Jothe Jotheyali: ಆರ್ಯವರ್ಧನ್ ಬದುಕಿರುವ ವಿಚಾರ ಅನುಗೆ ತಿಳಿದೇ ಹೋಯ್ತು? ಸಿಕ್ಕಿದೆ ದೊಡ್ಡ ಸೂಚನೆ

| Updated By: ಮದನ್​ ಕುಮಾರ್​

Updated on: Dec 08, 2022 | 6:30 AM

Jothe Jotheyali Serial Update: ಆರ್ಯವರ್ಧನ್ ಸತ್ತಿಲ್ಲ ಎನ್ನುವ ವಿಚಾರದಲ್ಲಿ ಅನುಗೆ ಅನೇಕ ಸೂಚನೆ ಸಿಗುತ್ತಿದೆ. ವೈದ್ಯರು ಮರಣಪತ್ರ ನೀಡದೇ ಇರುವುದು ಇದಕ್ಕೆ ಮುಖ್ಯ ಕಾರಣ.

Jothe Jotheyali: ಆರ್ಯವರ್ಧನ್ ಬದುಕಿರುವ ವಿಚಾರ ಅನುಗೆ ತಿಳಿದೇ ಹೋಯ್ತು? ಸಿಕ್ಕಿದೆ ದೊಡ್ಡ ಸೂಚನೆ
ಜೊತೆ ಜೊತೆಯಲಿ ಧಾರಾವಾಹಿ
Follow us on

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಇದನ್ನೂ ಓದಿ
ವಿಷ ಇರುವ ಪಾಯಸ ಕುಡಿದು ಆಸ್ಪತ್ರೆ ಸೇರಿದ ಸಂಜು; ಅನುಗೆ ಸಂಕಟ
ಝೇಂಡೆಯ ಅಸಲಿ ಮುಖ ರಿವೀಲ್​; ವಿಲನ್ ಆದ ರಮ್ಯಾ
ಅನು ಸಿರಿಮನೆ-ಸಂಜುನಿಂದ ಮುರಿದು ಬಿತ್ತು ರಮ್ಯಾ ಎಂಗೇಜ್​ಮೆಂಟ್
ಎಲ್ಲರ ಎದುರು ಸಂಜುಗೆ ಆರ್ಯ ಎಂದು ಕರೆದ ಝೇಂಡೆ; ಸಿಟ್ಟಾದ ಅನು ಸಿರಿಮನೆ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಸಂಜುನೇ ಆರ್ಯವರ್ಧನ್​ ಅನ್ನೋ ವಿಚಾರ ಝೇಂಡೆಗೆ ಗೊತ್ತಾಗಿದೆ. ಪ್ಲ್ಯಾನ್ ಮಾಡಿ ಈ ವಿಚಾರವನ್ನು ಪ್ರಿಯದರ್ಶಿನಿಯಿಂದ ತಿಳಿದುಕೊಂಡಿದ್ದಾನೆ ಝೇಂಡೆ. ಈ ಕಾರಣಕ್ಕೆ ಆತ ಸಂಜುನ ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ. ಆರ್ಯವರ್ಧನ್ ಹಾಗೂ ಝೇಂಡೆ ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದರು. ಈ ಕಾರಣಕ್ಕೆ ಸಂಜುನ ಕರೆದುಕೊಂಡು ಝೇಂಡೆ ಸುತ್ತಾಡಲು ಹೋಗಿದ್ದಾನೆ. ಹಳೆಯ ಜಾಗಗಳಿಗೇ ಭೇಟಿ ನೀಡುತ್ತಿದ್ದಾನೆ. ಈ ಮೂಲಕ ಆತನಿಗೆ ಹಳೆಯ ನೆನಪು ಮರಳಿಸುವ ಪ್ರಯತ್ನವನ್ನು ಝೇಂಡೆ ಮಾಡುತ್ತಿದ್ದಾನೆ.

ಅನುಗೆ ಮೂಡಿತು ಅನುಮಾನ

ಆರ್ಯವರ್ಧನ್ ಬುದಕಿದ್ದಾನೆ ಅನ್ನುವ ವಿಚಾರ ಇನ್ನೂ ರಿವೀಲ್ ಆಗಿಲ್ಲ. ಇದು ಗೊತ್ತಿರುವುದು ಕೆಲವೇ ಕೆಲವು ಮಂದಿಗೆ ಮಾತ್ರ. ಈ ವಿಚಾರದಲ್ಲಿ ಅನುಗೆ ಅನುಮಾನ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಮೀರಾ ಹೆಗಡೆ. ಆರ್ಯ ಬದುಕಿದ್ದಾನೆ ಎಂಬ ವಿಚಾರವನ್ನು ಝೇಂಡೆ ಖಚಿತ ಮಾಡಿದ್ದ. ಆರ್ಯ ಬದುಕಿದ್ದಾನೆ ಅನ್ನೋದನ್ನು ನಂಬೋಕೆ ಮೀರಾಗೆ ಸಾಧ್ಯವಾಗಿಲ್ಲ. ಹೀಗಾಗಿ, ಅನು ಬಳಿ ಆರ್ಯವರ್ಧನ್​ ಮರಣಪತ್ರ ನೀಡುವಂತೆ ಕೋರಿದ್ದಾಳೆ.

ಇದನ್ನೂ ಓದಿ: ಮೀರಾ ಮಾಡಿದ ಮಸಲತ್ತಿನ ಬಗ್ಗೆ ಸಂಜುಗೆ ಬಂತು ಅನುಮಾನ; ಝೇಂಡೆಗೆ ಆರ್ಯನೇ ವಿಲನ್

ಆಸ್ಪತ್ರೆಯಿಂದ ಆರ್ಯವರ್ಧನ್ ಮರಣಪತ್ರ ತೆಗೆದುಕೊಳ್ಳಲು ಹೋದಾಗ ಅನುಗೆ ಅನುಮಾನ ಮೂಡಿದೆ. ಮರಣಪತ್ರ ನೀಡಲು ಆಸ್ಪತ್ರೆಯವರು ಹಿಂದೇಟು ಹಾಕುತ್ತಿದ್ದಾರೆ. ಈ ವಿಚಾರದಲ್ಲಿ ಅನುಗೆ ಅನುಮಾನ ಮೂಡಿದೆ. ಈ ಕಾರಣಕ್ಕೆ ಆರ್ಯವರ್ಧನ್ ಮೃತಪಡುವಾಗ ಯಾವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತೋ ಅದೇ ಆಸ್ಪತ್ರೆಗೆ ಅನು ತೆರಳಿದ್ದಾಳೆ. ಅಲ್ಲಿನ ಮುಖ್ಯ ವೈದ್ಯರನ್ನು ಭೇಟಿ ಮಾಡಿದ್ದಾಳೆ.

ಇದನ್ನೂ ಓದಿ: Jothe Jotheyali: ಸಂಜುಗೆ ಹಳೇ ನೆನಪು ಮರಳಿಸಲು ಝೇಂಡೆ ಪ್ರಯತ್ನ; ಆರ್ಯನ ಸಾವಿನ ರಹಸ್ಯ ಬೆನ್ನತ್ತಿ ಹೊರಟ ಅನು

ವೈದ್ಯರನ್ನು ಭೇಟಿ ಮಾಡುವಾಗ ಅನು ಸಾಮಾನ್ಯ ರೀತಿಯಲ್ಲೇ ಮಾತನಾಡಿದ್ದಳು. ಆರ್ಯವರ್ಧನ್ ಬದುಕಿದ್ದಾನೆ ಎನ್ನುವ ಸತ್ಯ ಅನುಗೆ ಗೊತ್ತಿಲ್ಲ ಎನ್ನುವ ವಿಚಾರ ಮುಖ್ಯ ವೈದ್ಯರಿಗೆ ಗೊತ್ತಿರಲಿಲ್ಲ. ಈ ಕಾರಣಕ್ಕೆ ಎಲ್ಲವನ್ನೂ ಅವರು ಹೇಳುವವರಿದ್ದರು. ಆ ಸಂದರ್ಭಕ್ಕೆ ಮತ್ತೊಂದು ವೈದ್ಯರು ಕರೆ ಮಾಡಿ, ‘ಅದು ಪೊಲೀಸ್ ಪ್ರಕ್ರಿಯೆ. ಅನುಗೆ ಏನನ್ನೂ ಹೇಳುವಂತಿಲ್ಲ’ ಎಂದು ಹೇಳಿದ್ದಾರೆ. ಇದನ್ನು ಅನು ಕೂಡ ಕೇಳಿಸಿಕೊಂಡಿದ್ದಾಳೆ. ಇದರಿಂದ ಅನುಗೆ ಅನುಮಾನ ಹೆಚ್ಚಿದೆ. ಆರ್ಯವರ್ಧನ್ ಬದುಕಿದ್ದಾನೆ ಅನ್ನೋದು ಆಕೆಗೆ ಖಚಿತ ಆಗುತ್ತಿದೆ.

ಪೊಲೀಸ್ ಪ್ರಕ್ರಿಯೆ ಎಂದು ಹೇಳಿರುವುದರಿಂದ ಅನುಗೆ ಸಿಟ್ಟು ಬಂದಿದೆ. ಹೀಗಾಗಿ, ಆಕೆ ಪೊಲೀಸರನ್ನೇ ಕರೆದು ತರಲು ಮುಂದಾಗಿದ್ದಾಳೆ. ಆರ್ಯವರ್ಧನ್ ಸತ್ತಿಲ್ಲ ಎನ್ನುವ ವಿಚಾರದಲ್ಲಿ ಅನುಗೆ ಅನೇಕ ಸೂಚನೆ ಸಿಗುತ್ತಿದೆ. ವೈದ್ಯರು ಆರ್ಯವರ್ಧನ್​ನ ಮರಣಪತ್ರ ನೀಡದೇ ಇರುವುದು ಇದಕ್ಕೆ ಮುಖ್ಯ ಕಾರಣ. ಈ ವಿಚಾರದಲ್ಲಿ ಆಕೆ ಈಗ ತನಿಖೆಗೆ ಮುಂದಾಗಬಹುದು. ಆಗ ಅಸಲಿ ವಿಚಾರ ಗೊತ್ತಾದರೂ ಗೊತ್ತಾಗಬಹುದು.

ದುಡುಕಿ ನಿರ್ಧಾರ ತೆಗೆದುಕೊಂಡ ಆರಾಧನಾ?

ಆರಾಧನಾ ದುಡುಕಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾಳೆ. ಸಂಜುನೇ ತನ್ನ ಗಂಡ ಎಂದು ಭಾವಿಸಿದ್ದಾಳೆ. ಆತ ಆರ್ಯವರ್ಧನ್ ಎನ್ನುವ ಸತ್ಯ ಅವಳಿಗೆ ಗೊತ್ತಿಲ್ಲ. ಮತ್ತೊಂದು ಕಡೆ ಸಂಜು ಆಕೆಯ ಕೈಗೆ ಸಿಗುತ್ತಿಲ್ಲ. ಈ ಕಾರಣಕ್ಕೆ ಆಕೆ ದುಡುಕಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾಳೆ. ಹೇಗಾದರೂ ಮಾಡಿ ಸಂಜು ಜತೆ ಆಕೆ ವಿದೇಶಕ್ಕೆ ತೆರಳಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾಳೆ. ಒಂದೊಮ್ಮೆ ಹೀಗಾದಲ್ಲಿ ಅನುನಿಂದ ಸಂಜು ದೂರ ಆಗಲಿದ್ದಾನೆ. ಇನ್ನು, ತನ್ನ ಪತಿ ಬದುಕಿಲ್ಲ ಎನ್ನುವ ವಿಚಾರ ಗೊತ್ತಾದರೆ ಆರಾಧನಾಗೆ ಬೇಸರ ಆಗಬಹುದು. ಈ ಮೊದಲು ಅದನ್ನು ಹೇಳುವ ಪ್ರಯತ್ನ ನಡೆದಿತ್ತು. ಆ ಸಂದರ್ಭದಲ್ಲಿ ಅದನ್ನು ನಂಬಲು ಆರಾಧನಾ ಒಪ್ಪಿರಲಿಲ್ಲ. ಈಗಲೂ ಹಾಗೆ ಆಗಲೂಬಹುದು. ಇತ್ತ, ಸಂಜು ಪದೇಪದೇ ಆರಾಧನಾಳಿಂದ ದೂರ ಹೋಗಲು ಪ್ರಯತ್ನಿಸುತ್ತಲೇ ಇದ್ದಾನೆ. ಇದು ಮನೆಯವರಿಗೆ ಅಚ್ಚರಿ ಮೂಡಿಸಿದೆ.

ಶ್ರೀಲಕ್ಷ್ಮಿ ಎಚ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.