ಸಾನಿಯಾ ಬಳಿಕ ರತ್ನಮಾಲಾಳ ಕೊಲ್ಲಲು ಮುಂದಾದ ವರುಧಿನಿ; ಹೆಚ್ಚಿತು ದ್ವೇಷದ ಬೆಂಕಿ

| Updated By: ರಾಜೇಶ್ ದುಗ್ಗುಮನೆ

Updated on: Nov 02, 2022 | 7:00 AM

ಹರ್ಷ ಹಾಗೂ ಭುವಿ ಮದುವೆ ಆಗಿದ್ದಾರೆ. ಇದರಿಂದ ವರುಧಿನಿಗೆ ಎಲ್ಲಿಲ್ಲದ ಸಿಟ್ಟು. ಹೇಗಾದರೂ ಮಾಡಿ ಹರ್ಷನನ್ನು ಪಡೆಯಬೇಕು ಎಂಬ ನಿರ್ಧಾರಕ್ಕೆ ಆಕೆ ಬಂದಿದ್ದಾಳೆ.

ಸಾನಿಯಾ ಬಳಿಕ ರತ್ನಮಾಲಾಳ ಕೊಲ್ಲಲು ಮುಂದಾದ ವರುಧಿನಿ; ಹೆಚ್ಚಿತು ದ್ವೇಷದ ಬೆಂಕಿ
Follow us on

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು

ರತ್ನಮಾಲಾಗೆ ಪ್ರಾಣಾಪಾಯ ಇದೆ. ಒಂದು ಕಡೆ ಅನಾರೋಗ್ಯ ಕಾಡುತ್ತಿದ್ದರೆ ಮತ್ತೊಂದು ಕಡೆ ಆಕೆಗೆ ಹಲವರಿಂದ ಪ್ರಾಣಕ್ಕೆ ಅಪಾಯ ಇದೆ. ಈ ಮೊದಲು ರತ್ನಮಾಲಾಳನ್ನು ಕೊಲ್ಲಲು ಸಾನಿಯಾ ಪ್ರಯತ್ನಿಸಿದ್ದಳು. ರತ್ನಮಾಲಾ ಅಸಹಾಯಕ ಸ್ಥಿತಿಯಲ್ಲಿದ್ದಾಗ ಆಕೆಯನ್ನು ಮುಗಿಸಬೇಕು ಎಂಬುದು ಸಾನಿಯಾ ಪ್ಲ್ಯಾನ್ ಆಗಿತ್ತು. ಆದರೆ, ಅದು ವಿಫಲವಾಗಿತ್ತು. ಈಗ ವರುಧಿನಿ ಸರದಿ. ಆಕೆ ತನ್ನ ಹಳೆಯ ದ್ವೇಷಕ್ಕೆ, ಹತಾಷೆಗೆ ರತ್ನಮಾಲಾಳನ್ನು ಕೊಲ್ಲಲು ಪ್ರಯತ್ನಿಸಿದ್ದಾಳೆ. ರತ್ನಮಾಲಾಗೆ ಹಾಕಲಾದ ಕೃತಕ ಉಸಿರಾಟದ ವ್ಯವಸ್ಥೆಗೆ ವರು ಅಡಚಣೆ ಮಾಡಿದ್ದಾಳೆ.

ಹರ್ಷನಿಂದ ಅವಮಾನ

ಹರ್ಷ ಹಾಗೂ ಭುವಿ ಮದುವೆ ಆಗಿದ್ದಾರೆ. ಇದರಿಂದ ವರುಧಿನಿಗೆ ಎಲ್ಲಿಲ್ಲದ ಸಿಟ್ಟು. ಹೇಗಾದರೂ ಮಾಡಿ ಹರ್ಷನನ್ನು ಪಡೆಯಬೇಕು ಎಂಬ ನಿರ್ಧಾರಕ್ಕೆ ಆಕೆ ಬಂದಿದ್ದಾಳೆ. ಹರ್ಷನ ಪಿ.ಎ. ಆಗಿ ನೇಮಕಗೊಂಡ ವರು ಆತನ ಸಹಾಯಕ್ಕೆ ಇಳಿದಿದ್ದಳು. ಹರ್ಷನಿಗೆ ಕ್ಲೋಸ್ ಆಗಬಹುದು ಎಂಬುದು ಆಕೆಯ ಕನಸಾಗಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಇದೇ ಸಂದರ್ಭಕ್ಕೆ ಸರಿಯಾಗಿ ಸಾನಿಯಾ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾಳೆ.

‘ಹರ್ಷನ ಪಿ.ಎ. ಆದ ಮಾತ್ರಕ್ಕೆ ನೀನು ಹರ್ಷನನ್ನು ಮದುವೆ ಆದಷ್ಟು ಖುಷಿ ಪಡುತ್ತಾ ಇದ್ದೀಯಾ. ನೀನು ಮಾಡುವ ಕೆಲಸದಿಂದ ಹರ್ಷನಿಗೆ ಸಹಾಯ ಆಗುತ್ತಿದೆ. ಆದರೆ, ಹರ್ಷನಿಂದ ನಿನಗೆ ಯಾವುದೇ ಬೆನಿಫಿಟ್ ಇಲ್ಲ. ಹೀಗೆ, ಪಿ.ಎ. ಕೆಲಸ ಮಾಡಿಕೊಂಡಿರು. ಒಂದು ದಿನ ಕೂದಲು ಹಣ್ಣಾಗುತ್ತದೆ. ವಯಸ್ಸಾಗುತ್ತದೆ. ಹರ್ಷ ಅಲ್ಲಿ ಹಾಯಾಗಿ ಭುವಿ ಜತೆ ಸಮಯ ಕಳೆಯುತ್ತಿರುತ್ತಾನೆ’ ಎಂದು ವರುಗೆ ಸಾನಿಯಾ ಚುಚ್ಚಿದ್ದಾಳೆ. ಇದರಿಂದ ವರುಧಿನಿಗೆ ಸಿಟ್ಟು ಬಂದಿದೆ.

ಸಿಟ್ಟಿನ ಮಧ್ಯೆಯೂ ಸಾನಿಯಾ ಮಾತು ವರುಗೆ ಹೌದು ಅನ್ನಿಸಿದೆ. ಹೀಗಿರುವಾಗಲೇ ಹರ್ಷನ ಬಳಿ ಮಾತನಾಡೋಕೆ ತೆರಳಿದ್ದಾಳೆ ವರು. ಹರ್ಷ-ಭುವಿ ಮಾತನಾಡುತ್ತಿದ್ದರಿಂದ ವರುಧಿನಿಯ ಮಾತನ್ನು ಹರ್ಷ ಕಿವಿಮೇಲೆ ಹಾಕಿಕೊಳ್ಳಲಿಲ್ಲ. ಆದಾಗ್ಯೂ ಮತ್ತೆ ಮತ್ತೆ ಮಾತನಾಡಿಸೋಕೆ ಹೋಗಿದ್ದಾಳೆ ವರು. ಇದರಿಂದ ಸಿಟ್ಟಾದ ಹರ್ಷ, ವರುಗೆ ಮಧ್ಯ ಮಾತನಾಡದಂತೆ ಎಚ್ಚರಿಕೆ ನೀಡಿದ್ದಾನೆ. ಆಗಲೇ ವರು ಸೇಡು ತೀರಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾಳೆ.

ಸಾನಿಯಾ ಜತೆ ಕೈ ಜೋಡಿಸಿದ ವರು:

ಸಾನಿಯಾ ಹಾಗೂ ವರು ಬೇರೆ ಬೇರೆ ಆಗಿದ್ದರು. ಹರ್ಷನಿಗೆ ಕ್ಲೋಸ್ ಆಗುತ್ತಿದ್ದೇನೆ ಎನ್ನುವ ಕಾರಣಕ್ಕೆ ಸಾನಿಯಾ ಸಹವಾಸವನ್ನು ವರು ಕಡಿಮೆ ಮಾಡಿದ್ದಳು. ಆದರೆ, ಪರಿಸ್ಥಿತಿ ಬದಲಾಗಿದೆ. ವರುಗೆ ಸಾನಿಯಾಳ ಸಹಾಯ ಬೇಕಾಗಿದೆ. ಹೀಗಾಗಿ, ಆಕೆ ಸಾನಿಯಾಳ ಜತೆ ಕೈ ಜೋಡಿಸಿದ್ದಾಳೆ.

‘ನಾನು ಒಂದು ಬಾಂಡ್ ಪೇಪರ್ ಕೊಡ್ತೀನಿ. ಇದಕ್ಕೆ ರತ್ನಮಾಲಾಳ ಸಹಿ ಬೇಕು. ಹಾಕಿಸಿಕೊಂಡು ಬಾ’ ಎಂದು ಸಾನಿಯಾ ಪೇಪರ್ ನೀಡಿದ್ದಾಳೆ. ಇದನ್ನು ತೆಗೆದುಕೊಂಡು ರತ್ನಮಾಲಾ ಇರುವ ಚೇಂಬರ್​ಗೆ ತೆರಳಿದ್ದಾಳೆ. ಆಗ ಆಕೆಗೆ ಏನನಿಸಿತೋ ಏನೋ ರತ್ನಮಾಲಾಳನ್ನು ಸಾಯಿಸಲು ಮುಂದಾಗಿದ್ದಾಳೆ. ಕೃತಕ ಉಸಿರಾಟದ ವ್ಯವಸ್ಥೆಯನ್ನೇ ಆಫ್ ಮಾಡಿದ್ದಾಳೆ. ಇದರಿಂದ ರತ್ನಮಾಲಾ ಎದುರುಸಿರು ಬಿಟ್ಟಿದ್ದಾಳೆ.

ಹರ್ಷನಿಗೆ ಭುವಿಯ ಪಾಠ

ಹರ್ಷ ಸದಾ ಸಿಟ್ಟು ಮಾಡಿಕೊಳ್ಳುತ್ತಾನೆ. ಆದರೆ, ಭುವಿ, ಹರ್ಷನಿಗೆ ವಿರುದ್ಧವಾದ ಮನಸ್ಥಿತಿ ಇರುವವಳು. ಆಕೆ ಶಾಂತ ಸ್ವಭಾವದವಳು. ಯಾವುದೇ ಕಠಿಣ ಪರಿಸ್ಥಿತಿ ಬಂದರೂ ಕೂಲ್ ಆಗಿ ಆಲೋಚಿಸುತ್ತಾಳೆ. ಹರ್ಷ ಎಲ್ಲಾ ವಿಚಾರಕ್ಕೆ ಸಿಟ್ಟು ಮಾಡಿಕೊಳ್ಳುವುದರಿಂದ ಆತನಿಗೆ ಬುದ್ಧಿ ಹೇಳುವ ಪ್ರಯತ್ನವನ್ನು ಭುವಿ ಮಾಡಿದ್ದಾಳೆ. ಸಿಟ್ಟು ಮಾಡಿಕೊಳ್ಳುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂಬ ಮಾತನ್ನು ರತ್ನಮಾಲಾ ಹೇಳಿದ್ದಾಳೆ. ಇದು ಹರ್ಷನಿಗೂ ಹೌದು ಅನಿಸಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಿಟ್ಟು ಮಾಡಿಕೊಳ್ಳಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾನೆ.