‘ಒಟ್ಟಿಗೆ ನಟಿಸುವಾಗಲೇ ಯಾವುದೂ ಸರಿ ಇರಲಿಲ್ಲ’; ಸಂಗೀತಾ ಜೊತೆಗಿನ ಕಿತ್ತಾಟಕ್ಕೆ ಕಾರಣ ತಿಳಿಸಿದ ವಿನಯ್

ವಿನಯ್ ಹಾಗೂ ಸಂಗೀತಾ ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವ ಹಾಗೂ ಪಾರ್ವತಿ ಪಾತ್ರ ಮಾಡಿದ್ದರು. ಸಾಮಾನ್ಯವಾಗಿ ಒಂದೇ ಧಾರಾವಾಹಿಯಲ್ಲಿ ನಟಿಸಿದರೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿರುತ್ತದೆ. ಇವರ ಮಧ್ಯೆಯೂ ಅದೇ ರ‍್ಯಾಪೋ ಇರಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ಆ ರೀತಿ ಆಗಿಲ್ಲ.

‘ಒಟ್ಟಿಗೆ ನಟಿಸುವಾಗಲೇ ಯಾವುದೂ ಸರಿ ಇರಲಿಲ್ಲ’; ಸಂಗೀತಾ ಜೊತೆಗಿನ ಕಿತ್ತಾಟಕ್ಕೆ ಕಾರಣ ತಿಳಿಸಿದ ವಿನಯ್
ವಿನಯ್-ಸಂಗೀತಾ

Updated on: Nov 03, 2023 | 9:41 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ವಿನಯ್ ಗೌಡ ಹಾಗೂ ಸಂಗೀತಾ ಮಧ್ಯೆ ಕಿತ್ತಾಟ ನಡೆಯುತ್ತಲೇ ಇದೆ. ಒಂದೇ ಧಾರಾವಾಹಿಯಲ್ಲಿ ನಟಿಸಿದ ಹೊರತಾಗಿಯೂ ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಇದು ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಇವರ ಮಧ್ಯೆ ಇಷ್ಟೊಂದು ಕಿತ್ತಾಟ ಏಕೆ ಎಂಬುದು ಅನೇಕರ ಪ್ರಶ್ನೆ ಆಗಿತ್ತು. ಇದಕ್ಕೆ ವಿನಯ್ ಕಡೆಯಿಂದ ಉತ್ತರ ಸಿಕ್ಕಿದೆ. ಅವರು ಈ ಕಿತ್ತಾಟಕ್ಕೆ ಕಾರಣವಾಗಿರೋ ವಿಚಾರ ಯಾವುದು ಎಂಬುದನ್ನು ವಿವರಿಸಿದ್ದಾರೆ.

ವಿನಯ್ ಹಾಗೂ ಸಂಗೀತಾ ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವ ಹಾಗೂ ಪಾರ್ವತಿ ಪಾತ್ರ ಮಾಡಿದ್ದರು. ಸಾಮಾನ್ಯವಾಗಿ ಒಂದೇ ಧಾರಾವಾಹಿಯಲ್ಲಿ ನಟಿಸಿದರೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿರುತ್ತದೆ. ಇವರ ಮಧ್ಯೆಯೂ ಅದೇ ರ‍್ಯಾಪೋ ಇರಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ಆ ರೀತಿ ಆಗಿಲ್ಲ. ಮೊದಲ ವಾರದಿಂದಲೇ ಇವರು ಕಚ್ಚಾಡಿಕೊಂಡರು. ಈ ವಾರವಂತೂ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು ಇವರ ಜಗಳ. ಈ ಬಗ್ಗೆ ವರ್ತೂರು ಸಂತೋಷ್​ಗೆ ಪ್ರಶ್ನೆ ಮೂಡಿದೆ.

‘ಅಣ್ಣ ನೀವಿಬ್ಬರೂ ಒಂದೇ ಧಾರಾವಾಹಿಯಲ್ಲಿ ನಟಿಸಿದವರು. ಆದರೂ ಯಾಕಿಷ್ಟು ಕಿತ್ತಾಟ? ಧಾರಾವಾಹಿಯಲ್ಲಿ ನಟಿಸುವಾಗಲೇ ನಿಮ್ಮ ಮಧ್ಯೆ ವೈರುಧ್ಯ ಇತ್ತೇ’ ಎಂದು ವಿನಯ್​ಗೆ ವರ್ತೂರು ಸಂತೋಷ್ ಪ್ರಶ್ನೆ ಮಾಡಿದ್ದಾರೆ. ‘ಹೌದು ಇತ್ತು. ಅವಳಿಗೆ ಯಾವಾಗಲೂ ನನಗಿಂತ ಚೆನ್ನಾಗಿ ಆ್ಯಕ್ಟ್ ಮಾಡಬೇಕು, ನನಗಿಂತ ಉತ್ತಮವಾಗಿರಬೇಕು ಎಂದುಕೊಳ್ಳುತ್ತಾಳೆ’ ಎಂದಿದ್ದಾರೆ ವಿನಯ್. ಇದೇ ಇಬ್ಬರೂ ಜಗಳಕ್ಕೆ ಕಾರಣ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಎಫೆಕ್ಟ್: ‘ಸೀತಾ ರಾಮ’ ಧಾರಾವಾಹಿ ಟಿಆರ್​ಪಿಯಲ್ಲಿ ಇಳಿಕೆ; ಇಲ್ಲಿದೆ ವಿವರ

ಬಿಗ್ ಬಾಸ್ ಮನೆಯಲ್ಲಿ ವಿನಯ್ ಅವರು ಎಲ್ಲರಿಗೂ ಏಕವಚನ ಕೊಟ್ಟು ಮಾತನಾಡಿಸುತ್ತಾರೆ. ಇದು ಅನೇಕರಿಗೆ ಇಷ್ಟ ಆಗುತ್ತಿಲ್ಲ. ಈ ವಾರ ಸುದೀಪ್ ಅವರು ವಿನಯ್​ಗೆ ಕ್ಲಾಸ್ ತೆಗೆದುಕೊಳ್ಳಲಿ ಎಂದು ಅನೇಕರು ಕೋರಿದ್ದಾರೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಬಹುದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 8:42 am, Fri, 3 November 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us