ಟಿಆರ್ಪಿಯಲ್ಲಿ ಯಾರೂ ಊಹಿಸದ ಸೀರಿಯಲ್ಗೆ ನಂಬರ್ 1 ಸ್ಥಾನ
2025ನೇ ಸಾಲಿನ 24ನೇ ವಾರದ TRP ಪಟ್ಟಿಯಲ್ಲಿ ಯಾರೂ ಊಹಿಸದ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ‘ನಾ ನಿನ್ನ ಬಿಡಲಾರೆ’ ಎರಡನೇ ಸ್ಥಾನದಲ್ಲಿದ್ದರೆ, ‘ಅಣ್ಣಯ್ಯ’, ‘ಲಕ್ಷ್ಮೀ ನಿವಾಸ’, ಮತ್ತು ‘ಅಮೃತಧಾರೆ/ಬ್ರಹ್ಮಗಂಟು’ ಕ್ರಮವಾಗಿ ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನು ಪಡೆದುಕೊಂಡಿವೆ. ಈ ಫಲಿತಾಂಶಗಳು ಅನೇಕರನ್ನು ಆಶ್ಚರ್ಯಗೊಳಿಸಿವೆ.

ಧಾರಾವಾಹಿಗಳ ಟಿಆರ್ಪಿ ಪ್ರತಿ ಗುರುವಾರ ಲಭ್ಯವಾಗುತ್ತದೆ. ಪ್ರತಿ ವಾರ ಬೇರೆ ಬೇರೆ ಧಾರಾವಾಹಿಗಳು ಈ ಲಿಸ್ಟ್ನಲ್ಲಿ ಸ್ಥಾನ ಪಡೆದುಕೊಳ್ಳುತ್ತವೆ. ಈಗ 2025ನೇ ಸಾಲಿನ 24ನೇ ವಾರದ ಟಿಆರ್ಪಿ ಲಿಸ್ಟ್ ಹೊರಬಿದ್ದಿದೆ. ವಿಶೇಷ ಎಂದರೆ ಟಿಆರ್ಪಿ (TRP) ರೇಸ್ನಲ್ಲಿ ಯಾರೂ ಊಹಿಸದ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ. ಹಾಗಾದರೆ ಯಾವುದು ಆ ಧಾರಾವಾಹಿ? ಆ ಬಗ್ಗೆ ಇಲ್ಲಿದೆ ವಿವರ.
ಟಿಆರ್ಪಿ ರೇಸ್ನಲ್ಲಿ ಮೊದಲ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಇಷ್ಟು ದಿನ ಟಾಪ್ ಐದರಲ್ಲಿ ಸ್ಥಾನ ಪಡೆದುಕೊಳ್ಳುತ್ತಿತ್ತು. ಆದರೆ, ಕೆಲವೇ ಕೆಲವು ವಾರಗಳಲ್ಲಿ ಈ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿತ್ತು. ಈಗ ಈ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕಿದೆ. ಜನರು ಈ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ.
ಎರಡನೇ ಸ್ಥಾನದಲ್ಲಿ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಇದೆ. ಹಾರರ್ ಶೈಲಿಯಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದೆ. ಈ ಧಾರಾವಾಹಿಯಲ್ಲಿ ತಂತ್ರ, ಮಂತ್ರ, ಮಾಟದ ವಿಚಾರಗಳು ಕೂಡ ಇವೆ. ತಂದೆ-ಮಗಳ ಬಾಂಧವ್ಯದ ಕಥೆಯನ್ನೂ ಕೂಡ ಬೆಸೆಯಲಾಗಿದೆ. ಈ ಧಾರಾವಾಹಿಗೆ ಟಿಆರ್ಪಿಯಲ್ಲಿ ಎರಡನೇ ಸ್ಥಾನ ಸಿಕ್ಕಿದೆ.
ಮೂರನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ನಿಶಾ ರವಿಕೃಷ್ಣನ್ ಅವರು ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರೋ ಧಾರಾವಾಹಿ ಜನರಿಂದ ಹೆಚ್ಚು ಮೆಚ್ಚುಗೆ ಪಡೆದು ಮೂರನೇ ಸ್ಥಾನದಲ್ಲಿ ಇದೆ.
ನಾಲ್ಕನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿಗೆ ಹಲವು ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಈ ಧಾರಾವಾಹಿಯ ಲಕ್ಷ್ಮೀ ಪಾತ್ರಧಾರಿ ಹೊರ ನಡೆದಿದ್ದು, ಧಾರಾವಾಹಿ ಮೇಲೆ ಯಾವುದೇ ಪ್ರಭಾವ ಬೀರಿಲ್ಲ.
ಇದನ್ನೂ ಓದಿ: ‘ಅಮೃತಧಾರೆ’ ಧಾರಾವಾಹಿಯಿಂದ ಕಾಣೆಯೇ ಆದ ಸಾರಾ ಅಣ್ಣಯ್ಯ
ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಹಾಗೂ ‘ಬ್ರಹ್ಮಗಂಟು’ ಧಾರಾವಾಹಿ ಇದೆ. ಸಾಕಷ್ಟು ವಾರಗಳಿಂದ ‘ಅಮೃತಧಾರೆ’ ಧಾರಾವಾಹಿ ಟಾಪ್ ಐದರಲ್ಲಿ ಸ್ಥಾನ ಪಡೆಯುತ್ತಿದೆ. ಈ ಮೊದಲು ಕೆಲವು ವಾರ ಧಾರಾವಾಹಿಗೆ ಮೊದಲ ಸ್ಥಾನ ಸಿಕ್ಕ ಉದಾಹರಣೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








