ಸರ್ಕಾರಿ ಶಾಲೆಗೆ ‘ಕನ್ನಡತಿ’ ಸೀರಿಯಲ್​ ನಟ ಕಿರಣ್​ ರಾಜ್​ ನೆರವಿನ ಹಸ್ತದಿಂದ ಬಂತು ಹೊಸ ಮೆರುಗು

| Updated By: ಮದನ್​ ಕುಮಾರ್​

Updated on: Jun 04, 2022 | 4:27 PM

Kannadathi Serial | Kiran Raj: ಕಿರಣ್ ರಾಜ್ ಫೌಂಡೇಶನ್ ಮೂಲಕ ಶಾಲೆಯನ್ನು ದುರಸ್ತಿ ಮಾಡಿ, ಸುಣ್ಣಬಣ್ಣದಿಂದ ಅಲಂಕರಿಸಿ ಕೊಡಲಾಗಿದೆ. ಇದರಿಂದ ಈ ಶಾಲೆಗೆ ಹೊಸ ಮೆರುಗು ಬಂದಂತಾಗಿದೆ.

ಸರ್ಕಾರಿ ಶಾಲೆಗೆ ‘ಕನ್ನಡತಿ’ ಸೀರಿಯಲ್​ ನಟ ಕಿರಣ್​ ರಾಜ್​ ನೆರವಿನ ಹಸ್ತದಿಂದ ಬಂತು ಹೊಸ ಮೆರುಗು
ಕಿರಣ್ ರಾಜ್
Follow us on

ಸೀರಿಯಲ್​ ಮತ್ತು ಸಿನಿಮಾ ಎರಡೂ ಕ್ಷೇತ್ರದಲ್ಲಿ ಬ್ಯುಸಿ ಆಗಿದ್ದಾರೆ ನಟ ಕಿರಣ್​ ರಾಜ್​. ‘ಕನ್ನಡತಿ’ ಧಾರಾವಾಹಿಯಿಂದ (Kannadathi Serial) ಅವರ ಖ್ಯಾತಿ ಹೆಚ್ಚಿದೆ. ಕಿರುತೆರೆಯಲ್ಲಿ ಬಹುಬೇಡಿಕೆಯ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ. ಹಾಗಂತ ಅವರು ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಸುಮ್ಮನೆ ಕುಳಿತಿಲ್ಲ. ಸಮಾಜಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಮೂಲಕವೂ ಕಿರಣ್​ ರಾಜ್​ (Kiran Raj) ಮಾದರಿ ಆಗಿದ್ದಾರೆ. ಸಮಾಜಮುಖಿ ಕಾರ್ಯಗಳನ್ನು ಮಾಡುವ ಸಲುವಾಗಿಯೇ ಕಿರಣ್​ ರಾಜ್​ ಅವರು ತಮ್ಮದೇ ಹೆಸರಿನಲ್ಲಿ ಫೌಂಡೇಶನ್​ ಹೊಂದಿದ್ದಾರೆ. ಆ ಮೂಲಕ ಹಲವು ಕೆಲಸಗಳು ಆಗುತ್ತಿವೆ. ತಮ್ಮ ದುಡಿಮೆಯ ಹಣವನ್ನು ಅವರು ಈ ಉದ್ದೇಶಕ್ಕೆ ಬಳಸುತ್ತಾರೆ. ಈಗ ಕಿರಣ್ ರಾಜ್​ ಫೌಂಡೇಶನ್​ (Kiran Raj Foundation) ಮೂಲಕ ಶಾಲೆಯೊಂದರ ದುರಸ್ಥಿ ಮಾಡಲಾಗಿದೆ. ಹೊಸದಾಗಿ ಪೇಂಟಿಂಗ್​ ಮಾಡಿಸಿ ಸರ್ಕಾರಿ ಶಾಲೆಯನ್ನು ಅಂದಗೊಳಿಸಲಾಗಿದೆ. ಅವರು ಮಾಡಿರುವ ಈ ಕೆಲಸ ಎಲ್ಲರಿಗೂ ಮಾದರಿ ಆಗಿದೆ.

ಈ ಮೊದಲು ಕೂಡ ಕಿರಣ್​ ರಾಜ್​ ಅವರು ಹಲವು ಜನಪರ ಕಾರ್ಯಗಳಿಂದ ಗಮನ ಸೆಳೆದಿದ್ದರು. ಕೊರೊನಾದಿಂದ ಲಾಕ್​ಡೌನ್​ ಆದಾಗ ಅವರು ಮಂಗಳಮುಖಿಯರಿಗೆ ಸಹಾಯ ಮಾಡಿದ್ದರು. ಅವರ ನೆರವನ್ನು ನೆನೆದು ಮಂಗಳಮುಖಿಯರು ಎಮೋಷನಲ್​ ಆಗಿದ್ದರು. ಕಿರಣ್ ರಾಜ್ ಫೌಂಡೇಶನ್ ವತಿಯಿಂದ ಮಾಡುವ ಸಾಮಾಜಿಕ ಕೆಲಸಗಳನ್ನು ಗಮನಿಸಿರುವ ಬೆಂಗಳೂರಿನ ರಾಮಸಂದ್ರದ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳು, ಶಿಥಿಲಗೊಂಡಿದ್ದ ತಮ್ಮ ಶಾಲೆಯನ್ನು ದುರಸ್ತಿ ಮಾಡಿಸಿಕೊಡುವಂತೆ ಕಿರಣ್​ ರಾಜ್​ಗೆ ಮನವಿ ಮಾಡಿಕೊಂಡಿದ್ದರು. ಮಕ್ಕಳ ಮನವಿಗೆ ಅವರು​ ಸ್ಪಂದಿಸಿದ್ದಾರೆ.

ಇದನ್ನೂ ಓದಿ: ‘ಕನ್ನಡತಿ’ ಧಾರಾವಾಹಿಗೆ ‘ಮುಂಗಾರು ಮಳೆ’ ಸಿನಿಮಾ ಟಚ್; ಹೊಸ ಅವತಾರದಲ್ಲಿ ಹರ್ಷ-ಭುವಿ

ಇದನ್ನೂ ಓದಿ
‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​
‘ಅವಕಾಶ ಇದ್ದಿದ್ರೆ ನಾನು ಒಂದು ಝೂ ಮಾಡ್ತಿದ್ದೆ’; ‘ಕನ್ನಡತಿ’ ನಟ ಕಿರಣ್​ ರಾಜ್​
ಅವಮಾನ ಮಾಡಿದವರಿಗೆ ಕಿಚ್ಚ ಸುದೀಪ್​ ಎದುರೇ ಉತ್ತರಿಸಿದ ‘ಕನ್ನಡತಿ’ ಕಿರಣ್​ ರಾಜ್​

ಮಕ್ಕಳಿಗೆ ಶಾಲೆಯ ಕಟ್ಟಡ ತುಂಬ ಮುಖ್ಯವಾದದ್ದು. ದಿನದ ಹೆಚ್ಚಿನ ಭಾಗವನ್ನು ಮಕ್ಕಳು ಶಾಲೆಯಲ್ಲೇ ಕಳೆಯುತ್ತಾರೆ. ಅಂತಹ ಶಾಲೆ ಉತ್ತಮ ವ್ಯವಸ್ಥೆಯಲ್ಲಿರಬೇಕು ಎಂಬ ಆಶಯದಿಂದ ಕಿರಣ್ ರಾಜ್ ಫೌಂಡೇಶನ್ ಮೂಲಕ ಶಾಲೆಯನ್ನು ದುರಸ್ತಿ ಮಾಡಿ, ಸುಣ್ಣಬಣ್ಣದಿಂದ ಅಲಂಕರಿಸಿ ಕೊಡಲಾಗಿದೆ. ಇದರಿಂದ ಈ ಶಾಲೆಗೆ ಹೊಸ ಮೆರುಗು ಬಂದಂತಾಗಿದೆ.

ಇದನ್ನೂ ಓದಿ: Kiran Raj: ಒಂದೊಳ್ಳೆಯ ಕೆಲಸ ಮಾಡಿ ಕ್ರಿಸ್​ಮಸ್​ ಆಚರಿಸಿದ ನಟ ಕಿರಣ್​ ರಾಜ್​

‘ಕಿರಣ್​ ರಾಜ್​ ಫೌಂಡೇಶನ್​’ ಸಂಸ್ಥೆಯ ಸೇವೆಯನ್ನು ಕಂಡು ತಾವೂ ಇಂತಹ ಒಳ್ಳೆಯ ಕಾರ್ಯಕ್ಕೆ ಕೈ ಜೋಡಿಸುವುದಾಗಿ ಕೆಲವು ಸ್ವಯಂಸೇವಕರು ಮುಂದೆ ಬಂದಿದ್ದಾರೆ ಎಂಬುದು ಗಮನಾರ್ಹ ಸಂಗತಿ. ರವಿ, ಮಣಿಕಂಠ (ಕಿರಣ್ ರಾಜ್ ಫೌಂಡೇಶನ್), ಪೇಂಟರ್ಗಳಾದ ರೋಹಿತ್, ಭೀಮೇಶ್ ಹಾಗೂ ಕಾವ್ಯ, ಮೇಘನಾ,‌ ಸಂತೋಷ್, ಜಿತೇಂದ್ರ, ಶಶಿಧರ್, ಯುಕ್ತಾ, ವಿಭಾ ಮುಂತಾದವರು ಪ್ರಮುಖ ‌ಸ್ವಯಂ ಸೇವಕರಾಗಿ ಈ ಕಾರ್ಯ ಮಾಡಿದ್ದಾರೆ. ಶಾಲೆಯ ಮಕ್ಕಳನ್ನು ಕುರಿತು ಕಿರಣ್​ ರಾಜ್​ ಮಾತನಾಡಿದ್ದು, ಒಂದಷ್ಟು ಹಿತವಚನ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:57 pm, Sat, 4 June 22