ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ರತ್ನಮಾಲಾಳನ್ನು ಅಂತ್ಯ ಸಂಸ್ಕಾರ ಮಾಡಿ ಬಂದ ನಂತರದಲ್ಲಿ ಮನೆಯಲ್ಲಿ ಎಲ್ಲರಲ್ಲೂ ದುಃಖ ಆವರಿಸಿದೆ. ಹರ್ಷ ನಿಧಾನವಾಗಿ ಬೇಸರದಿಂದ ಹೊರ ಬರುತ್ತಿದ್ದಾನೆ. ಮತ್ತೊಂದು ಕಡೆಯಲ್ಲಿ ವರುಧಿನಿ ಸಂಚು ರೂಪಿಸುವ ಕೆಲಸ ಮಾಡುತ್ತಿದ್ದಾಳೆ. ಆದರೆ, ಅವಳ ಮೊದಲ ಸಂಚು ಕೈಕೊಟ್ಟಿದೆ. ಇದರಿಂದ ಆಕೆ ಕೋಪಗೊಂಡಿದ್ದಾಳೆ.
ಭುವಿಗೆ ವರುಧಿನಿ ಮೋಸ
ಭುವಿ ಹಾಗೂ ವರುಧಿನಿ ಚಿಕ್ಕ ವಯಸ್ಸಿನಿಂದ ಗೆಳತಿಯರು. ಇವರ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಆದರೆ, ಹರ್ಷನ ವಿಚಾರದಲ್ಲಿ ಭುವಿ ಬಗ್ಗೆ ವರು ದ್ವೇಷ ಬೆಳೆಸಿಕೊಂಡಳು. ತನ್ನ ಹೀರೋನ ಭುವಿ ಮದುವೆ ಆಗಿದ್ದಾಳೆ ಎನ್ನುವ ಬೇಸರ ವರುಧಿನಿಯನ್ನು ಕಾಡುತ್ತಿದೆ. ತನ್ನ ಹೀರೋನ ಪಡೆದುಕೊಳ್ಳಲು ಆಕೆ ಹಲವು ಪ್ಲ್ಯಾನ್ಗಳನ್ನು ಮಾಡುತ್ತಿದ್ದಾಳೆ. ಈಗ ಭುವಿಗೆ ಮೋಸ ಮಾಡುತ್ತಾ ಹರ್ಷನನ್ನು ಪಡೆಯಲು ಆಕೆ ಸಂಚು ರೂಪಿಸಿದ್ದಾಳೆ.
ಭುವಿ ಹೆಸರಿಗೆ ವಿಲ್ ಬರೆದು ರತ್ನಮಾಲಾ ಮೃತಪಟ್ಟಿದ್ದಾಳೆ. ಒಂದು ಲಕೋಟೆ ನೀಡಿ ಅದನ್ನು ತಾನು ಸತ್ತ ನಂತರ ತೆಗೆಯುವಂತೆ ಸೂಚಿಸಿದ್ದಳು ರತ್ನಮಾಲಾ. ಈ ಲಕೋಟೆಯ ಹುಡುಕಾಟಕ್ಕಾಗಿ ಭುವಿ ಮನೆಗೆ ವರುಧಿನಿ ಬಂದಿದ್ದಳು. ವರುಧಿನಿ ಭೇಟಿ ಆದಾಗ ಆ ಬಗ್ಗೆ ಭುವಿ ಪ್ರಶ್ನೆ ಮಾಡಿದ್ದಾಳೆ.
ಭುವಿ ತುಂಬಾ ಒಳ್ಳೆಯವಳು. ಆಕೆಯ ಒಳ್ಳೆಯ ಗುಣವನ್ನು ದುರ್ಬಳಕೆ ಮಾಡಿಕೊಳ್ಳಲು ವರು ಪ್ಲ್ಯಾನ್ ರೂಪಿಸಿದ್ದಾಳೆ. ಇದು ಭುವಿಗೆ ತಿಳಿಯುತ್ತಿಲ್ಲ. ಇನ್ನು ವರುಧಿನಿಯ ಬಗ್ಗೆ ಆಕೆಗೆ ಕನಿಕರ ಮನೋಭಾವನೆ ಇದೆ. ಇದು ಬದಲಾಗಬೇಕು ಎಂಬುದು ವೀಕ್ಷಕರ ಕೋರಿಕೆ. ವರುಧಿನಿ ಮನೆಗೆ ಬಂದು ಶೋಧಕಾರ್ಯ ನಡೆಸಿದ ವಿಚಾರ ಭುವಿಗೆ ತಿಳಿದಿದೆ. ಆಕೆಯ ತಂಗಿ ಬಿಂದು ಈ ವಿಚಾರವನ್ನು ಹೇಳಿದ್ದಾಳೆ. ಈ ವಿಚಾರದಲ್ಲಿ ಭುವಿ ಎಚ್ಚೆತ್ತುಕೊಳ್ಳಬೇಕಿದೆ. ವರುಧಿನಿಗೆ ಭುವಿ ತಕ್ಕ ಪಾಠ ಕಲಿಸುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.
ಕ್ಷಮೆ ಕೇಳಿದ ಹರ್ಷ
ಸೌಪರ್ಣಿಕಾ ಹೆಸರಿನ ಯುವತಿಯನ್ನು ಹರ್ಷ ಕರೆತಂದಿದ್ದ. ಆಕೆಯನ್ನು ಕೊಲ್ಲಿಸೋಕೆ ಸಾನಿಯಾ ಪ್ಲ್ಯಾನ್ ಮಾಡಿದ್ದಳು. ಈ ವಿಚಾರದಲ್ಲಿ ಹರ್ಷನಿಗೆ ಬೇಸರ ಇದೆ. ರತ್ನಮಾಲಾ ಮೃತಪಟ್ಟ ನಂತರದಲ್ಲಿ ಹರ್ಷನಿಗೆ ಸೌಪರ್ಣಿಕಾ ಭೇಟಿ ಆಗಿದೆ. ಆಕೆಯ ಬಳಿ ಕ್ಷಮೆ ಕೇಳಿದ್ದಾನೆ. ಆದರೆ, ಆಕೆ ಮಾತ್ರ ಸುಮ್ಮನಾಗಿಲ್ಲ. ಹರ್ಷನ ವಿರುದ್ಧ ಕೂಗಾಡಿದ್ದಾಳೆ. ಈ ವಿಚಾರವನ್ನು ಭುವಿ ಕೇಳಿಳಿಸಿಕೊಂಡಿದ್ದಾಳೆ. ಆಕೆಗೆ ಹರ್ಷ ಹಾಗೂ ಸೌಪರ್ಣಿಕಾ ಅವರ ಸಂಭಾಷಣೆ ಭಯ ಮೂಡಿಸಿದೆ.
ಸಾನಿಯಾಗೆ ಎಂಡಿ ಪಟ್ಟ!
ಸಾನಿಯಾ ಎಂಡಿ ಪಟ್ಟವನ್ನು ಕಳೆದುಕೊಂಡು ಒಂಟಿಯಾಗಿದ್ದಾಳೆ. ಆಕೆಯ ಬೆಂಬಲಕ್ಕೆ ಯಾರೂ ಇಲ್ಲದಂತೆ ಆಗಿದೆ. ಈ ವಿಚಾರದಲ್ಲಿ ಆಕೆಗೆ ಸಿಟ್ಟಿದೆ. ವರುಧಿನಿಯು ಸೌಪರ್ಣಿಕಾ ಜತೆ ಮಾತನಾಡಿದ್ದನ್ನು ಸಾನಿಯಾ ಕೇಳಿಸಿಕೊಂಡಿದ್ದಾಳೆ. ಈ ವಿಚಾರದ ಬಗ್ಗೆ ಪ್ರಶ್ನೆ ಮಾಡಿದ್ದಾಳೆ ಸಾನಿಯಾ. ಆದರೆ, ಇದಕ್ಕೆ ವರುಧಿನಿ ಉತ್ತರ ಹೇಳಿಲ್ಲ. ‘ನಾನು ಪ್ಲ್ಯಾನ್ ಮಾಡ್ತಾ ಇದೀನಿ. ಈ ಪ್ಲ್ಯಾನ್ ಯಶಸ್ಸು ಕಂಡರೆ ನಿಮಗೆ ಲಾಭ ಇದೆ. ನನಗೆ ನನ್ನ ಹೀರೋ ಸಿಕ್ತಾನೆ. ನಿಮಗೆ ನಿಮ್ಮ ಎಂಡಿ ಪಟ್ಟ ಸಿಗುತ್ತದೆ’ ಎನ್ನುವ ಆಸೆಯನ್ನು ತೋರಿಸಿದ್ದಾರೆ ವರು. ಇದನ್ನು ಕೇಳಿ ಸಾನಿಯಾ ಸಖತ್ ಖುಷಿಪಟ್ಟಿದ್ದಾಳೆ. ಈ ವಿಚಾರದಲ್ಲಿ ವರುಧಿನಿಯನ್ನು ಬೆಂಬಲಿಸುವ ನಿರ್ಧಾರಕ್ಕೆ ಆಕೆ ಬಂದಿದ್ದಾಳೆ.
ಈ ಮೊದಲು ಸಾನಿಯಾ ಹಾಗೂ ವರು ಒಟ್ಟಾಗಿ ಅನೇಕ ಪ್ಲ್ಯಾನ್ ಮಾಡಿದ್ದಾರೆ. ಇವುಗಳಲ್ಲಿ ಬಹುತೇಕ ಪ್ಲ್ಯಾನ್ಗಳು ಫ್ಲಾಪ್ ಆಗಿದ್ದವು. ಇದು ಇವರ ಕೈ ಹಿಡಿಯುತ್ತದೆಯೇ ಕಾದು ನೋಡಬೇಕಿದೆ.
ಶ್ರೀಲಕ್ಷ್ಮಿ ಎಚ್.