TPL: ಟಿವಿ ಸೆಲೆಬ್ರಿಟಿಗಳ ಕ್ರಿಕೆಟ್ ಟೂರ್ನಿ ಮುಕ್ತಾಯ, ಹರ್ಷ ತಂಡಕ್ಕೆ ಟ್ರೋಫಿ

ಸಿನಿಮಾ ಸೆಲೆಬ್ರಿಟಿಗಳ ಕ್ರಿಕೆಟ್ ಟೂರ್ನಿಯ ನಡುವೆ ಕನ್ನಡ ಟಿವಿ ಸೆಲೆಬ್ರಿಟಿಗಳು ಸಹ ಕ್ರಿಕೆಟ್ ಪಂದ್ಯಾವಳಿಗಳನ್ನಾಡಿದ್ದು, ಟಿವಿ ಸೆಲೆಬ್ರಿಟಿಗಳ ಟಿಪಿಎಲ್ 2 ಟೂರ್ನಿಯನ್ನು ಹರ್ಷ ತಂಡ ಗೆದ್ದುಕೊಂಡಿದೆ.

TPL: ಟಿವಿ ಸೆಲೆಬ್ರಿಟಿಗಳ ಕ್ರಿಕೆಟ್ ಟೂರ್ನಿ ಮುಕ್ತಾಯ, ಹರ್ಷ ತಂಡಕ್ಕೆ ಟ್ರೋಫಿ
ಟಿಪಿಎಲ್ ಕ್ರಿಕೆಟ್ ಟೂರ್ನಿ
Follow us
ಮಂಜುನಾಥ ಸಿ.
|

Updated on: Mar 18, 2023 | 11:27 PM

ಸ್ಯಾಂಡಲ್​ವುಡ್ (Sandalwood) ಸೆಲೆಬ್ರಿಟಿಗಳ ಸಿಸಿಎಲ್ ಕ್ರಿಕೆಟ್ ಟೂರ್ನಿ ಇನ್ನೂ ಚಾಲ್ತಿಯಲ್ಲಿದೆ. ಅದಕ್ಕೆ ಮುನ್ನ ಕೆಸಿಸಿ ಟೂರ್ನಿ ನಡೆದು ಡಾಲಿ ಧನಂಜಯ್ (Daali Dhananjay) ತಂಡ ಗೆದ್ದು ಬೀಗಿತ್ತು. ಅದರ ಬೆನ್ನಲ್ಲೆ ಟಿವಿ ಸೆಲೆಬ್ರಿಟಿಗಳೂ ಸಹ ಟಿಪಿಎಲ್ ಕ್ರಿಕೆಟ್ ಟೂರ್ನಿ ಆಡಿದ್ದು, ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಈ ಟೂರ್ನಿಯನ್ನು ಹರ್ಷ ಸಿಎಂ ಗೌಡ ತಂಡ ಜಯ ಗಳಿಸಿದೆ.

ಕಳೆದ ಭಾನುವಾರ ಮಾರ್ಚ್ 12 ರಂದು ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 2 ಆರಂಭಗೊಂಡಿತ್ತು. ಮಾರ್ಚ್ 12 ರಿಂದ 15ರ ವರೆಗೆ ನಾಲ್ಕು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆದಿದ್ದು, ಅಂತಿಮವಾಗಿ ಹರ್ಷ ಸಿ.ಎಂ. ಗೌಡ ನೇತೃತ್ವದ ಎನಿಎಲ್ಪ್ ಟೂರ್ನಿವಲ್ ತಂಡ ಟಿಪಿಎಲ್ ಸೀಸನ್ -2 ಟ್ರೋಫಿಗೆ ಮುತ್ತಿಟ್ಟಿದೆ. ಮಂಜು ಪಾವಗಡ ನೇತೃತ್ವದ ಅಶ್ವಸೂರ್ಯ ರಿಯಾಲಿಟೀಸ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಗಾಯಕ ವ್ಯಾಸರಾಜ್ ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಎನಿಎಲ್ಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಒಟ್ಟು ಆರು ತಂಡಗಳು ಟಿಪಿಎಲ್ ಸೀಸನ್-2ನಲ್ಲಿ ಭಾಗವಹಿಸಿದ್ದವು. ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ ನಾಯಕತ್ವದಲ್ಲಿ ತಂಡಗಳನ್ನು ಮುನ್ನಡೆಸಿದ್ದರು.

ಎಲ್ಲಾ ತಂಡಗಳಿಗೂ ಓನರ್ ಹಾಗೂ ಸೆಲೆಬ್ರೆಟಿ ಅಂಬಾಸಿಡರ್ ಗಳಿದ್ದು, ‘ದಿ ಪರ್ಪಲ್ ರಾಕ್ ಪ್ಯಾಂಥರ್ಸ್’ ತಂಡದ ಮಾಲಿಕತ್ವವನ್ನು ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್ ವಹಿಸಿಕೊಂಡಿದ್ದು, ರಂಜಿತ್ ಕುಮಾರ್ ‘ಅಶ್ವಸೂರ್ಯ ರಿಯಾಲಿಟೀಸ್’, ಮೊಹಮ್ಮದ್ ಜಾಕೀರ್ ಹುಸೇನ್ ಮತ್ತು ಪೂಜಾ ಶ್ರೀ ‘ಎನಿಎಲ್ಪ್ ಟೂರ್ನಿವಲ್’, ಫೈಜಾನ್ ಖಾನ್ ‘ಇನ್ಸೇನ್ ಕ್ರಿಕೆಟ್ ಟೀಂ’, ಮೊನೀಶ್ ‘ದಿ ಬುಲ್ ಸ್ಕ್ವಾಡ್’, ಅನಿಲ್ ಬಿ.ಆರ್,ದೇವನಾಥ್.ಡಿ, ರವಿ.ಜಿ.ಎಸ್ ‘ಆಕ್ಸ್ ಫರ್ಡ್ ವಿನ್ ಟೀಂ’ ಮಾಲಿಕತ್ವ ವಹಿಸಿಕೊಂಡಿದ್ದಾರೆ. ಐಶ್ವರ್ಯ ಸಿಂದೋಗಿ, ವಿರಾನಿಕ ಶೆಟ್ಟಿ, ರಾಶಿಕ ಶೆಟ್ಟಿ, ಸೊಹಾರ್ಧ, ಗಾನವಿ ಸುರೇಶ್, ಸೀಮಾ ವಸಂತ್, ಅದ್ವಿತಿ ಶೆಟ್ಟಿ, ಶ್ವೇತ ಪ್ರಸಾದ್, ಲಿಖಿತಾ ಅನಂತ್, ಯಶಸ್ವಿನಿ, ಆಶಿಕಾ ಗೌಡ, ಶ್ವೇತ ಕೊಗ್ಲೂರ್ ಟಿಪಿಎಲ್ ಸೀಸನ್ -2 ನಲ್ಲಿ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದರು.

ಇನ್ನು ಸಿಸಿಎಲ್ ಟೂರ್ನಿ ಜಾರಿಯಲ್ಲಿದ್ದು ಟೂರ್ನಿಯನ್ನು ಕರ್ನಾಟಕ ಬುಲ್ಡೋಜರ್​ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದೆ. ಸೆಮಿಫೈನಲ್ ತಂಡಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಮಾರ್ಚ್ 24 ರಂದು ತೆಲುಗು ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಅದೇ ದಿನ ಬೋಜ್​ಪುರಿ ಧಬಂಗ್ಸ್ ಹಾಗೂ ಮುಂಬೈ ಹೀರೋಸ್ ತಂಡವು ಸಹ ಸೆಮಿಫೈನಲ್ ಆಡಲಿದೆ. ಎರಡೂ ಪಂದ್ಯಗಳಲ್ಲಿ ಗೆದ್ದವರು ಫೈನಲ್ ಪಂದ್ಯದಲ್ಲಿ ಮುಖಾ-ಮುಖಿ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ