
ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ಮೊದಲಾದವರು ನಟಿಸಿರೋ ‘ಕರ್ಣ’ ಧಾರಾವಾಹಿ (Karna Serial) ಸತತ ನಾಲ್ಕನೇ ವಾರ ಟಿಆರ್ಪಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ಧಾರಾವಾಹಿ ಎಲ್ಲರ ಫೇವರಿಟ್ ಎನಿಸಿಕೊಂಡಿದೆ. ಕಳೆದ ಮೂರು ವಾರಗಳಿಂದ ಧಾರಾವಾಹಿಗೆ 10+ ಟಿಆರ್‌ಪಿ ಸಿಗುತ್ತಿತ್ತು. ಆದರೆ, ನಾಲ್ಕನೇ ವಾರದ ಟಿಆರ್ಪಿಯಲ್ಲಿ ಧಾರಾವಾಹಿ ಮೊದಲಿಗಿಂತ ಕೊಂಚ ಕಡಿಮೆ ಟಿವಿಆರ್ ಪಡೆದುಕೊಂಡಿದೆ.
ಕಿರಣ್ ರಾಜ್, ನಮ್ರತಾ ಗೌಡ ಹಾಗೂ ಭವ್ಯಾ ಗೌಡ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಈ ಮೂವರು ಒಟ್ಟಾಗಿ ಧಾರಾವಾಹಿ ಮಾಡುತ್ತಾರೆ ಎಂದಾಗ ಸಹಜವಾಗಿಯೇ ನಿರೀಕ್ಷೆ ಮೂಡೋದು ಸಹಜ. ನಿರೀಕ್ಷೆಗೆ ತಕ್ಕಂತೆ ಧಾರಾವಾಹಿ ಮೂಡಿ ಬಂದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ಈ ಕಾರಣಕ್ಕೆ ಧಾರಾವಾಹಿ ಟಿಆರ್ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಮುಂದಿನ ವಾರಗಳಲ್ಲಿ ಈ ಧಾರಾವಾಹಿ ಪ್ರೇಕ್ಷಕರನ್ನು ಇದೇ ರೀತಿಯಲ್ಲಿ ಹಿಡಿದಿಟ್ಟುಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
‘ಲಕ್ಷ್ಮೀ ನಿವಾಸ’ ಧಾರಾವಾಹಿ ಕೂಡ ಜನರಿಂದ ಮೆಚ್ಚುಗೆ ಪಡೆದಿದ್ದು, ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇದೆ. ಮುಂದಿನ ದಿನಗಳಲ್ಲಿ ನಂಬರ್ 1 ಸ್ಥಾನಕ್ಕೆ ‘ಲಕ್ಷ್ಮೀ ನಿವಾಸ’ ಹಾಗೂ ‘ಕರ್ಣ’ ಧಾರಾವಾಹಿ ಮಧ್ಯೆ ಕಾಂಪಿಟೇಷನ್ ಮೂಡಿದರೂ ಅಚ್ಚರಿ ಏನಿಲ್ಲ. ಮೂರನೇ ಸ್ಥಾನದಲ್ಲಿ ‘ಅಣ್ಣಯ’ ಧಾರಾವಾಹಿ ಇದೆ. ನಾಲ್ಕನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಹಾಗೂ ಐದನೇ ಸ್ಥಾನದಲ್ಲಿ ‘ನಾನಿನ್ನ ಬಿಡಲಾರೆ’ ಧಾರಾವಾಹಿ ಇದೆ. ‘ಅಮೃತಧಾರೆ’ ಧಾರಾವಾಹಿ ಆರನೇ ಸ್ಥಾನದಲ್ಲಿ ಇದೆ. ಈ ಎಲ್ಲಾ ಧಾರಾವಾಹಿಗಳು ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿವೆ ಅನ್ನೋದು ವಿಶೇಷ.
ಇದನ್ನೂ ಓದಿ: ಸತತ ಮೂರನೇ ವಾರ ಡಬಲ್ ಡಿಜಿಟ್ ಟಿಆರ್‌ಪಿ, ನಂಬರ್ 1 ಸ್ಥಾನ ಪಡೆದ ‘ಕರ್ಣ’ ಧಾರಾವಾಹಿ
ಕಲರ್ಸ್ ಕನ್ನಡದ ಧಾರಾವಾಹಿಗಳ ರ್ಯಾಂಕಿಂಗ್ ಅಷ್ಟೇ ನೋಡೋದಾದರೆ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಎರಡನೇ ಸ್ಥಾನದಲ್ಲಿ ‘ಮುದ್ದು ಸೊಸೆ’ ಇದೆ. ಮೂರನೇ ಸ್ಥಾನದಲ್ಲಿ ‘ಭಾರ್ಗವಿ ಎಲ್ಎಲ್ಬಿ’ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.