ವಸುಧರಾಳಿಗೆ ಪ್ರಪೋಸ್ ಮಾಡಲು ಗೌತಮ್ ಭರ್ಜರಿ ತಯಾರಿ ಮಾಡಿದ್ದ. ಆದರೆ ಗೌತಮ್ ಪ್ಲಾನ್ ಅನ್ನು ರಿಷಿ ಠುಸ್ ಮಾಡಿದ. ಗೌತಮ್ ಇನ್ನೇನು ವಸುಗೆ ಪ್ರಪೋಸ್ ಮಾಡೇ ಬಿಟ್ಟ ಎನ್ನುವಷ್ಟೊತ್ತಿಗೆ ರಿಷಿ ಅಡ್ಡ ಬಂದ. ವಸುಧರಾ ಎಜುಕೇಶನ್ ಪ್ರಾಜೆಕ್ಟ್ ರೆಡಿ ಮಾಡಿ ರಿಷಿಗೆ ವಿವರಣೆ ನೀಡಲು ತಯಾರಿ ನಡೆಸುತ್ತಿದ್ದಳು. ವಸು ಒಬ್ಬಳೇ ಇದ್ದಾಳೆ, ಪ್ರಪೋಸ್ ಮಾಡಲು ಸರಿಯಾದ ಸಮಯವೆಂದು ಪ್ಲಾನ್ ಮಾಡಿ ಗೌತಮ್ ಎಂಟ್ರಿ ಕೊಟ್ಟ. ಅಲ್ಲೇ ಇದ್ದ ರೋಸ್ ಹಿಡಿದು ವಸುಗೆ ಕೊಟ್ಟು ಐ ಲವ್ ಯು ಹೇಳಲು ಮುಂದಾದ. ರೋಸ್ ಎತ್ತಿ ವಸುಗೆ ಕೊಡುವಾಗ ರಿಷಿ ಬಂದು ತಡೆದ. ರಿಷಿ ದಿಢೀರ್ ಎಂಟ್ರಿ ಗೌತಮ್‌ಗೆ ಶಾಕ್ ನೀಡಿದು. ವಸುಗೆ ತಿಳಿಯದ ಹಾಗೆ ಗೌತಮ್‌ನನ್ನು ಹೊರ ಕಳುಹಿಸಿದ. ನಿನಗೇನು ಕೆಲಸ ಇಲ್ಲಿ ಎಂದು ಗೌತಮ್‌ಗೆ ಹೊರ ಹೋಗುವಂತೆ ಹೇಳಿದ. ಪದೇ ಪದೇ ರಿಷಿ ಅಡ್ಡ ಬರ್ತಿದ್ದಾನೆ ಎಂದು ಬೈಯ್ದು ಕೊಳ್ಳುತ್ತಾ ಗೌತಮ್ ಅಲ್ಲಿಂದ ಹೊರಟ.
ವಸು ತಾನು ರೆಡಿ ಮಾಡಿದ್ದ ಪ್ರಾಜೆಕ್ಟ್ ಅನ್ನು ರಿಷಿಗೆ ಒಪ್ಪಿಸಿದಳು. ರಿಷಿ ಇಂಪ್ರೆಸ್ ಆಗಿ ಗೌತಮ್ ಬೀಳಿಸಿದ್ದ ರೋಸ್ ತೆಗೆದು ವಸುಗೆ ನೀಡಿದ. ರಿಷಿ ಕೊಟ್ಟ ರೋಸ್ ಹಿಡಿದು ಇದನ್ನು ಜೋಪಾನವಾಗಿ ಕಾಪಾಡಿಕೊಳ್ಳುತ್ತೀನಿ ಎಂದು ವಸು ಮನಸ್ಸಲ್ಲೇ ಅಂದುಕೊಂಡಳು. ಬಳಿಕ ಇಬ್ಬರೂ ಒಟ್ಟಿಗೆ ಹೊರಬರುತ್ತಿರುವುದನ್ನು ನೋಡಿದ ಗೌತಮ್. ವಸು ಕೈಯಲ್ಲಿದ್ದ ರೋಸ್ ನೋಡಿ ಶಾಕ್ ಆದ.
ಜಗತಿ ಮತ್ತು ಮಹೇಂದ್ರ ಇಬ್ಬರೂ ಒಟ್ಟಿಗೆ ತೀರಾ ಆತ್ಮೀಯವಾಗಿ ಮಾತನಾಡುತ್ತಿರುವುದನ್ನು ಗೌತಮ್ ಗಮನಿಸಿದ. ಜಗತಿ ಬಳಿ ಮಾತನಾಡಬೇಕೆಂದು ಬಂದಿದ್ದ ಗೌತಮ್‌ಗೆ ಇಬ್ಬರ ಆಪ್ತತೆ ಅಚ್ಚರಿ ಮೂಡಿಸಿತು. ಇಬ್ಬರೂ ಸಹೋದ್ಯೋಗಿಗಳ ಹಾಗೆ ಇಲ್ಲ ಅಂತ ಯೋಚಿಸಿದ. ಗೌತಮ್‌ಗೆ ಮಹೇಂದ್ರ ಮತ್ತು ಜಗತಿ ಇಬ್ಬರು ಗಂಡ ಹೆಂಡತಿ, ಜಗತಿ ಮೇಡಮ್ ರಿಷಿಯ ತಾಯಿ ಎನ್ನುವ ಸತ್ಯ ಗೊತ್ತಿಲ್ಲ. ರಿಷಿ ಕೂಡ ಗೌತಮ್ ಬಳಿ ಯಾವುದೇ ಸತ್ಯ ಬಾಯ್ಬಿಟ್ಟಿಲ್ಲ. ರಿಷಿ ಬಳಿ ಬಂದು ಮಹೇಂದ್ರ ಮತ್ತು ಜಗತಿ ನಡುವಿನ ಸಂಬಂಧದ ಬಗ್ಗೆ ಗೌತಮ್ ಪ್ರಶ್ನೆ ಮಾಡಿದ. ಇದರಿಂದ ಕೋಪಗೊಂಡ ರಿಷಿ ಏನು ಮಾತನಾಡದೇ ‘ನನಗೆ ಕೆಲಸವಿದೆ’ ಎಂದು ಹೇಳಿ ಹೊರಟ.
ರಿಷಿ ಮತ್ತು ವಸು ಇಬ್ಬರೂ ಪ್ರಾಜೆಕ್ಟ್ ವರ್ಕ್ ಮೇಲೆ ಹಳ್ಳಿಗೆ ಹೊರಟರು. ದಾರಿಯಲ್ಲಿ ರಿಷಿ ತನ್ನ ತಂದೆಯಿಂದ ಜಗತಿ ಮೇಡಮ್‌ನ ದೂರ ಇರುವಂತೆ ಹೇಳು ಎಂದು ವಸುಗೆ ಹೇಳಿದ. ಆದರೆ ವಸು ಇದು ನನ್ನ ಕೈಯಲ್ಲಿ ಸಾಧ್ಯವಿಲ್ಲ ಎಂದು ರಿಷಿಗೆ ಸಂಬಂಧದ ಪಾಠ ಮಾಡಿದಳು. ತಾಯಿ ಅಂತ ನೀವು ಒಪ್ಪಿಕೊಳ್ಳದಿದ್ದರೂ ಮಹೇಂದ್ರ ಸರ್ ಮತ್ತು ಜಗತಿ ಮೇಡಮ್ ಗಂಡ-ಹೆಂಡತಿ ಎನ್ನುವ ಸತ್ಯ ಬದಲಾಗಲ್ಲ. ಇಬ್ಬರದ್ದು ಪವಿತ್ರವಾದ ಸಂಬಂಧ. ಇದನ್ನು ತಪ್ಪು ಅಂತ ಹೇಳಲು ಸಾಧ್ಯವಿಲ್ಲ ಎಂದು ದೀರ್ಘವಾದ ವಿವರಣೆ ನೀಡಿದಳು.
ಬಳಿಕ ರಿಷಿ ಮತ್ತು ವಸು ಇಬ್ಬರೂ ಹಳ್ಳಿಗೆ ಎಂಟ್ರಿ ಕೊಟ್ಟರು. ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ನೀರು ಕೊಡುತ್ತಿದ್ದ ರಿಷಿಗೆ ಬೈಕ್ ಸವಾರನೊಬ್ಬ ಮೈ ಮೇಲೆ ಕೊಚ್ಚೆ ಹಾರಿಸಿ ಹೋದ. ರಿಷಿ ಬಟ್ಟೆ ಗಲೀಜಾಯಿತು. ಬಳಿಕ ವಸು ತಾನೆ ರಿಷಿ ಕೋಟ್ ಅನ್ನು ಕ್ಲೀನ್ ಮಾಡಿದಳು. ರಿಷಿ ಬೇಡ ಎಂದರೂ ನಾನಿರುವಾಗ ನೀವು ಇಂಥ ಕೆಲಸ ಮಾಡಬಾರದು ಎಂದು ಹೇಳುತ್ತಾ ಕ್ಲೀನ್ ಮಾಡಿದಳು. ವಸುಧರಾಳ ಪ್ರೀತಿ, ಕಾಳಜಿಗೆ ರಿಷಿ ಮೌನಿಯಾದ. ವಸು ಮೇಲೆ ಲವ್ ಆಗಿರುವ ವಿಚಾರವನ್ನು ರಿಷಿ ಒಪ್ಪಿಕೊಳ್ಳುತ್ತಾನಾ? ಇತ್ತ ಗೌತಮ್ ತನ್ನ ಪ್ರೀತಿಯನ್ನು ವಸುಗೆ ಹೇಳ್ತಾನಾ? ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.