ಹರ್ಷನ ಪಡೆಯಲು ಡಬಲ್ ಗೇಮ್ ಆರಂಭಿಸಿದ ವರುಧಿನಿ; ದಡ್ಡಿ ಆಗುತ್ತಿದ್ದಾಳೆ ಭುವಿ

| Updated By: ರಾಜೇಶ್ ದುಗ್ಗುಮನೆ

Updated on: Nov 23, 2022 | 8:00 AM

ವರುಧಿನಿ ಮಾನಸಿಕ ಅಸ್ವಸ್ಥೆ ತರಹ ಆಡುತ್ತಾಳೆ. ಆಕೆಗೆ ಮಾನಸಿಕ ಸಮಸ್ಯೆ ಇದೆ. ಕೆಲವೊಮ್ಮೆ ಅವಳು ನಡೆದುಕೊಳ್ಳುವ ರೀತಿ ಭಯ ಹುಟ್ಟಿಸಿದ ಉದಾಹರಣೆ ಇದೆ.

ಹರ್ಷನ ಪಡೆಯಲು ಡಬಲ್ ಗೇಮ್ ಆರಂಭಿಸಿದ ವರುಧಿನಿ; ದಡ್ಡಿ ಆಗುತ್ತಿದ್ದಾಳೆ ಭುವಿ
ಹರ್ಷ-ವರು
Follow us on

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
ಉರಿಯುತ್ತಿರುವ ರತ್ನಮಾಲಾ ಚಿತೆ ಎದುರು ಹೊಸ ಪ್ರತಿಜ್ಞೆ ಮಾಡಿದ ವರು; ಹರ್ಷ-ಭುವಿಗೆ ಇನ್ನಿದೆ ಕಷ್ಟ
ಹರ್ಷ-ಭುವಿನ ಬೇರೆ ಮಾಡೋಕೆ ಮಾಸ್ಟರ್​ ಪ್ಲ್ಯಾನ್ ಮಾಡಿದ ವರುಧಿನಿ
ರತ್ನಮಾಲಾ ಅಂತ್ಯಸಂಸ್ಕಾರ: ಕುಸಿದ ಹೋದ ಹರ್ಷ; ವಿಲ್ ವಿಚಾರ ಹೇಳಲು ಮುಂದಾದ ವರುಧಿನಿ
ರತ್ನಮಾಲಾ ಅಂತ್ಯಸಂಸ್ಕಾರದಲ್ಲಿ ಸಾನಿಯಾಗೆ ಆಸ್ತಿ ಚಿಂತೆ; ಜೋರಾಗಿ ನಕ್ಕೇ ಬಿಟ್ಟಳು ವರುಧಿನಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಭುವಿಗೆ ವಿಲ್ ವಿಚಾರ ಗೊತ್ತಾಗಿದೆ. ನೇರವಾಗಿ ಮನೆಗೆ ತೆರಳಿದ ಅವಳು ರತ್ನಮಾಲಾ ನೀಡಿದ್ದ ಲಕೋಟೆ ತೆರೆದು ನೋಡಿದ್ದಾಳೆ. ಆಗ ಆಕೆಗೆ ಅಸಲಿ ವಿಚಾರ ಗೊತ್ತಾಗಿದೆ. ಅದರಲ್ಲಿ ಬರೆದಿರುವ ವಿಚಾರಗಳು ಭುವಿಗೆ ಶಾಕ್ ನೀಡಿವೆ. ರತ್ನಮಾಲಾ ಭೇಟಿ ಸಂದರ್ಭದಲ್ಲಿ ಅವಳು ಅನೇಕ ಬಾರಿ ಜವಾಬ್ದಾರಿ ಬಗ್ಗೆ ಮಾತನಾಡಿದ್ದಳು. ಆದರೆ, ಆ ಜವಾಬ್ದಾರಿ ಇಷ್ಟು ದೊಡ್ಡದು ಎನ್ನುವ ವಿಚಾರ ಆಕೆಗೆ ಗೊತ್ತಿರಲಿಲ್ಲ.

ವರು ಆಟ ಶುರು

ವರುಧಿನಿ ಮಾನಸಿಕ ಅಸ್ವಸ್ಥೆ ತರಹ ಆಡುತ್ತಾಳೆ. ಆಕೆಗೆ ಮಾನಸಿಕ ಸಮಸ್ಯೆ ಇದೆ. ಕೆಲವೊಮ್ಮೆ ಅವಳು ನಡೆದುಕೊಳ್ಳುವ ರೀತಿ ಭಯ ಹುಟ್ಟಿಸಿದ ಉದಾಹರಣೆ ಇದೆ. ಈ ವಿಚಾರದಲ್ಲಿ ಭುವಿಗೆ ಭಯ ಇದೆ. ಆಕೆಗೆ ಚಿಕಿತ್ಸೆ ಕೊಡಿಸುವ ಪ್ರಯತ್ನ ಕೂಡ ನಡೆದಿತ್ತು. ಆದರೆ, ಅದು ಯಶಸ್ಸು ಕಾಣಲಿಲ್ಲ. ಈಗ ಹರ್ಷನ ಪಡೆದುಕೊಳ್ಳಲು ವರು ಹೊಸ ಪ್ಲ್ಯಾನ್ ರೂಪಿಸಿದ್ದಾಳೆ. ಇದು ಯಶಸ್ವಿ ಆಗಲಿದೆಯೇ ಎಂಬುದು ಸದ್ಯದ ಕುತೂಹಲ.

ವಿಲ್ ವಿಚಾರ ಹರ್ಷನಿಗೆ ತಿಳಿದಿಲ್ಲ. ರತ್ನಮಾಲಾ ಈ ಮೊದಲು ವಿಲ್ ವಿಚಾರವನ್ನು ಅನೇಕ ಬಾರಿ ಹೇಳಲು ಪ್ರಯತ್ನಿಸಿದ್ದಳು. ಆದರೆ, ಅದು ಯಶಸ್ವಿ ಆಗಲಿಲ್ಲ. ಸಾಯುವುದಕ್ಕೂ ಮುನ್ನ ರತ್ನಮಾಲಾ ಹರ್ಷನಿಗೆ ವಿಲ್ ವಿಚಾರ ಹೇಳುವವಳಿದ್ದಳು. ಅದನ್ನು ಹೇಳೋಕೆ ವರುಧಿನಿ ಅವಕಾಶ ನೀಡಲೇ ಇಲ್ಲ. ಈಗ ಅದು ಸಮಸ್ಯೆಯನ್ನು ತಂದೊಡ್ಡುವ ಸೂಚನೆ ನೀಡಿದೆ. ಇದರಿಂದ ಭುವಿ ಹೇಗೆ ಪಾಸ್ ಆಗುತ್ತಾಳೆ ಅನ್ನೋದನ್ನು ಕಾದು ನೋಡಬೇಕಿದೆ.

ಭುವಿ ಹಾಗೂ ವರುಧಿನಿ ವಿಲ್ ವಿಚಾರವಾಗಿ ಮಾತನಾಡಿದ್ದಾರೆ. ಆಗ ವರುಧಿನಿ ಸುಳ್ಳುಗಳನ್ನು ಹೇಳಿದ್ದಾಳೆ. ‘ಹರ್ಷನಿಗೆ ರತ್ನಮಾಲಾ ವಿಲ್ ವಿಚಾರ ಹೇಳಿದ್ದಾಳೆ. ಅವರಿಗೆ ಈ ಬಗ್ಗೆ ಗೊತ್ತಿದೆ. ಆದರೆ ಗೊತ್ತಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ’ ಎಂದು ಸುಳ್ಳು ಹೇಳಿದ್ದಾಳೆ ವರುಧಿನಿ. ಇದನ್ನು ಭುವಿ ನಂಬಿದ್ದಾಳೆ. ಈ ಮೂಲಕ ತನ್ನ ದಡ್ಡತನ ಪ್ರದರ್ಶನ ಮಾಡಿದ್ದಾಳೆ.

ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ ಟ್ವಿಸ್ಟ್

ಕನ್ನಡತಿ ಧಾರಾವಾಹಿಗೆ ಸಿಗುತ್ತಿರುವ ಟ್ವಿಸ್ಟ್​ಗಳು ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಮೊದಲನೆಯದಾಗಿ ರತ್ನಮಾಲಾ ಮೃತಪಡುವುದನ್ನು ಯಾರೂ ಊಹಿಸಿರಲಿಲ್ಲ. ಪದೇಪದೇ ಆಕೆಗೆ ಅನಾರೋಗ್ಯ ಆದಂತೆ ತೋರಿಸುವುದರಿಂದ ವೀಕ್ಷಕರಿಗೆ ಅನುಮಾನ ಬಂದಿತ್ತಾದರೂ ಈ ರೀತಿಯ ಟ್ವಿಸ್ಟ್ ಕೊಡಬಹುದು ಎಂಬ ಊಹೆ ಇರಲಿಲ್ಲ. ಈಗ ಭುವಿ ದಡ್ಡಿಯ ರೀತಿ ನಡೆದುಕೊಳ್ಳುತ್ತಿದ್ದಾಳೆ. ಹರ್ಷ ಹಾಗೂ ಭುವಿ ಮಧ್ಯೆ ಗ್ಯಾಪ್ ಮೂಡುವ ಸೂಚನೆ ಸಿಕ್ಕಿದೆ. ಈ ಎಲ್ಲಾ ಕಾರಣದಿಂದ ವೀಕ್ಷಕರು ಬೇಸರ ಹೊರ ಹಾಕುತ್ತಿದ್ದಾರೆ. ಇನ್ನು, ಈ ದಂಪತಿಗೆ ಡಿವೋರ್ಸ್​ ಕೊಡಿಸುವ ಆಲೋಚನೆಯೂ ವರುಧಿನಿಗೆ ಇದೆ.

ಬೆಣ್ಣೆ ಹಚ್ಚಿದ ಸಾನಿಯಾ

ಎಂಡಿ ಪಟ್ಟ ಸಿಗದೆ ಸಾನಿಯಾ ಒದ್ದಾಡುತ್ತಿದ್ದಾಳೆ. ಆಕೆಯನ್ನು ಕೆಲಸದಿಂದ ತೆಗೆದು ಹಾಕಿರುವುದು ಸಾಕಷ್ಟು ಬೇಸರ ಮೂಡಿಸಿದೆ. ಈ ಕಾರಣಕ್ಕೆ ಆಕೆ ಹೇಗಾದರೂ ಮಾಡಿ ಎಂಡಿ ಪಟ್ಟ ಪಡೆಯಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾಳೆ. ಇದಕ್ಕಾಗಿ ಆಕೆ ವರುಧಿನಿ ಜತೆ ಕೈ ಜೋಡಿಸಿದ್ದಾಳೆ.

ವರುಧಿನಿ ಏನೋ ಪ್ಲ್ಯಾನ್ ಮಾಡುತ್ತಿದ್ದಾಳೆ ಎನ್ನುವ ಸೂಚನೆ ಆಕೆಗೆ ಸಿಕ್ಕಿದೆ. ಈ ಕಾರಣಕ್ಕೆ ಆಕೆಯ ವಿರುದ್ಧ ತಿರುಗಿ ಬೀಳುವ ಪ್ರಯತ್ನ ಮಾಡಿದಳು ಸಾನಿಯಾ. ಇದು ವರ್ಕೌಟ್ ಆಗಿಲ್ಲ. ಈ ಕಾರಣಕ್ಕೆ ಆಕೆಗೆ ಬೆಣ್ಣೆ ಹಚ್ಚುವ ಕೆಲಸ ಮಾಡಿದ್ದಾಳೆ. ಹೀಗಾಗಿ, ಸಾನಿಯಾ ಹಾಗೂ ವರುಧಿನಿ ಒಂದಾಗಿ ಹರ್ಷ ಹಾಗೂ ಭುವಿನ ಬೇರೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀಲಕ್ಷ್ಮಿ ಎಚ್.