ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಎರಡು ಜನಪ್ರಿಯ ಧಾರಾವಾಹಿಗಳು; ಟಾಪ್ 5 ಸೀರಿಯಲ್ ಲಿಸ್ಟ್ ಇಲ್ಲಿದೆ

ಈ ವಾರದ ಕನ್ನಡ ಧಾರಾವಾಹಿಗಳ ಟಿಆರ್‌ಪಿ ಪಟ್ಟಿಯಲ್ಲಿ ಎರಡು ಧಾರಾವಾಹಿಗಳು ಅಗ್ರ ಸ್ಥಾನಗಳನ್ನು ಪಡೆದಿವೆ. ಟಾಪ್ ಐದು ಧಾರಾವಾಹಿಗಳಲ್ಲಿ ಹೆಚ್ಚಿನವು ಜೀ ಕನ್ನಡದವು ಎಂಬುದು ಗಮನಾರ್ಹ. ‘ಸೀತಾ ರಾಮ’ ಧಾರಾವಾಹಿ ಈ ಮೊದಲು ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಿತ್ತು. ಆದರೆ, ಇತ್ತೀಚೆಗೆ ಈ ಧಾರಾವಾಹಿಯ ಟಿಆರ್ಪಿ ಮತ್ತಷ್ಟು ಕುಗ್ಗುವ ಸೂಚನೆ ಸಿಕ್ಕಿದೆ.

ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಎರಡು ಜನಪ್ರಿಯ ಧಾರಾವಾಹಿಗಳು; ಟಾಪ್ 5 ಸೀರಿಯಲ್ ಲಿಸ್ಟ್ ಇಲ್ಲಿದೆ
ಕನ್ನಡ ಧಾರಾವಾಹಿ

Updated on: May 08, 2025 | 3:07 PM

ಧಾರಾವಾಹಿಗಳ ಟಿಆರ್​ಪಿ (Serial TRP) ಲಿಸ್ಟ್ ಪ್ರತಿ ವಾರ ರಿವೀಲ್ ಆಗುತ್ತದೆ. ಈಗ ಈ ವರ್ಷದ 17ನೇ ವಾರದ ಟಿಆರ್​ಪಿ ಪಟ್ಟಿ ಹೊರ ಬಿದ್ದಿದೆ. ಈ ಪೈಕಿ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳು ಸ್ಥಾನ ಪಡೆದುಕೊಂಡಿವೆ. ಟಾಪ್ ಐದರ ಪೈಕಿ ಬಹುತೇಕ ಎಲ್ಲಾ ಧಾರಾವಾಹಿಗಳು ಜೀ ಕನ್ನಡದವೇ ಅನ್ನೋದು ವಿಶೇಷ. ಈ ವಾರದ ಟಾಪ್​ ಸ್ಥಾನದಲ್ಲಿ ಇರೋ ಕನ್ನಡದ ಧಾರಾವಾಹಿಗಳು ಯಾವುದು ಎಂಬುದರ ವಿವರ ಈ ಸ್ಟೋರಿಯಲ್ಲಿ ಇದೆ.

ಈ ವಾರ ಮೊದಲ ಸ್ಥಾನದಲ್ಲಿ ಇದ್ದ ಧಾರಾವಾಹಿಗಳು ಮುಂದಿನ ವಾರ ಎರಡನೇ ಸ್ಥಾನಕ್ಕೆ ಇಳಿಯಬಹುದು. ಕಳೆದ ವಾರ ಮೊದಲ ಸ್ಥಾನದಲ್ಲಿ ಇದ್ದ ಧಾರಾವಾಹಿಗಳು ಈ ವಾರ ಮೊದಲ ಸ್ಥಾನಕ್ಕೆ ಬರಬಹುದು. ಇದರಲ್ಲಿ ಟಿಆರ್​ಪಿ ವಿಚಾರದಲ್ಲಿ ಇದು ಸಾಮಾನ್ಯ ಎನ್ನಬಹುದು. 17ನೇ ವಾರದ ಟಿಆರ್​ಪಿಯಲ್ಲೂ ‘ಹಾಗೆಯೇ ಆಗಿದೆ.

ಟಿಆರ್​ಪಿ ಲಿಸ್ಟ್​ನಲ್ಲಿ ಈ ವಾರ ‘ನಾ ನಿನ್ನ ಬಿಡಲಾರೆ’ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಹಾರರ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ‘ಅಣ್ಣಯ್ಯ’ ಧಾರಾವಾಹಿ ಕೂಡ ಮೊದಲ ಸ್ಥಾನದಲ್ಲಿ ಇದೆ. ರಾಜ್ಯದ ಟಿಆರ್​ಪಿಯನ್ನು ಪರಿಗಣಿಸಿ ಎರಡೂ ಧಾರಾವಾಹಿಗಳು ಮೊದಲ ಸ್ಥಾನದಲ್ಲಿ ಗಟ್ಟಿಯಾಗಿ ನಿಂತುಕೊಂಡಿವೆ.

ಇದನ್ನೂ ಓದಿ
ಶಾರುಖ್ ಮೋಸ ಮಾಡಿದರೆ...; ಗೌರಿ ಖಾನ್ ಬೋಲ್ಡ್ ಉತ್ತರ ಮೆಚ್ಚಲೇಬೇಕು
ಈ ವಿಲನ್ ನಿಜ ಜೀವನದಲ್ಲಿ ನಾಲ್ಕು ಮದುವೆ ಆದರು, ನಂತರ ಬೀದಿಗೆ ಬಂದರು
‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್
ಅನುಷ್ಕಾ ಕೈಗೆ ಮುತ್ತು; ಕೊಹ್ಲಿನ ಜೋಕರ್ ಎಂದಿದ್ದ ರಾಹುಲ್​​ನ ವಿಡಿಯೋ ವೈರಲ್

ಎರಡನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದುಕೊಂಡಿದೆ. ಈ ಕಾರಣಕ್ಕೆ ಈ ಧಾರಾವಾಹಿಗೆ ಎರಡನೇ ಸ್ಥಾನ ಸಿಕ್ಕಿದೆ.

ಮೂರನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಮೊದಲು ಈ ಧಾರಾವಾಹಿ ಮೊದಲ ಸ್ಥಾನ ಅಲಂಕರಿಸಿಕೊಳ್ಳುತ್ತಿತ್ತು. ಆದರೆ, ಈಗ ಬೇರೆ ಬೇರೆ ಧಾರಾವಾಹಿಗಳ ಅಬ್ಬರದಿಂದ ಈ ಧಾರಾವಾಹಿಯ ರ್ಯಾಂಕ್​ನಲ್ಲಿ ಇಳಿಕೆ ಆಗಿದೆ. ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಐದನೇ ಸ್ಥಾನದಲ್ಲಿ ‘ಬ್ರಹ್ಮಗಂಟು’ ಧಾರಾವಾಹಿ ಇದೆ.

ಇದನ್ನೂ ಓದಿ: ವಾರ ಪೂರ್ತಿ ಪ್ರಸಾರ ಆಗಲಿದೆ ಕಲರ್ಸ್​ನ ನಿಮ್ಮ ಈ ನಾಲ್ಕು ಫೇವರಿಟ್ ಧಾರಾವಾಹಿ

‘ಸೀತಾ ರಾಮ’ ಧಾರಾವಾಹಿ ಈ ಮೊದಲು ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಿತ್ತು. ಆದರೆ, ಇತ್ತೀಚೆಗೆ ಈ ಧಾರಾವಾಹಿಯ ಟಿಆರ್​ಪಿ ಮತ್ತಷ್ಟು ಕುಗ್ಗುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.