‘ಕನ್ನಡತಿ’ ರಂಜನಿ ರಾಘವನ್ ಅವರು ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಅವರು ನಿರ್ವಹಿಸುತ್ತಿರುವ ಭುವನೇಶ್ವರಿ ಪಾತ್ರ ಸಾಕಷ್ಟು ಜನರಿಗೆ ಇಷ್ಟವಾಗಿದೆ. ಈ ಧಾರಾವಾಹಿ ಮೂಲಕ ಕನ್ನಡವನ್ನು ಬೆಳೆಸುವ ಕಾರ್ಯ ಕೂಡ ಆಗುತ್ತಿದೆ. ಈ ಕಾರಣಕ್ಕೂ ಧಾರಾವಾಹಿ ಹೆಚ್ಚು ಜನರಿಗೆ ಇಷ್ಟವಾಗಿದೆ. ರಂಜನಿ ಕೇವಲ ನಟನೆ ಮಾತ್ರವಲ್ಲ ಬರಹದ ಮೂಲಕವೂ ಗುರುತಿಸಿಕೊಂಡಿದ್ದಾರೆ. ಈಗ ಅವರು ಕಥಾಸಂಕಲನ ಹೊರ ತರುತ್ತಿದ್ದಾರೆ.
ರಂಜನಿ ಅವರು ಬರೆದ ಕಥಾ ಸಂಕಲನ ಮುಂದಿನ ವಾರ ಬಿಡುಗಡೆ ಆಗಲಿದೆ. ಇದಕ್ಕೆ ಅವರು ಈಗಾಗಲೇ ಹೆಸರನ್ನು ಇಟ್ಟಿದ್ದಾರೆ. ಆದರೆ, ಅದನ್ನು ಬಹಿರಂಗ ಮಾಡಿಲ್ಲ. ಕಥಾ ಸಂಕಲನಕ್ಕೆ ಯಾವ ಹೆಸರು ಇಡಲಾಗಿದೆ ಎಂಬುದನ್ನು ಹೇಳೋಕೆ ಅಭಿಮಾನಿಗಳಿಗೆ ಅವಕಾಶ ನೀಡಿದ್ದಾರೆ. ಮೊದಲು ಸರಿ ಉತ್ತರ ನೀಡಿದ ಮೂವರಿಗೆ ಬಹುಮಾನದ ರೂಪದಲ್ಲಿ ಪುಸ್ತಕವನ್ನು ಉಚಿತವಾಗಿ ನೀಡಲಾಗುತ್ತಿದೆ.
ಕ_ _ ಬ್ಬಿ ಎಂದು ಬರೆದುಕೊಂಡು ಕಥಾ ಸಂಕಲನದ ಹೆಸರನ್ನು ಊಹಿಸಿ ಎಂದು ಚಾಲೆಂಜ್ ನೀಡಿದ್ದಾರೆ ರಂಜನಿ. ಕೆಲವರು ಕಥಾ ಡಬ್ಬಿ, ಕಥಾ ಗುಬ್ಬಿ ಎಂಬಿತ್ಯಾದಿ ಹೆಸರನ್ನು ಊಹಿಸಿ ಕಮೆಂಟ್ ಬಾಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಯಾವುದು ಸರಿ ಉತ್ತರ ಎಂಬುದು ಶೀಘ್ರವೇ ತಿಳಿದುಬರಲಿದೆ.
ರಂಜನಿ ಈ ಮೊದಲು ಸಾಕಷ್ಟು ಕಥೆಗಳನ್ನು ಬರೆದಿದ್ದಾರೆ. ಅವೆಲ್ಲವನ್ನೂ ಸೇರಿಸಿ ಈಗ ಪುಸ್ತಕದ ರೂಪದಲ್ಲಿ ಹೊರ ತರುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಸಾಕಷ್ಟು ಖುಷಿ ಆಗಿದ್ದಾರೆ. ಅಲ್ಲದೆ, ಈ ಪುಸ್ತಕ ಯಾವಾಗ ಬರುತ್ತದೆ ಎಂದು ಅಭಿಮಾನಿಗಳು ಕಾದು ಕೂತಿದ್ದಾರೆ.
ಕನ್ನಡತಿ ಧಾರಾವಾಹಿ ಸಾಕಷ್ಟು ಟ್ವಿಸ್ಟ್ಗಳನ್ನು ಪಡೆದುಕೊಳ್ಳುತ್ತಿದೆ. ರಂಜನಿ ನಿರ್ವಹಿಸುತ್ತಿರುವ ಭುವಿ ಪಾತ್ರ ದಿನಕಳೆದಂತೆ ಮತ್ತಷ್ಟು ಸ್ಟ್ರಾಂಗ್ ಆಗುತ್ತಿದೆ. ಕನ್ನಡತಿ ಬಗ್ಗೆ ವೀಕ್ಷಕರಿಗೆ ಸಾಕಷ್ಟು ಕುತೂಹಲಗಳನ್ನು ಹುಟ್ಟು ಹಾಕುವ ಕೆಲಸವನ್ನು ಧಾರಾವಾಹಿ ತಂಡ ಮಾಡುತ್ತಿದೆ.
ಇದನ್ನೂ ಓದಿ: ಕನ್ನಡತಿ ಅಪ್ಡೇಟ್; ತಿಳಿದೂ ತಪ್ಪು ಮಾಡಿದ ಸಾನಿಯಾ; ಎಂ.ಡಿ. ಪಟ್ಟ ಭುವಿಗೆ
Published On - 7:29 am, Fri, 24 September 21