Amitabh Bachchan: ‘ಅಮಿತಾಭ್ ಫೋನ್ ಎತ್ತುವುದೇ ಇಲ್ಲ’ ಎಂದು ದೂರಿದ ಜಯಾ ಬಚ್ಚನ್; ಬಿಗ್ಬಿ ಪ್ರತಿಕ್ರಿಯೆ ಏನು?
KBC 13: ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ 1000 ಸಂಚಿಕೆಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಡೆದ ವಿಶೇಷ ಸಂಚಿಕೆಯಲ್ಲಿ ಬಿಗ್ಬಿ ಪುತ್ರಿ ಶ್ವೇತಾ ನಂದಾ, ಮೊಮ್ಮಗಳು ನವ್ಯಾ ನವೇಲಿ ನಂದಾ ಕಾಣಿಸಿಕೊಂಡಿದ್ದಾರೆ. ಅಮಿತಾಭ್ ಪತ್ನಿ ಜಯಾ ಬಚ್ಚನ್ ವರ್ಚುವಲ್ ಸ್ಕ್ರೀನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಕುತೂಹಲಕರ ಮಾತುಕತೆ ನಡೆದಿದೆ.
ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುತ್ತಿರುವ ‘ಕೌನ್ ಬನೇಗಾ ಕರೋಡ್ಪತಿ’ (Kaun Banega Crorepathi) ಹೊಸ ಇತಿಹಾಸ ಸೃಷ್ಟಿಸಿದೆ. ರಿಯಾಲಿಟಿ ಶೋ ಆದ ಅದು 1000 ಸಂಚಿಕೆಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಈ ವಾರ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ಇದರಲ್ಲಿ ಅಮಿತಾಭ್ ಮಗಳು ಶ್ವೇತಾ ನಂದಾ (Shwetha Nanda) ಮತ್ತು ಮೊಮ್ಮಗಳು ನವ್ಯಾ ನವೇಲಿ ನಂದಾ (Navya Naveli Nanda) ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ, ಬಿಗ್ಬಿ ಪತ್ನಿ ಜಯಾ ಬಚ್ಚನ್ (Jaya Bachchan) ವರ್ಚುವಲ್ ಸ್ಕ್ರೀನ್ ಮೂಲಕ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಎಪಿಸೋಡ್ ಚಿತ್ರೀಕರಣವಾಗಿದ್ದು, ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಇದರಲ್ಲಿನ ಜಯಾ ಬಚ್ಚನ್ ಹಾಗೂ ಅಮಿತಾಭ್ ಮಾತುಕತೆ ಎಲ್ಲರ ಮುಖದಲ್ಲೂ ನಗು ತರಿಸಿದೆ. ಮಾಜಿ ರಾಜಕಾರಣಿ, ನಟಿ ಜಯಾ ಬಚ್ಚನ್ ಸ್ಕ್ರೀನ್ನಲ್ಲಿ ಕಾಣಿಸಿಕೊಂಡು ಅಮಿತಾಭ್ ಕಾಲೆಳೆಯುತ್ತಿರುವ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಜಯಾ ಬಚ್ಚನ್ ಅಮಿತಾಭ್ ಕುರಿತು ಬಹಳಷ್ಟು ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಜಯಾ ಬಚ್ಚನ್ ಹಂಚಿಕೊಂಡ ವಿಚಾರಗಳಲ್ಲಿ ಮೊದಲನೆಯದು, ಅಮಿತಾಭ್ ಅವರ ಫೋನ್ ಕರೆಯನ್ನು ಎತ್ತುವುದಿಲ್ಲವಂತೆ. ಈ ಕುರಿತು ಜಯಾ ಬಚ್ಚನ್ ಮಾತನಾಡುತ್ತಾ, ‘‘ನೀವು ಅವರಿಗೆ ಫೋನ್ ಮಾಡಿ, ಆದರೆ ಅವರು ಸ್ವೀಕರಿಸುವುದಿಲ್ಲ’’ ಎಂದು ದೂರಿದ್ಧಾರೆ. ಪತ್ನಿಯ ಆಕ್ಷೇಪಕ್ಕೆ ಸಮರ್ಥನೆ ನೀಡಿದ ಅಮಿತಾಭ್, ‘‘ಇಂಟರ್ನೆಟ್ ಕೆಲಸ ಮಾಡುತ್ತಿಲ್ಲ ಎಂದಾದರೆ ಅದು ನನ್ನ ತಪ್ಪು ಹೇಗಾಗುತ್ತದೆ’’ ಎಂದು ಅವಲತ್ತುಕೊಂಡಿದ್ದಾರೆ.
ಜಯಾ ಅವರ ದೂರಿಗೆ ಮಗಳ ಶ್ವೇತಾ ನಂದ ತಕ್ಷಣವೇ ದನಿಗೂಡಿಸಿದ್ದು, ಅಮಿತಾಭ್ ಅವರ ಕಾಲೆಳೆದಿದ್ದಾರೆ. ‘‘ಇಂಟರ್ನೆಟ್ ಸರಿ ಇಲ್ಲ ಎನ್ನುತ್ತಾರೆ. ಆದರೆ ಟ್ವಿಟರ್ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ’’ ಎಂದಿದ್ದಾರೆ. ಮೊಮ್ಮಗಳು ನವ್ಯಾ ನವೇಲಿ ನಂದಾ ಈ ಎಲ್ಲವನ್ನೂ ಗಮನಿಸಿ ಹೊಸ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ‘‘ನಾವು ಪ್ರತಿ ಬಾರಿ ಬ್ಯೂಟಿ ಪಾರ್ಲರ್ನಿಂದ ಹೊರಬಂದಾಗಲೂ ಅಜ್ಜಿಗೆ (ಜಯಾ ಬಚ್ಚನ್) ಚೆನ್ನಾಗಿ ಕಾಣುತ್ತಿದ್ದೀಯಾ ಎನ್ನುತ್ತೀರಲ್ಲಾ.. ಅದನ್ನು ನಿಜವಾಗಿ ಹೇಳುತ್ತೀರೋ ಅಥವಾ ಸುಳ್ಳೇ?’’ ಎಂದು ಕಾಲೆಳೆದಿದ್ದಾರೆ.
ಎಲ್ಲರ ಮಾತಿನ ದಾಳಿಯಿಂದ ತಪ್ಪಿಸಿಕೊಳ್ಳುತ್ತಾ ಅಮಿತಾಭ್, ವೇದಿಕೆಯಲ್ಲೇ ಪತ್ನಿ ಜಯಾ ಬಚ್ಚನ್ ಅವರನ್ನು ಹೊಗಳಿದ್ದಾರೆ. ಆಗ ಜಯಾ ಬಚ್ಚನ್ ಪ್ರತ್ಯುತ್ತರಿಸಿದ್ದು, ‘‘ನೀವು ಸುಳ್ಳು ಹೇಳುವಾಗ ಚೆನ್ನಾಗಿ ಕಾಣುವುದಿಲ್ಲ’’ ಎಂದಿದ್ದಾರೆ. ಇದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ.
View this post on Instagram
ಈ ನಡುವೆ ಕೆಬಿಸಿ 1000 ಸಂಚಿಕೆ ಪೂರೈಸಿದ್ದಕ್ಕೆ ಅಮಿತಾಭ್ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಮಿತಾಭ್ 2000ನೇ ಇಸವಿಯಲ್ಲಿ ಪ್ರಾರಂಭವಾದ ಕೌನ್ ಬನೇಗಾ ಕರೋಡ್ಪತಿಯನ್ನು ನಡೆಸಿಕೊಡುತ್ತಿದ್ದಾರೆ. ಇದುವರೆಗಿನ 13 ಸೀಸನ್ಗಳಲ್ಲಿ 2007ರ ಮೂರನೇ ಸೀಸನ್ಅನ್ನು ಮಾತ್ರ ಶಾರುಖ್ ಖಾನ್ ನಡೆಸಿಕೊಟ್ಟಿದ್ದರು.
ಇದನ್ನೂ ಓದಿ:
ಆಹಾರಕ್ಕಿಂತಲೂ ನನಗೆ ಸೆಕ್ಸ್ ಮುಖ್ಯ ಎಂದು ಹೇಳಿದ್ದ ಸಮಂತಾ; ವಿಡಿಯೋ ವೈರಲ್
ಪುನೀತ್-ಅಶ್ವಿನಿ ವಿವಾಹ ವಾರ್ಷಿಕೋತ್ಸವ; ಮದುವೆ ಫೋಟೋ ವೈರಲ್
Published On - 5:33 pm, Wed, 1 December 21