ಅಮ್ಮಮ್ಮನಂತೆ ಶಾಂತಮೂರ್ತಿಯಾದ ಹರ್ಷ; ಸಾನಿಯಾ ಕೂಗಿದರೂ ಇಲ್ಲ, ಕಿರುಚಾಡಿದರೂ ಇಲ್ಲ

| Updated By: ರಾಜೇಶ್ ದುಗ್ಗುಮನೆ

Updated on: Nov 15, 2022 | 7:00 AM

ರತ್ನಮಾಲಾಳನ್ನು ಅಂತ್ಯಸಂಸ್ಕಾರ ಮಾಡಿ ಮರಳಿದ ನಂತರದಲ್ಲಿ ಸಾನಿಯಾ ಕೂಗಾಟ ನಡೆಸಿದ್ದಾಳೆ. ಅಲ್ಲೇ ಇರುವ ಎಲ್ಲರ ಮೇಲೂ ಸಿಟ್ಟು ತೀರಿಸಿಕೊಂಡಿದ್ದಾಳೆ.

ಅಮ್ಮಮ್ಮನಂತೆ ಶಾಂತಮೂರ್ತಿಯಾದ ಹರ್ಷ; ಸಾನಿಯಾ ಕೂಗಿದರೂ ಇಲ್ಲ, ಕಿರುಚಾಡಿದರೂ ಇಲ್ಲ
ಹರ್ಷ-ಸಾನಿಯಾ
Follow us on

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
ಉರಿಯುತ್ತಿರುವ ರತ್ನಮಾಲಾ ಚಿತೆ ಎದುರು ಹೊಸ ಪ್ರತಿಜ್ಞೆ ಮಾಡಿದ ವರು; ಹರ್ಷ-ಭುವಿಗೆ ಇನ್ನಿದೆ ಕಷ್ಟ
ಹರ್ಷ-ಭುವಿನ ಬೇರೆ ಮಾಡೋಕೆ ಮಾಸ್ಟರ್​ ಪ್ಲ್ಯಾನ್ ಮಾಡಿದ ವರುಧಿನಿ
ರತ್ನಮಾಲಾ ಅಂತ್ಯಸಂಸ್ಕಾರ: ಕುಸಿದ ಹೋದ ಹರ್ಷ; ವಿಲ್ ವಿಚಾರ ಹೇಳಲು ಮುಂದಾದ ವರುಧಿನಿ
ರತ್ನಮಾಲಾ ಅಂತ್ಯಸಂಸ್ಕಾರದಲ್ಲಿ ಸಾನಿಯಾಗೆ ಆಸ್ತಿ ಚಿಂತೆ; ಜೋರಾಗಿ ನಕ್ಕೇ ಬಿಟ್ಟಳು ವರುಧಿನಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು


ಹಿಂದಿನ ಎಪಿಸೋಡ್​​ನಲ್ಲಿ ಏನಾಗಿತ್ತು?

ರತ್ನಮಾಲಾ ಅಂತ್ಯಸಂಸ್ಕಾರ ನಡೆದಿದೆ. ನೋವಲ್ಲಿ ಹರ್ಷ ರತ್ನಮಾಲಾಳ ಚಿತೆಗೆ ಬೆಂಕಿ ಇಟ್ಟಿದ್ದಾನೆ. ಆತ ತುಂಬಾನೇ ಕುಗ್ಗಿದ್ದ. ರತ್ನಮಾಲಾ ಚಿತೆ ಉರಿಯುವಾಗ ಎಲ್ಲರೂ ಕಣ್ಣೀರು ಹಾಕಿದ್ದಾರೆ. ತಂದೆಯನ್ನು ಕಳೆದುಕೊಂಡಾಗ ಎಷ್ಟು ನೋವಾಗಿತ್ತೋ ಅದಕ್ಕಿಂತ ಹೆಚ್ಚಿನ ನೋವನ್ನು ಭುವಿ ಈಗ ಅನುಭವಿಸುತ್ತಿದ್ದಾಳೆ. ಎಲ್ಲರೂ ಮರಳಿ ಮನೆಗೆ ಬಂದ ನಂತರ ಸಾನಿಯಾ ಕೂಗಾಟ ನಡೆಸಿದ್ದಾಳೆ.

ಸಾನಿಯಾ ಅರಚಾಟ

ರತ್ನಮಾಲಾಳನ್ನು ಅಂತ್ಯಸಂಸ್ಕಾರ ಮಾಡಿ ಮರಳಿದ ನಂತರದಲ್ಲಿ ಸಾನಿಯಾ ಕೂಗಾಟ ನಡೆಸಿದ್ದಾಳೆ. ಅಲ್ಲೇ ಇರುವ ಎಲ್ಲರ ಮೇಲೂ ಸಿಟ್ಟು ತೀರಿಸಿಕೊಂಡಿದ್ದಾಳೆ. ಪತಿ ಆದಿ ಸಾನಿಯಾಳನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾನೆ. ಆದರೆ, ಅದು ಸಾಧ್ಯವಾಗುವ ಸೂಚನೆ ಸಿಕ್ಕಿಲ್ಲ. ಇದರಿಂದ ಆತ ಅಪ್ಸೆಟ್ ಆಗಿದ್ದಾನೆ. ಇನ್ನು, ವರುಧಿನಿ ಕೂಡ ಅಲ್ಲಿಯೇ ಇದ್ದಳು. ಆಕೆಯ ಮೇಲೂ ಸಾನಿಯಾ ಮಾತಿನ ದಾಳಿ ಮಾಡಿದ್ದಾಳೆ.

‘ನನ್ನ ಹಾಗೂ ಹರ್ಷನ ಜಗಳದಿಂದ ನೇರವಾಗಿ ಲಾಭ ಆಗುತ್ತಿರುವುದು ವರುಧಿನಿಗೆ. ಇದು ಗೊತ್ತಿರುವ ವಿಚಾರವೇ. ಆದರೆ, ಆ ವಿಚಾರ ನಿಮಗೆಲ್ಲಿ ಗೊತ್ತಾಗುತ್ತದೆ? ದೊಡ್ಡತ್ತೆ (ರತ್ನಮಾಲಾ) ಸಾಯುವುದಕ್ಕೂ ಮೊದಲು ಕೊನೆಯದಾಗಿ ಭೇಟಿ ಮಾಡಿದ್ದು ವರುನ. ದೊಡ್ಡತ್ತೆ ಏನೋ ಹೇಳಿದ್ದಾಳೋ. ಆದರೆ, ವರು ಅದನ್ನು ಬಾಯ್ಬಿಡುತ್ತಿಲ್ಲ’ ಎಂದು ಸಾನಿಯಾ ಹೇಳುತ್ತಿದ್ದಂತೆ ವರು ಸಂಕಷ್ಟಕ್ಕೆ ಸಿಲುಕಿದ್ದಾಳೆ. ಆಕೆಯ ಮುಖದಲ್ಲಿ ಹೆದರಿಕೆ ಕಾಣಿಸಿದೆ.

ಶಾಂತ ಮೂರ್ತಿ ಆದ ಹರ್ಷ

ರತ್ನಮಾಲಾ ಎಲ್ಲವನ್ನೂ ಶಾಂತರೀತಿಯಿಂದ ನಿರ್ವಹಿಸುತ್ತಿದ್ದಳು. ಎಂತಹುದೇ ಸ್ಥಿತಿ ಬಂದರೂ ಆಕೆ ಎಲ್ಲವನ್ನೂ ಕೂಲ್ ಆಗಿ ನೋಡುತ್ತಿದ್ದಳು. ಈ ವಿಚಾರದಲ್ಲಿ ಹರ್ಷನಿಗೆ ಹೆಮ್ಮೆ ಇತ್ತು. ಆದರೆ, ಈಗ ರತ್ನಮಾಲಾ ಇಲ್ಲ. ಎಲ್ಲವನ್ನೂ ಈತನೇ ನಿರ್ವಹಿಸಬೇಕಿದೆ. ಆಸ್ತಿಗೆ ತಾನೇ ವಾರಸುದಾರ ಎಂದು ಆತ ಭಾವಿಸಿದ್ದಾನೆ. ಸಾನಿಯಾ ಪದೇಪದೇ ಜಗಳು ಮಾಡಲು ಬಂದಿದ್ದಾಳೆ. ಆದರೆ, ಈತ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಶಾಂತ ರೀತಿಯಲ್ಲಿ ವರ್ತಿಸಿದ್ದಾನೆ. ಇದನ್ನು ನೋಡಿ ಸಾನಿಯಾ ಹಾಗೂ ಆಕೆಯ ಮಾವ ಸುದರ್ಶನ್​​ಗೆ ಅಚ್ಚರಿ ಆಗಿದೆ. ಹರ್ಷ ಯಾಕೆ ಈ ರೀತಿ ವರ್ತಿಸುತ್ತಿದ್ದಾನೆ ಎಂಬುದು ಎಲ್ಲರಿಗೂ ಅಚ್ಚರಿ ತಂದಿದೆ. ಆತನ ಬದಲಾವಣೆ ಕಂಡು ಖುಷಿಪಟ್ಟವರು ಎಂದರೆ ಅದು ಭುವಿ ಮಾತ್ರ.

ವರುಗೆ ಅವಮಾನ

ಹರ್ಷ ಹಾಗೂ ವರುಧಿನಿ ಮಧ್ಯೆ ವೃತ್ತಿ ಜೀವನದ ಕನೆಕ್ಷನ್ ಬಿಟ್ಟು ಮತ್ಯಾವ ಕನೆಕ್ಷನ್​ ಕೂಡ ಇಲ್ಲ. ಇದು ವರುಗೆ ಗೊತ್ತಿದೆ. ಆದರೆ, ಹೇಗಾದರೂ ಮಾಡಿ ಹರ್ಷನನ್ನು ಪಡೆದುಕೊಳ್ಳಬೇಕು ಎಂದು ಆಕೆ ನಿರ್ಧರಿಸಿದ್ದಾಳೆ. ಈ ಕಾರಣಕ್ಕೆ ವರು ನಾನಾ ಪ್ಲ್ಯಾನ್ ಮಾಡುತ್ತಿದ್ದಾಳೆ. ರತ್ನಮಾಲಾ ಮೃತಪಟ್ಟ ನಂತರ ಹರ್ಷನ ಜತೆ ವರುಧಿನಿ ಕೂಡ ಬಂದಿದ್ದಾಳೆ. ಆಕೆ ಮನೆಯವರ ಜತೆ ಕೂತಿದ್ದಳು. ಈ ವೇಳೆ ಹರ್ಷ ಎದ್ದು ಹೋಗುವಂತೆ ಆಕೆಗೆ ಸೂಚಿಸಿದ್ದಾನೆ.

‘ವರು ಇದು ಪಕ್ಕಾ ಫ್ಯಾಮಿಲಿ ಮ್ಯಾಟರ್. ದಯವಿಟ್ಟು 10 ನಿಮಿಷ ಹೊರಗೆ ಇರಿ. ನಾನು ಮನೆಯವರ ಜತೆ ಮಾತನಾಡಬೇಕು. ಕಚೇರಿ ವಿಚಾರ ಎಂದರೆ ನಾನೇ ನಿಮ್ಮನ್ನು ಕರೆಯುತ್ತೇನೆ’ ಎಂದು ಆತ ಹೇಳುತ್ತಿದ್ದಂತೆ ವರು ಅಲ್ಲಿಂದ ತೆರಳಿದ್ದಾಳೆ. ಆಕೆಗೆ ಅವಮಾನ ಆಗಿದೆ. ನನ್ನನ್ನು ಕುಟುಂಬದವನು ಎಂದು ಹರ್ಷ ಯೋಚಿಸುತ್ತಿಲ್ಲ ಎಂದು ಆಕೆಗೆ ಗೊತ್ತಾಗಿದೆ.

ಹೋಗುವುದಕ್ಕೂ ಮೊದಲು ಮೊಬೈಲ್​ನ ಇವರ ಮೀಟಿಂಗ್ ನಡೆಯುವ ಜಾಗದ ಸಮೀಪ ಇಟ್ಟು ಹೋಗಿದ್ದಾಳೆ. ಅಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಆ ರೀತಿ ಮಾಡಿದ್ದಾಳೆ. ಹರ್ಷನ ಮೃದು ಮಾತುಗಳನ್ನು ಕೇಳಿ ವರುಧಿನಿಗೆ ಬೇಸರ ಆಗಿದೆ.

ಶ್ರೀಲಕ್ಷ್ಮಿ ಎಚ್.