ಸುದೀಪ್​ಗೆ ಕೊಟ್ಟ ಮಾತನ್ನು ಉಳಿಸಿಕೊಂಡ; ನುಡಿದಂತೆ ನಡೆದ್ರು

|

Updated on: Jan 11, 2025 | 10:36 AM

ಬಿಗ್ ಬಾಸ್‌ನಲ್ಲಿ ಹನುಮಂತ ತನ್ನ ಕುಟುಂಬದವರನ್ನು ಭೇಟಿಯಾದ ನಂತರ ಹೊಸ ಉತ್ಸಾಹದಿಂದ ಆಟ ಆಡಿದ್ದಾರೆ. ಅವರು ಸುದೀಪ್ ಅವರಿಗೆ ಕೊಟ್ಟ ಪ್ರಮಾಣವನ್ನು ಉಳಿಸಿಕೊಂಡು ಉತ್ತಮವಾಗಿ ಆಡಿದ್ದಾರೆ. ರಜತ್ ಮತ್ತು ತ್ರಿವಿಕ್ರಂ ಅವರನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ ಮತ್ತು ಅಲ್ಟಿಮೇಟ್ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿದ್ದಾರೆ.

ಸುದೀಪ್​ಗೆ ಕೊಟ್ಟ ಮಾತನ್ನು ಉಳಿಸಿಕೊಂಡ; ನುಡಿದಂತೆ ನಡೆದ್ರು
ಸುದೀಪ್-ಹನುಮಂತ
Follow us on

ಹನುಮಂತ ಅವರು ಕಳೆದ ವಾರ ಸುದೀಪ್ ಅವರಿಗೆ ಒಂದು ಪ್ರಾಮಿಸ್ ಮಾಡಿದ್ದರು. ಆ ಪ್ರಾಮಿಸ್​ನ ಈಡೇರಿಸಿದ್ದಾರೆ. ಅವರು ನುಡಿದಂತೆ ನಡೆದಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟಕ್ಕೂ ಸುದೀಪ್ ಅವರು ಹನುಮಂತ ಅವರು ಮಾಡಿದ ಪ್ರಾಮಿಸ್ ಏನು? ಇದಕ್ಕೆ ಸುದೀಪ್ ಅವರು ಕೊಟ್ಟ ಉತ್ತರ ಏನಾಗಿತ್ತು ಎಂಬಿತ್ಯಾದಿ ಪ್ರಶ್ನೆಗಳು ಮೂಡೋದು ಸಹಜ. ಆ ಬಗ್ಗೆ ಇಲ್ಲಿದೆ ವಿವರ.

ಫ್ಯಾಮಿಲಿ ವೀಕ್ ಆರಂಭ ಆಗುವುದಕ್ಕೂ ಹಿಂದಿನ ವಾರ ವೇದಿಕೆ ಮೇಲೆ ಇದ್ದ ಸುದೀಪ್ ಅವರು ಒಬ್ಬೊಬ್ಬರನ್ನೇ ಸೇವ್ ಮಾಡುತ್ತಾ ಬಂದರು. ಆ ಬಳಿಕ ಹನುಮಂತು ಅವರನ್ನು ಸೇವ್ ಮಾಡಿದರು. ‘ಚೆನ್ನಾಗಿ ಆಡ್ತೀನಿ ಸರ್’ ಎಂದರು ಹನುಮಂತ. ಸುದೀಪ್ ಅವರು ‘ಚೆನ್ನಾಗಿ ಆಡಬೇಕು’ ಎಂದಿದ್ದರು. ಆ ಬಳಿಕ ಅಭಿಮಾನಿಯೊಬ್ಬರಿಂದ ಹನುಮಂತನ ಅವರಿಗೆ ಪ್ರಶ್ನೆ ಇತ್ತು. ‘ಯಾಕೆ ಹನುಮಂತ ಅವರೇ ಡಲ್ ಆಗಿದ್ದೀರಿ? ಏನಾಯಿತು’ ಎಂದು ಕೇಳಿದ್ದರು. ಆಗ ಹನುಮಂತ ಅವರು ಉತ್ತರಿಸುವಾಗ ಸುದೀಪ್ ಬಳಿ ಒಂದು ಪ್ರಾಮಿಸ್ ಮಾಡಿದ್ದರು.

‘ಮನೆಯವರ ನೆನಪು ಬಂದಾಗ ಬೇಸರ ಆಗುತ್ತದೆ. ಮನೆಯಿಂದ ಹೆಲೋ ಎಂದು ಅವಾಜ್ ಬಂದರೆ ಮತ್ತೆ ಆ್ಯಕ್ಟೀವ್ ಆಗುತ್ತೇನೆ’ ಎಂದು ಸುದೀಪ್ ಎದುರು ಹೇಳಿದ್ದರು ಹನುಮಂತ. ಈಗ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಅವರು ಉತ್ತಮವಾಗಿ ಆಡಿ ತೋರಿಸಿದ್ದಾರೆ.

ಇದನ್ನೂ ಓದಿ: ಹಾರ್ಟ್ ಮಾಡುವಾಗ ತನ್ನದೇ ಕೈ ಬಣ್ಣದ ಬಗ್ಗೆ ಹನುಮಂತ ಬೇಸರ; ಅದಿತಿ ಉತ್ತರಕ್ಕೆ ನಾಚಿ ನೀರಾದ ಸ್ಪರ್ಧಿ  

ಕಳೆದ ವಾರ ಹನುಮಂತ ಅವರ ಅಪ್ಪ ಅಮ್ಮ ಬಂದಿದ್ದರು. ಈ ವೇಳೆ ಹನುಮಂತ ಖುಷಿಯಿಂದ ಸಮಯ ಕಳೆದರು. ಆ ಬಳಿಕ ಹನುಮಂತ ಅವರು ಆ್ಯಕ್ಟೀವ್ ಆಗಿದ್ದಾರೆ. ಅವರು ಮತ್ತೆ ತಮ್ಮ ಆಟ ತೋರಿಸಿದ್ದಾರೆ. ಘಟಾನುಘಟಿ ಸ್ಪರ್ಧಿಗಳಾದ ರಜತ್, ತ್ರಿವಿಕ್ರಂನ ಸೋಲಿಸಿ ಹನುಮಂತ ಅವರು ಫಿನಾಲೆ ಟಿಕೆಟ್ ಪಡೆದಿದ್ದಾರೆ. ಜೊತೆಗೆ ಅಲ್ಟಿಮೇಟ್ ಕ್ಯಾಪ್ಟನ್ ಕೂಡ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.