
ಕೊವಿಡ್ ಹಾವಳಿ ಸಂಪೂರ್ಣವಾಗಿ ಕಡಿಮೆಯಾಗಿದೆ. ಈ ಕಾರಣಕ್ಕೆ ಚಿತ್ರರಂಗ ಹಾಗೂ ಕಿರುತೆರೆಗೆ ಹೊಸ ಕಳೆ ಬಂದಿದೆ. ದೊಡ್ಡ ದೊಡ್ಡ ಬಜೆಟ್ನ ಸಿನಿಮಾಗಳು ರಿಲೀಸ್ ಆಗಿ ಅಬ್ಬರಿಸುತ್ತಿವೆ. ಕಿರುತೆರೆಯ ರಿಯಾಲಿಟಿ ಶೋಗಳಿಗೆ ಅದ್ದೂರಿತನ ಮರಳಿದೆ. ಅಂತೆಯೇ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಬಿಗ್ ಬಾಸ್’ (Bigg Boss) ಬೇರೆಬೇರೆ ಭಾಷೆಗಳಲ್ಲಿ ಆರಂಭ ಆಗುತ್ತಿದೆ. ಕನ್ನಡದ ಟಿವಿ ಸೀಸನ್ಗೆ ಕ್ಷಣಗಣನೆ ಆರಂಭ ಆಗಿದೆ. ‘ಹಿಂದಿ ಬಿಗ್ ಬಾಸ್ 16’ನ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಸಲ್ಮಾನ್ ಖಾನ್ (Salman Khan) ಅವರು ಪ್ರತಿಬಾರಿಯಂತೆ ಈ ಬಾರಿ ಶೋ ನಡೆಸಿಕೊಡಲಿದ್ದಾರೆ. ಈ ಶೋಗೆ ದೊಡ್ಡ ಟ್ವಿಸ್ಟ್ ಕೂಡ ಇದೆ.
‘ಹಿಂದಿ ಬಿಗ್ ಬಾಸ್ ಸೀಸನ್ 16’ರ ಬಗ್ಗೆ ಈ ಮೊದಲೇ ಪ್ರೋಮೋಗಳು ಹರಿದಾಡಿದ್ದವು. ಈಗ ಮೊದಲ ಪ್ರೋಮೋ ರಿಲೀಸ್ ಮಾಡಲಾಗಿದೆ. ಸಲ್ಮಾನ್ ಖಾನ್ ಅವರು ನಿರೂಪಕನಾಗಿ ಮರಳಿದ್ದಾರೆ. ‘ಈ ಬಾರಿ ಬಿಗ್ ಬಾಸ್ ಕೂಡ ಆಟ ಆಡಲಿದ್ದಾರೆ’ ಎಂಬ ಲೈನ್ ಪ್ರೋಮೋದಲ್ಲಿ ಹೈಲೈಟ್ ಆಗಿದೆ.
ಸಲ್ಮಾನ್ ಖಾನ್ ಇರುವ ಪ್ರೋಮೋವನ್ನು ಕಲರ್ಸ್ ಟಿವಿ ಹಂಚಿಕೊಂಡಿದೆ. ‘15 ವರ್ಷಗಳಲ್ಲಿ ಎಲ್ಲರೂ ತಮ್ಮತಮ್ಮ ಆಟ ಆಡಿದ್ದಾರೆ. ಆದರೆ, ಈ ಬಾರಿ ಬಿಗ್ ಬಾಸ್ ಕೂಡ ಆಟ ಆಡುತ್ತಾರೆ’ ಎಂದು ಕ್ಯಾಪ್ಶನ್ ನೀಡಲಾಗಿದೆ. ಇದು ಏನು ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಈ ಬಾರಿ ಬಿಗ್ ಬಾಸ್ ಹೊಸ ರೀತಿಯಲ್ಲಿ ಮೂಡಿ ಬರಲಿದೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಕೂಡ ಆಟ ಆಡುತ್ತಾರೆ ಎನ್ನುವ ಲೈನ್ನ ನಿಜವಾದ ಅರ್ಥ ತಿಳಿಯಲು ಬಿಗ್ ಬಾಸ್ ಪ್ರಿಯರು ಕಾದಿದ್ದಾರೆ.
ಇದನ್ನೂ ಓದಿ: ಖ್ಯಾತ ನಿರ್ದೇಶಕ, ನಿರ್ಮಾಪಕ ಸಾವನ್ ಕುಮಾರ್ ನಿಧನ; ಕಂಬನಿ ಮಿಡಿದ ಸಲ್ಮಾನ್ ಖಾನ್
ಪ್ರತಿ ವರ್ಷ ಬಿಗ್ ಬಾಸ್ ಆರಂಭವಾದಾಗ ಮನೆಯ ಲುಕ್ ಬದಲಾಯಿಸಲಾಗುತ್ತದೆ. ಕಳೆದ ಬಾರಿ ಇಡೀ ಮನೆಗೆ ಕಾಡಿನ ಥೀಮ್ ನೀಡಲಾಗಿತ್ತು. ಈ ಬಾರಿ ಬಿಗ್ ಬಾಸ್ಗೆ ಯಾವ ರೀತಿಯ ಲುಕ್ ಕೊಡಲಾಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಈ ಬಾರಿಯ ಬಿಗ್ ಬಾಸ್ ಮನೆ ಸಖತ್ ಅದ್ದೂರಿಯಾಗಿ ಇರಲಿದೆ ಎಂದು ವರದಿ ಆಗಿದೆ. ಮನೆಯ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಕೂಡ ಆಗಿವೆ.