ಹೇಳೋದೆಲ್ಲ ಹೇಳಿ ‘ತಪ್ಪು ಶಬ್ದ ಪ್ರಯೋಗ ಮಾಡಿದ್ದರೆ ಕ್ಷಮೆ ಇರಲಿ’ ಎಂದ ವಿನಯ್ ಗೌಡ

ಮೊದಲ ವಾರ ಸಂಗೀತಾ ಹಾಗೂ ವಿನಯ್ ನಡುವೆ ಕಿತ್ತಾಟ ನಡೆಯಿತು. ಇದು ಸಾಮಾನ್ಯ ರೀತಿಯಲ್ಲೇ ಇತ್ತು. ಕಳೆದ ವಾರ ಸುದೀಪ್ ಅವರು ವಿನಯ್ ಅವರನ್ನು ಆನೆ ಎಂದು ಹೊಗಳಿದ ಬಳಿಕ ಅವರು ನಡೆದುಕೊಳ್ಳುವ ರೀತಿ ಬದಲಾಯಿತು. ಈ ವಾರ ಅವರಿಗೆ ಮಿತಿಯೇ ಇಲ್ಲ ಎಂಬ ರೀತಿಯಲ್ಲಿ ನಡೆದುಕೊಂಡರು.

ಹೇಳೋದೆಲ್ಲ ಹೇಳಿ ‘ತಪ್ಪು ಶಬ್ದ ಪ್ರಯೋಗ ಮಾಡಿದ್ದರೆ ಕ್ಷಮೆ ಇರಲಿ’ ಎಂದ ವಿನಯ್ ಗೌಡ
ವಿನಯ್​ ಗೌಡ
Follow us
ರಾಜೇಶ್ ದುಗ್ಗುಮನೆ
|

Updated on:Nov 03, 2023 | 9:44 AM

ಬಿಗ್ ಬಾಸ್ (Bigg Boss) ಮನೆಯಲ್ಲಿರುವ ವಿನಯ್ ಗೌಡ (Vinay Gowda) ಅವರ ಬಗ್ಗೆ ನೆಗೆಟಿವ್ ಮಾತು ಶುರುವಾಗಿದೆ. ಅವರು ನಡೆದುಕೊಳ್ಳುತ್ತಿರುವುದು ಆ ರೀತಿಯಲ್ಲಿದೆ. ಎಲ್ಲರ ಮೇಲೆ ಏಕವಚನ ಪ್ರಯೋಗ ಮಾಡುತ್ತಾರೆ. ಆ ಬಳಿಕ ತಮಗೆ ಗೌರವ ಸಿಗಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ಈ ಬಾರಿ ಮಹಿಳೆಯರ ಬಗ್ಗೆ ಅವರು ಬಳಕೆ ಮಾಡಿದ ಅವಾಚ್ಯ ಶಬ್ದಗಳು ಒಂದೆರಡಲ್ಲ. ಮಾಡುವುದನ್ನೆಲ್ಲ ಮಾಡಿ, ಹೇಳುವುದನ್ನೆಲ್ಲ ಹೇಳಿ ಕೊನೆಗೆ ಅವರು ಕ್ಷಮೆ ಕೇಳಿದ್ದಾರೆ. ಇದು ನಾಟಕದ ಕ್ಷಮೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಮೊದಲ ವಾರ ಸಂಗೀತಾ ಹಾಗೂ ವಿನಯ್ ನಡುವೆ ಕಿತ್ತಾಟ ನಡೆಯಿತು. ಇದು ಸಾಮಾನ್ಯ ರೀತಿಯಲ್ಲೇ ಇತ್ತು. ಕಳೆದ ವಾರ ಸುದೀಪ್ ಅವರು ವಿನಯ್ ಅವರನ್ನು ಆನೆ ಎಂದು ಹೊಗಳಿದ ಬಳಿಕ ಅವರು ನಡೆದುಕೊಳ್ಳುವ ರೀತಿ ಬದಲಾಯಿತು. ಈ ವಾರ ಅವರಿಗೆ ಮಿತಿಯೇ ಇಲ್ಲ ಎಂಬ ರೀತಿಯಲ್ಲಿ ನಡೆದುಕೊಂಡರು. ಅನೇಕರ ಮನಸ್ಸನ್ನು ನೋಯಿಸಿದರು. ಅವಾಚ್ಯ ಶಬ್ದ ಬಳಕೆ ಮಾಡಿದರು.

ಕಳೆದ ವಾರ ಎಲಿಮಿನೇಟ್ ಆಗಿದ್ದರೂ ಭಾಗ್ಯಶ್ರೀ ಅವರು ಉಳಿದುಕೊಂಡರು. ಜನರ ಕೋರಿಕೆ ಮೇರೆಗೆ ಈ ವಾರ ಎಲಿಮಿನೇಷನ್ ಇರಲ್ಲ ಎಂದು ಸುದೀಪ್ ಘೋಷಿಸಿದರು. ಈ ವಿಚಾರ ಇಟ್ಟುಕೊಂಡು ಭಾಗ್ಯಶ್ರೀಗೆ ನೋಯಿಸಿದ್ದಾರೆ ವಿನಯ್. ‘ಅವರು ದಸರಾ ಹಬ್ಬದ ಕಾರಣಕ್ಕೆ ಉಳಿದುಕೊಂಡರು. ಇಲ್ಲದಿದ್ದರೆ ಎಲಿಮಿನೇಟ್ ಆಗುತ್ತಿದ್ದರು’ ಎಂದಿದ್ದರು. ಇದು ಭಾಗ್ಯಶ್ರೀಗೆ ನೋವು ತಂದಿತ್ತು. ಅವರು ಸಾಕಷ್ಟು ಕಣ್ಣೀರು ಹಾಕಿದರು.

ಇನ್ನು, ಸಂಗೀತಾ ಹಾಗೂ ತನಿಷಾ ವಿಚಾರದಲ್ಲಿ ಅವರು ಏಕವಚನ ಬಳಕೆ ಮಾಡಿದ್ದರು. ‘ಗಂಡಸರ ರೀತಿ ಆಡು, ಬಳೆ ಹಾಕಿಕೊಂಡವರ ರೀತಿ ಆಡಬೇಡ’ ಎಂದು ಮಹಿಳೆಯರಿಗೆ ಅವಮಾನ ಮಾಡಿದ್ದರು. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿತ್ತು.

ಇದನ್ನೂ ಓದಿ: ಬಿಗ್ ಬಾಸ್ ಎಫೆಕ್ಟ್: ‘ಸೀತಾ ರಾಮ’ ಧಾರಾವಾಹಿ ಟಿಆರ್​ಪಿಯಲ್ಲಿ ಇಳಿಕೆ; ಇಲ್ಲಿದೆ ವಿವರ

ಟಾಸ್ಕ್​ ಎಲ್ಲವೂ ಮುಗಿದ ಬಳಿಕ ವಿನಯ್ ಗೌಡ ಅವರು ಕ್ಷಮೆ ಕೇಳಿದರು. ‘ನನ್ನಿಂದ ತಪ್ಪಾಗಿದ್ದರೆ, ನಾನು ಕೆಟ್ಟ ಶಬ್ದ ಬಳಕೆ ಮಾಡಿದರೆ ನಮ್ಮ ಮನೆತನದವರಿಗೆ ಹಾಗೂ ಸಂಗೀತಾ ಮನೆತನದವರಿಗೆ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ ವಿನಯ್.  ಈ ಕ್ಷಮೆಯನ್ನು ನಾವು ಒಪ್ಪಲ್ಲ ಎಂದಿದ್ದಾರೆ ಪ್ರೇಕ್ಷಕರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:41 am, Fri, 3 November 23

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ