ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಅನು ವೈದ್ಯರನ್ನು ಭೇಟಿ ಮಾಡಿದ್ದಾಳೆ. ಈ ವೇಳೆ ಆರ್ಯವರ್ಧನ್ ಸಾವಿನ ವಿಚಾರ ಸಾಕಷ್ಟು ಅನುಮಾನ ಮೂಡಿಸಿದೆ. ಆರ್ಯವರ್ಧನ್ ಸತ್ತಿಲ್ಲ ಎನ್ನುವ ಬಗ್ಗೆ ಆಕೆಗೆ ಸಾಕಷ್ಟು ಗೊಂದಲಗಳು ಮೂಡಿವೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಯವರು ಮರಣಪತ್ರ ನೀಡಲು ವೈದ್ಯರು ನಿರಾಕರಿಸಿದ್ದಾರೆ. ಇದರಿಂದ ಅನುಗೆ ಹುಟ್ಟಿರುವ ಅನುಮಾನ ಹೆಚ್ಚಿದೆ. ಮತ್ತೊಂದು ಕಡೆ ಅನುನ ಹುಡುಕಿ ಸಂಜು ಹೋಗಿದ್ದಾನೆ. ಸಂಜುನ ಹುಡುಕಿ ಆರಾಧನಾ ಹೋಗಿದ್ದಾಳೆ.
ಸಂಜು ನಡೆಯ ಬಗ್ಗೆಯೇ ಮೂಡಿದೆ ಅನುಮಾನ:
ರಾಜ ನಂದಿನಿ ವಿಲಾಸಕ್ಕೆ ಸಂಜು ಬಂದಿದ್ದು, ಆತ ಎಲ್ಲರ ಜತೆ ಬೆರೆತಿದ್ದು, ಇದೇ ಸಂದರ್ಭದಲ್ಲಿ ಪ್ರಿಯದರ್ಶಿನಿ ಬೇರೆ ರೀತಿಯಲ್ಲಿ ನಡೆದುಕೊಂಡಿದ್ದು ಎಲ್ಲವೂ ಅನುಮಾನ ಹುಟ್ಟು ಹಾಕಿದೆ. ಅನು ಸಿರಿಮನೆಗೆ ಸಾಕಷ್ಟು ಗೊಂದಲಗಳು ಹುಟ್ಟಿಕೊಂಡಿವೆ. ಹರ್ಷವರ್ಧನ್ ಪತ್ನಿ ಮಾನ್ಸಿ ಕೂಡ ಅನುಮಾನದಲ್ಲಿ ಇದ್ದಾಳೆ. ಸಂಜು ಇಲ್ಲಿಗೆ ಬಂದಿರುವ ಬಗ್ಗೆ ಆಸ್ತಿ ಹೊಡೆಯುವ ಆಲೋಚನೆ ಇರಬಹುದು ಎಂಬುದು ಆಕೆಯ ಅನುಮಾನ.
ಶಾರದಾದೇವಿ ಬಳಿ ಬಂದು ದುಃಖ ತೋಡಿಕೊಂಡ ಝೇಂಡೆ:
ವರ್ಧನ್ ಕಂಪನಿ ಒಳಗೆ ಬರಬೇಕು ಎಂಬುದು ಝೇಂಡೆ ಪ್ಲ್ಯಾನ್. ಇದಕ್ಕಾಗಿ ಮೀರಾ ಹೆಗಡೆಯನ್ನು ದಾಳವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಆರ್ಯವರ್ಧನ್ ಬದುಕಿದ್ದಾನೆ ಎಂದು ಆಕೆಯ ಬಳಿ ಹೇಳಿದ್ದಾನೆ. ಈ ವಿಚಾರವನ್ನು ಮಾತನಾಡಲು ರಾಜ ನಂದಿನಿ ವಿಲಾಸಕ್ಕೆ ಬಂದಿದ್ದಾನೆ. ಶಾರದಾದೇವಿ ಒಪ್ಪಿಗೆ ಪಡೆಯಬೇಕು ಎಂಬುದು ಆತನ ಉದ್ದೇಶ.
ಇದನ್ನೂ ಓದಿ: Jothe Jotheyali: ಸಂಜುಗೆ ಹಳೇ ನೆನಪು ಮರಳಿಸಲು ಝೇಂಡೆ ಪ್ರಯತ್ನ; ಆರ್ಯನ ಸಾವಿನ ರಹಸ್ಯ ಬೆನ್ನತ್ತಿ ಹೊರಟ ಅನು
ದಾರಿ ಮಧ್ಯದಲ್ಲಿ ಹರ್ಷ ಭೇಟಿ ಆಗಿದ್ದಾನೆ. ಇಲ್ಲಿಗೆ ಬಂದಿರುವ ಹಿಂದಿನ ಉದ್ದೇಶ ಏನು ಎಂದು ಪ್ರಶ್ನೆ ಮಾಡಿದ್ದಾನೆ ಹರ್ಷ. ‘ಶಾರದಾದೇವಿ ಅವರನ್ನು ಭೇಟಿ ಆಗಬೇಕಿತ್ತು. ಮತ್ತೆ ಕಚೇರಿಗೆ ಬರುತ್ತೀರಾ ಎಂದು ಮೀರಾ ಹೆಗಡೆ ಕೇಳಿದ್ದಾಳೆ. ಕೆಲಸ ಮಾಡುವ ಜೀವ. ಸುಮ್ಮನೆ ಕುಳಿತು ನನಗೂ ಬೇಸರ ಆಗಿದೆ. ಈ ಕಾರಣಕ್ಕೆ ಶಾರದಾ ದೇವಿ ಒಪ್ಪಿಗೆ ಕೇಳಲು ಬಂದಿದ್ದೇನೆ’ ಎಂದು ಹೇಳಿದ್ದಾನೆ. ಜತೆಗೆ ಹರ್ಷನಿಗೆ ಬೈದುಕೊಂಡಿದ್ದಾನೆ. ‘ನನ್ನನ್ನು ಏಕವಚನದಲ್ಲಿ ಬಯ್ಯುತ್ತೀರಾ? ನಾನು ಒಮ್ಮೆ ವರ್ಧನ್ ಕಂಪನಿ ಒಳಗೆ ಸೇರಲಿ. ಆಗ ನಿಮ್ಮನ್ನೆಲ್ಲ ನೋಡಿಕೊಳ್ಳುತ್ತೇನೆ’ ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದಾನೆ.
ಇದನ್ನೂ ಓದಿ: ಮೀರಾ ಮಾಡಿದ ಮಸಲತ್ತಿನ ಬಗ್ಗೆ ಸಂಜುಗೆ ಬಂತು ಅನುಮಾನ; ಝೇಂಡೆಗೆ ಆರ್ಯನೇ ವಿಲನ್
ಶಾರದಾ ದೇವಿ ಬಳಿ ಬಂದ ಝೇಂಡೆ ತನ್ನ ಮನದ ಮಾತನ್ನು ಹೇಳಿಕೊಂಡಿದ್ದಾನೆ. ಆರ್ಯನನ್ನು ಕಳೆದುಕೊಂಡು ತಾನೂ ಬೇಸರಕ್ಕೆ ಒಳಗಾಗಿದ್ದೇನೆ ಎಂದು ಕಣ್ಣೀರು ಹಾಕಿದ್ದಾನೆ. ವರ್ಧನ್ ಕಂಪನಿಯ ಎಲ್ಲ ಆಸ್ತಿಯನ್ನು ತಾನೇ ಹೊಡೆಯಬೇಕು ಎಂಬ ಆಲೋಚನೆಯಲ್ಲಿ ಝೇಂಡೆ ಇದ್ದಾನೆ. ಇದಕ್ಕಾಗಿ ಆತ ಪ್ಲ್ಯಾನಿಂಗ್ ಮಾಡುತ್ತಿದ್ದಾನೆ.
ಸಂಜು ವಿರುದ್ಧ ರೇಗಿದ ಅನು
ಸಂಜುಗೆ ಅನು ಬಗ್ಗೆ ಕಾಳಜಿ ಹೆಚ್ಚಿದೆ. ಆಕೆ ಎಲ್ಲಿ ಹೋಗುತ್ತಾಳೋ ಅಲ್ಲೆಲ್ಲ ಹಿಂಬಾಲಿಸುಕೊಂಡು ಸಂಜು ಹೋಗುತ್ತಿದ್ದಾನೆ. ಆಗಲೂ ಹಾಗೆಯೇ ಆಗಿದೆ. ಅನು ಪತಿಯ ಸಾವಿನ ರಹಸ್ಯ ಹುಡುಕಿ ಸವದತ್ತಿಗೆ ಹೋಗಿದ್ದಳು. ಅಲ್ಲಿಗೂ ಸಂಜು ಬಂದಿದ್ದಾನೆ. ಆಕೆಗೆ ಕರೆ ಮಾಡಿ ಸಮಾಧಾನ ಮಾಡಲು ಪ್ರಯತ್ನಿಸಿದ್ದಾನೆ. ಇದಕ್ಕೆ ಅನು ಸಿಟ್ಟಾಗಿದ್ದಾಳೆ. ಜತೆಗೆ ಸಂಜುಗೆ ಬಾಯಿಗೆ ಬಂದಂತೆ ಬೈದಿದ್ದಾಳೆ.
ಅನು ರೇಗಿದ್ದು ನೋಡಿ ಸಂಜುಗೆ ಬೇಸರ ಆಗಿದೆ. ಈ ಕಾರಣಕ್ಕೆ ಆತ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ. ಆಗ ಆತನಿಗೆ ಅನು ಎದುರಾಗಿದ್ದಾಳೆ. ಸಂಜು ನಡೆದುಕೊಂಡು ಹೋಗುತ್ತಿದ್ದನ್ನು ನೋಡಿ ಅನುಗೆ ಶಾಕ್ ಆಗಿದೆ. ಆಕೆ ಕರೆದು ಸಂಜುಗೆ ಬೈದಿದ್ದಾಳೆ. ಅಲ್ಲಿಗೆ ಆರಾಧನಾ ಕೂಡ ಬಂದಿದ್ದಾಳೆ. ಸಂಜು ಹಾಗೂ ಅನು ನಿಂತು ಮಾತನಾಡುವುದನ್ನು ನೋಡಿ ಆರಾಧನಾ ಬೈದಿದ್ದಾಳೆ.
ಶ್ರೀಲಕ್ಷ್ಮಿ ಎಚ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.