ ಬಗ್ಗೆ ಚಿಂತಿಸುತ್ತಿದ್ದಾರೆ, ಟೆಲಿನ್ ಮತ್ತು ಕಾವ್ಯಾ ಗಾಯಗೊಂಡಿದ್ದಾರೆ. 12 ಸ್ಪರ್ಧಿಗಳು ಈ ಶೋನಲ್ಲಿ ಭಾಗವಹಿಸಿದ್ದು, ಭವಿಷ್ಯದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಗಳೂ ಇರಲಿವೆ.

ಮೊದಲ ವಾರವೇ ‘ಹಳ್ಳಿ ಪವರ್​’ನಿಂದ ಮೂವರು ಔಟ್? ಇಬ್ಬರು ಇಂಜುರಿ, ಒಬ್ಬರು ವಾಕ್​ಔಟ್
ಟೆಲಿನ್-ಕಾವ್ಯಾ-ಸ್ನೇಹಾ

Updated on: Sep 04, 2025 | 11:06 AM

‘ಹಳ್ಳಿ ಪವರ್’ (Halli Power) ರಿಯಾಲಿಟಿ ಶೋ ಭರ್ಜರಿಯಾಗಿ ನಡೆಯುತ್ತಿದೆ. ಜೀ ಪವರ್ ​ವಾಹಿನಿಯಲ್ಲಿ ಶೋ ನಡೆಯುತ್ತಿದೆ. ಬರೋಬ್ಬರಿ 12 ಸ್ಪರ್ಧಿಗಳು ಇದರಲ್ಲಿ ಭಾಗಿ ಆಗಿದ್ದಾರೆ. ಅಕುಲ್ ಬಾಲಾಜಿ ಅವರು ಈ ಶೋನ ನಡೆಸಿಕೊಡುತ್ತಿದ್ದಾರೆ. ಮೊದಲ ವಾರವೇ ಇಬ್ಬರು ಔಟ್ ಆಗುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಒಬ್ಬರಿಗೆ ಗಾಯ ಆದರೆ, ಮತ್ತೊಬ್ಬರಿಗೆ ವಾಕ್​ಔಟ್ ಮಾಡೋ ಮನಸ್ಸು ಬಂದಿದೆ.

ಸಿಟಿಯಲ್ಲಿ ಹುಟ್ಟಿ ಬೆಳೆದ ಹುಡುಗಿಯರಿಗೆ ಹಳ್ಳಿ ಜೀವನ ನೋಡಬೇಕು ಎಂದರೆ ಅದು ಬಲು ಕಷ್ಟ. ಅದರಲ್ಲೂ ಪಕ್ಕಾ ಹಳ್ಳಿ ಜೀವನ ನಡೆಸಬೇಕು ಎಂದರೆ ಅದು ದೊಡ್ಡ ಚಾಲೆಂಜ್. ಅಲ್ಲದೆ, ಮೊಬೈಲ್ ಬಳಕೆಗೂ ಇಲ್ಲಿ ಅವಕಾಶ ಇಲ್ಲ. ಇದು ಪ್ಯಾಟೆ ಹುಡುಗಿಯರಿಗೆ ಸಾಕಷ್ಟು ಕಷ್ಟ ಎನಿಸಿದೆ. ಇದಕ್ಕೆ ಅನೇಕರು ಸುಸ್ತಾಗಿದ್ದಾರೆ.

ಇದನ್ನೂ ಓದಿ
ಶಂಕರ್​ ನಾಗ್​​ಗೆ ಅಣ್ಣ ಮಾತ್ರ ಅಲ್ಲ, ಸಾಕು ತಂದೆಯೂ ಆಗಿದ್ದ ಅನಂತ್ ನಾಗ್
‘ಕಾಂತಾರ: ಚಾಪ್ಟರ್​ 1’ ಎದುರು ರಿಲೀಸ್ ಆಗಲಿದೆ ದೊಡ್ಡ ಹೀರೋ ಸಿನಿಮಾ
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಫೈನಲ್ ಆದ ಮೂವರು ಸ್ಪರ್ಧಿಗಳು ಇವರೇ ನೋಡಿ
ರಾಜ್ ಮುಟ್ಟಿದ್ದೆಲ್ಲ ಚಿನ್ನ; ಹಂಚಿಕೆ ಮಾಡಿದ ‘ಲೋಕಃ’ ಗಳಿಕೆ ಜೋರು

‘ಹಳ್ಳಿ ಪವರ್’ ಕಾರ್ಯಕ್ರಮದಲ್ಲಿ ಮಂಗಳೂರಿನ ಸ್ನೇಹಾ ಶೆಟ್ಟಿ ಮೊದಲ ವಾರವೇ ಸುಸ್ತಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ಸ್ನೇಹಾ ಅವರು ತುಂಬಾನೇ ಸಾಫ್ಟ್ ಆಗಿ ಬೆಳೆದವರು. ಅವರಿಗೆ ಕಷ್ಟ ಎಂಬುದೇ ಗೊತ್ತಿಲ್ಲ. ಆದರೆ, ‘ಹಳ್ಳಿ ಪವರ್’ನಲ್ಲಿ ಹಳ್ಳಿ ಮನೆಯವರ ಕೆಲಸ ಮಾಡುತ್ತಿದ್ದಾರೆ. ವಿವಿಧ ಕೆಲಸಗಳನ್ನು ಮಾಡಿ ಸ್ನೇಹಾ ಸುಸ್ತಾಗಿದ್ದಾರೆ. ‘ನಾನು ವಾಕೌಟ್ ಮಾಡ್ತೀನಿ’ ಎಂದು ನೇರವಾಗಿ ಹೇಳಿದ್ದಾರೆ. ಆ ಬಳಿಕ ಅಕುಲ್ ಬಾಲಾಜಿ ಅವರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಸ್ನೇಹಾ ಮನಸ್ಸು ಬದಲಾಯಿಸಿದ್ದಾರೆ. ಆದರೆ, ವಾಕೌಟ್ ಮಾಡಬೇಕು ಎಂಬುದು ಅವರ ಮನಸ್ಸಿಗೆ ಬಂದಿದೆ.

ಇದನ್ನೂ ಓದಿ: ಹಳ್ಳಿ ಪವರ್; ಹಾಲು ಕರೆಯೋ ಟಾಸ್ಕ್​ನಲ್ಲಿ ಸೋತವರಿಗೆ ಸಗಣಿ ನೀರ ಸ್ನಾನ; ಬಂತು ವಾಕರಿಕೆ

ಇನ್ನು, ಟೆಲಿನ್ ಅವರು ಇತ್ತೀಚೆಗೆ ಟಾಸ್ಕ್ ಆಡುವಾಗ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅವರ ಕಾಲು ಟ್ವಿಸ್ಟ್ ಆಗಿತ್ತು. ಹೀಗಾಗಿ, ಅವರ ಕಾಲಿಗೆ ಪ್ಲಾಸ್ಟರ್ ಹಾಕಲಾಗಿದೆ. ಅವರು ಓಡಾಡಲು ಕೂಡ ಕಷ್ಟಪಡುತ್ತಿದ್ದಾರೆ. ಕಾವ್ಯಾ ಕಾಲಿಗೂ ಪೆಟ್ಟಾಗಿದೆ. ಹೀಗಾಗಿ, ಇವರಿಬ್ಬರು ಯಾವಾಗ ಬೇಕಿದ್ದರೂ ಔಟ್ ಆಗೋ ಸಾಧ್ಯತೆ ಇದೆ. ಸದ್ಯ ಒಟ್ಟು 12 ಸ್ಪರ್ಧಿಗಳು ಇದ್ದಾರೆ. ಮುಂದಿನ ದಿನಗಳಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.