‘ಬಿಗ್ ಬಾಸ್’ ಮನೆಯಲ್ಲಿ ಹನುಮಂತ ಅವರು ಸೈಲೆಂಟ್ ಆಗಿದ್ದಾರೆ. ಹಾಗಂದ ಮಾತ್ರಕ್ಕೆ ಅವರು ಸೈಲೆಂಟ್ ಅಲ್ಲವೇ ಅಲ್ಲ. ಅವರು ಸುಮ್ಮನೆ ಇದ್ದುಕೊಂಡೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರು ಮಾತಿನ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ. ಉದ್ದ ಸಾಲುಗಳನ್ನು ಹೇಳದೇ ಒಂದೇ ಒಂದು ವಾಕ್ಯಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆಯುತ್ತಾರೆ. ಈಗ ಅವರು ಸುದೀಪ್ಗೆ ಕೌಂಟರ್ ಕೊಟ್ಟು ಸುದ್ದಿ ಆಗಿದ್ದಾರೆ. ಶನಿವಾರದ (ಡಿಸೆಂಬರ್ 21) ಎಪಿಸೋಡ್ನಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ.
ಸುದೀಪ್ ಅವರು ಯಾವುದೇ ಪ್ರಶ್ನೆ ಮಾಡಿದರೂ, ಹಾಗೇನು ಇಲ್ರಿ, ಎಲ್ಲಾ ಚೆನ್ನಾಗೈತ್ರಿ ಎಂಬ ಉತ್ತರ ಹನುಮಂತ ಅವರ ಕಡೆಯಿಂದ ಬರುತ್ತಿತ್ತು. ಇದನ್ನು ಸುದೀಪ್ ಅವರು ಕೂಡ ಗಮನಿಸಿದ್ದಾರೆ. ಈ ಕಾರಣದಿಂದಲೇ ಸುದೀಪ್ ಅವರು ಹನುಮಂತ ಬಳಿ ಒಂದು ವಿಚಾರವನ್ನು ಸ್ಪಷ್ಟವಾಗಿ ಹೇಳಿದರು. ‘ಹಾಗೇನು ಇಲ್ರಿ, ಎಲ್ಲಾ ಚೆನ್ನಾಗೈತ್ರಿ ಬಿಟ್ಟು ಬೇರೆ ಮಾತನ್ನು ಹೇಳಬೇಕು’ ಎಂದು ಸುದೀಪ್ ಕಂಡೀಷನ್ ಹಾಕಿದರು. ಇದಕ್ಕೆ ಹನುಮಂತ ಒಪ್ಪಿದರು.
‘ಹೇಗಿತ್ತು ಈ ವಾರ’ ಎಂದು ಸುದೀಪ್ ಕೇಳಿದರು. ‘ಭೇಷ್ ಇತ್ತುರೀ’ ಎಂದರು ಹನುಮಂತ. ಈ ಮಾತಿಗೆ ಎಲ್ಲರೂ ಚಪ್ಪಾಳೆ ತಟ್ಟಿದರು. ಸುದೀಪ್ ಅವರು ಮಾತು ಬಾರದೆ ಒಂದು ನಿಮಿಷ ಸುಮ್ಮನಿದ್ದರು. ಆ ಬಳಿಕ ಬೇರೆ ಟಾಪಿಕ್ಗೆ ಹೋದರು.
ಸುದೀಪ್ ಅವರು ಹನುಮಂತ ಅವರನ್ನು ನಿರಂತರವಾಗಿ ಹೊಗಳುತ್ತಾ ಬರುತ್ತಿದ್ದಾರೆ. ‘ಇಡೀ ಮನೆಯಲ್ಲಿ ಹನುಮಂತ ಅವರೇ ಬುದ್ಧಿವಂತ ಆಟಗಾರ’ ಎಂದು ಸುದೀಪ್ ಸಾಕಷ್ಟು ಬಾರಿ ಹೇಳಿದ್ದಾರೆ. ಈ ಮಾತು ಹನುಮಂತ ಅವರಿಗೆ ಸ್ಫೂರ್ತಿ ನೀಡುತ್ತಾ ಇದೆ. ಹನುಮಂತ ಅವರು ವಾರ ಕಳೆದಂತೆ ಆಟ ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರೆ.
ಇದನ್ನೂ ಓದಿ: ಹನುಮಂತನ ಮದುವೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡ ಗೋಲ್ಡ್ ಸುರೇಶ್
ಹನುಮಂತ ಅವರು ಗಾಯಕನಾಗಿ ಫೇಮಸ್ ಆದವರು. ಅವರು ಹಾವೇರಿ ಮೂಲದವರು. ಅವರು ಹಲವು ರಿಯಾಲಿಟಿ ಶೋಗಳನ್ನು ನೋಡಿ ಬಂದಿದ್ದಾರೆ. ಈಗ ಬಿಗ್ ಬಾಸ್ನೂ ಚಾಲಾಕಿತನ ಉಪಯೋಗಿಸಿ ಆಡುತ್ತಾ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:13 pm, Sat, 21 December 24