ಬಿಗ್ ಬಾಸ್ ಎಲಿಮಿನೇಷನ್: ಹಂಸಾ, ಮೋಕ್ಷಿತಾಗೆ ಕೊನೇ ಹಂತದಲ್ಲಿ ಶಾಕ್

ಸೃಜನ್ ಲೋಕೇಶ್ ಅವರು ಬಿಗ್ ಬಾಸ್ ಮನೆಗೆ ಬಂದು ನಾಮಿನೇಷನ್ ಪ್ರಕ್ರಿಯೆಯನ್ನು ಶುರು ಮಾಡಿದರು. ಮೋಕ್ಷಿತಾ ಪೈ ಮತ್ತು ಹಂಸಾ ಅವರು ಡೇಂಜರ್ ಝೋನ್​ನ ಅಂತಿಮ ಹಂತಕ್ಕೆ ಬಂದರು. ಎರಡು ಕಾರುಗಳನ್ನು ಬಿಗ್ ಬಾಸ್ ಮನೆಯ ಒಳಗೆ ತರಿಸಲಾಯಿತು. ಆ ಕಾರುಗಳ ಪಕ್ಕದಲ್ಲಿ ಹಂಸಾ, ಮೋಕ್ಷಿತಾ ನಿಂತರು. ಎಲಿಮಿನೇಟ್ ಆದವರು ಆ ಕಾರಿನ ಮೂಲಕ ಮನೆಯಿಂದ ಹೊರಗೆ ಹೋಗುತ್ತಾರೆ.

ಬಿಗ್ ಬಾಸ್ ಎಲಿಮಿನೇಷನ್: ಹಂಸಾ, ಮೋಕ್ಷಿತಾಗೆ ಕೊನೇ ಹಂತದಲ್ಲಿ ಶಾಕ್
ಹಂಸಾ, ಮೋಕ್ಷಿತಾ ಪೈ
Follow us
ಮದನ್​ ಕುಮಾರ್​
|

Updated on:Oct 27, 2024 | 11:34 PM

ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲೇ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಆರಂಭ ಆಗಿದೆ. ಈ ವಾರ ಉಗ್ರಂ ಮಂಜು, ಚೈತ್ರಾ ಕುಂದಾಪುರ, ಸುರೇಶ್, ಭವ್ಯಾ, ಮಾನಸಾ, ಮೋಕ್ಷಿತಾ, ಹಂಸಾ ಮುಂತಾದವರು ನಾಮಿನೇಟ್​ ಆಗಿದ್ದರು. ಅಂತಿಮ ಹಂತಕ್ಕೆ ಹಂಸಾ ಮತ್ತು ಮೋಕ್ಷಿತಾ ಪೈ ಅವರು ಬಂದರು. ಇನ್ನುಳಿದ ಎಲ್ಲರೂ ಸೇಫ್ ಆದರು. ‘15 ಜನರು ಇರುವ ಈ ಮನೆಯಲ್ಲಿ ಈಗ ಕೇವಲ 14 ಜನ ಉಳಿಯಲಿದ್ದಾರೆ’ ಎಂದು ಬಿಗ್ ಬಾಸ್​ ಘೋಷಿಸಿದರು. ಭಾನುವಾರದ (ಅ.27) ಎಪಿಸೋಡ್​ನಲ್ಲೇ ನಾಮಿನೇಷನ್​ ಆಗಲಿದೆ ಎಂದು ವೀಕ್ಷಕರು ಕಾದಿದ್ದರು. ಆದರೆ ಕೊನೆಯಲ್ಲಿ ಸಸ್ಪೆನ್ಸ್ ಉಳಿಸಿಕೊಳ್ಳಲಾಯಿತು.

ಸುದೀಪ್ ಅವರು ಇಲ್ಲದ ಕಾರಣ ಈ ವಾರದ ನಾಮಿನೇಷನ್​ ಪ್ರಕ್ರಿಯೆ ಕೊಂಚ ಡಿಫರೆಂಟ್​ ಆಗಿದೆ. ಎರಡು ಕಾರುಗಳು ಬಿಗ್ ಬಾಸ್ ಮನೆಯ ಒಳಗೆ ಬಂದಿವೆ. ಎಡಬದಿಯ ಕಾರಿನ ಬಳಿ ಹಂಸಾ ನಿಂತರು. ಬಲಬದಿಯ ಕಾರಿನ ಬಳಿ ಮೋಕ್ಷಿತಾ ನಿಂತರು. ಈ ವೇಳೆ ಅವರಿಬ್ಬರಿಗೂ ಈ ಮನೆಯ ಜರ್ನಿಯ ಬಗ್ಗೆ ಅಭಿಪ್ರಾಯ ಹೇಳಲಾಯಿತು. ‘ನನಗೆ ಸ್ನೇಹಿತರು ಕಡಿಮೆ. ಆದರೆ ಇಲ್ಲಿ ತುಂಬ ಜನ ಇದ್ದರು. ನಾನು ಕೂಡ ಧೈರ್ಯವಾಗಿ ಮಾತನಾಡಬೇಕಿತ್ತು. ಬೇರೆಯವರ ರೀತಿ ಆಡಲು ನನಗೆ ಕಷ್ಟ ಆಯಿತು. ಹಾಗಾಗಿ ನಾನು ಈ ಸ್ಥಾನದಲ್ಲಿ ನಿಂತಿದ್ದೇನೆ. ಜನರ ಬಗ್ಗೆ ನೆಗೆಟಿವ್ ಆಗಿ ಹೇಳಲು ಕಷ್ಟ ಆಗುತ್ತದೆ. ನನಗೆ ಜೀವನದಲ್ಲಿ ಇದು ಮುಖ್ಯವಾದ ವೇದಿಕೆ ಆಗಿತ್ತು’ ಎಂದು ಮೋಕ್ಷಿತಾ ಹೇಳಿದರು.

‘ಇದು ಲೈಫ್​ ಟೈಮ್​ ಮೆಮೋರಿ. 17 ಬಗೆಯ ವ್ಯಕ್ತಿತ್ವ ಇರುವ ಜನರ ನಡುವೆ ನಾನು ಒಂದೇ ಮನೆಯಲ್ಲಿ ಇನ್ನು ಎಂದಿಗೂ ಇರಲ್ಲ ಅನ್ಸುತ್ತೆ. ಬಿಗ್ ಬಾಸ್ ಅನ್ನು ಹೊರಗಡೆಯಿಂದ ನೋಡೋದಕ್ಕೂ ಒಳಗೆ ನೋಡೋದಕ್ಕೂ ವ್ಯತ್ಯಾಸ ಇದೆ. ಇಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಫ್ರೆಂಡ್ಸ್​ ಮತ್ತು ಫ್ಯಾಮಿಲಿಯ ಸಲಹೆ ಇರಲ್ಲ. ಹೊರಗೆ ಹೋದ ಬಳಿಕ ನಾನು ಇನ್ನಷ್ಟು ಸ್ಟ್ರಾಂಗ್ ಆಗುತ್ತೇನೆ. ನನಗೆ ತಾಳ್ಮೆ ಇದೆ ಎಂಬುದು ಇಲ್ಲಿಗೆ ಬಂದ ನಂತರ ತಿಳಿಯಿತು’ ಎಂದು ಹಂಸಾ ಅವರು ಹೇಳಿದರು.

ಇನ್ನೇನು ಈ ಇಬ್ಬರಲ್ಲಿ ಒಬ್ಬರು ಎಲಿಮಿನೇಟ್​ ಆಗಬೇಕು ಎಂಬಷ್ಟರಲ್ಲಿ ಭಾನುವಾರದ (ಅಕ್ಟೋಬರ್​ 27) ಸಂಚಿಕೆಯನ್ನು ಮುಕ್ತಾಯ ಮಾಡಲಾಗಿದೆ. ಹಂಸಾ ಮತ್ತು ಮೋಕ್ಷಿತಾ ಅವರಲ್ಲಿ ಯಾರು ಎಲಿಮಿನೇಟ್ ಆಗಿದ್ದಾರೆ ಎಂಬುದನ್ನು ತೋರಿಸಿಲ್ಲ. ಮುಂದಿನ ಸಂಚಿಕೆಯ ಝಲಕ್ ತೋರಿಸಲಾಗಿದೆ. ಅದರಲ್ಲಿ ಮೋಕ್ಷಿತಾ ಅವರು ‘ಇನ್ಮೇಲಿಂದ ಆಟ ಶುರು’ ಎಂದು ಸವಾಲು ಹಾಕಿದ್ದಾರೆ. ಹಾಗಾಗಿ ಅವರು ಸೇಫ್ ಆಗಿದ್ದು, ಹಂಸಾ ಎಲಿಮಿನೇಟ್​ ಆಗಿದ್ದಾರೆ ಎಂದು ವೀಕ್ಷಕರು ಊಹಿಸುತ್ತಿದ್ದಾರೆ.

ಎಮಿಲಿನೇಷನ್​ಗೂ ಮುನ್ನ ಮೋಕ್ಷಿತಾ ಮತ್ತು ಹಂಸಾ ಅವರಿಗೆ ಬಿಗ್ ಬಾಸ್​ ಒಂದು ವಿಶೇಷ ಅಧಿಕಾರವನ್ನು ನೀಡಿದರು. ಅನೇನೆಂದರೆ, ಮುಂದಿನ ವಾರಕ್ಕೆ ತಲಾ ಒಬ್ಬರನ್ನು ಅವರು ನೇರವಾಗಿ ನಾಮಿನೇಟ್​ ಮಾಡಬಹುದು. ಆಗ ಮೋಕ್ಷಿತಾ ಅವರು ತ್ರಿವಿಕ್ರಮ್ ಅವರನ್ನು ಹಾಗೂ ಹಂಸಾ ಅವರು ಹನುಮಂತ ಅವನ್ನು ನಾಮಿನೇಟ್ ಮಾಡಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯ ಮಂದಿಗೂ ಗೊತ್ತಾಯ್ತು ಸುದೀಪ್ ತಾಯಿ ನಿಧನದ ಸುದ್ದಿ

‘ಈ ಮನೆಯಲ್ಲಿ ತ್ರಿವಿಕ್ರಮ್ ಅವರು ತಂತ್ರ ಮಾಡುತ್ತಿದ್ದಾರೆ. ತಂತ್ರಗಳನ್ನು ಬಳಸಿ ಜನರನ್ನು ಕೈಯಲ್ಲಿ ಇಟ್ಟುಕೊಂಡು ಆಟ ನಡೆಸೋದು ಅವರಿಗೆ ಗೊತ್ತಿದೆ. ಯಾರನ್ನೆಲ್ಲ ನಾಮಿನೇಟ್ ಮಾಡಬೇಕು ಎಂಬ ಅವರ ಯೋಜನೆಗೆ ಕೆಲವರು ಕೈ ಜೋಡಿಸಿದ್ದಾರೆ. ಈ ಮನೆಯಲ್ಲಿ ಅದಕ್ಕೆ ಜಾಗ ಇರಬಾರದು’ ಎಂದು ಮೋಕ್ಷಿಯಾ ಅವರು ತ್ರಿವಿಕ್ರಮ್ ಅವರನ್ನು ನಾಮಿನೇಟ್ ಮಾಡಿದರು. ‘ಹನುಮಂತ ಮನೆಗೆ ಬಂದು ಒಂದು ವಾರ ಆಯ್ತು. ಧನರಾಜ್ ಬಿಟ್ಟು ಬೇರೆ ಯಾರ ಜೊತೆಯೂ ಹನುಮಂತ ಬೆರೆತಿಲ್ಲ. ಸಿಂಗಿಂಗ್ ಅವರ ಪ್ಲಸ್. ಆದರೆ ನಾವು ಕೇಳಿದಾಗ ಮಾತ್ರ ಹಾಡುತ್ತಾರೆ. ಅವರಾಗಿಯೇ ಹಾಡಿ ನಮಗೆ ಮನರಂಜನೆ ನೀಡಿಲ್ಲ’ ಎಂದು ಹಂಸಾ ಅವರು ಹನುಮಂತನ ಹೆಸರನ್ನು ಮುಂದಿನ ವಾರಕ್ಕೆ ನಾಮಿನೇಟ್ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:34 pm, Sun, 27 October 24

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ