Lakshana Serial: ಮೌರ್ಯನ ಕೈಗೊಂಬೆಯಾಗಿದ್ದಾಳೆ ಶ್ವೇತಾ, ನಾನು ಹೇಳಿದ ಹಾಗೆ ನೀನು ಕೇಳಲೇಬೇಕು
ಮೌರ್ಯ ನೇರವಾಗಿ ನಕ್ಷತ್ರಳ ಕೋಣೆಗೆ ಬಂದು ಆಕೆಯನ್ನು ಸಾಯಿಸುವ ಬೆದರಿಕೆಯನ್ನು ಒಡ್ಡುತ್ತಾನೆ. ಇದರಿಂದ ಭಯಗೊಂಡ ನಕ್ಷತ್ರ ಜೋರಾಗಿ ಭೂಪತಿಯನ್ನು ಕೂಗುತ್ತಾಳೆ. ಆಕೆಯ ಕಿರುಚಾಟಕ್ಕೆ ಭೂಪತಿ ಕೋಣೆಯ ಬಳಿ ಬಂದಾಗ ಮೌರ್ಯ ತಪ್ಪಿಸಿಕೊಂಡು ಹೋಗುತ್ತಿರುವುದು ಕಂಡು ಅವನನ್ನು ಹಿಡಿಯಲು ಆತನ ಹಿಂದೆಯೇ ಓಡಿ ಹೋಗುತ್ತಾನೆ.
ಧಾರಾವಾಹಿ: ಲಕ್ಷಣ (Lakshana Serial)
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ನಮ್ಮ ಮನೆ ಮಗನಾದ ಮೌರ್ಯನಿಂದ ಸಿ.ಎಸ್‌ಗೆ ಯಾವ ತೊಂದರೆಯಾಗಬಾರದು ಅವರನ್ನು ಕಾಪಾಡುವ ಜವಬ್ದಾರಿ ನಿನ್ನದೆಂದು ಭೂಪತಿಗೆ ಶಕುಂತಳಾದೇವಿ ಹೇಳುತ್ತಾರೆ. ಅಮ್ಮನ ಈ ಮಾತಿನಿಂದ ಮನೆಯವರಿಗೆಲ್ಲರಿಗೂ ತುಂಬಾ ಖುಷಿ ಆಗುತ್ತೆ.
ಮೌರ್ಯನ ಕೈಗೊಂಬೆ ಶ್ವೇತಾ
ಮೌರ್ಯ ನೇರವಾಗಿ ನಕ್ಷತ್ರಳ ಕೋಣೆಗೆ ಬಂದು ಆಕೆಯನ್ನು ಸಾಯಿಸುವ ಬೆದರಿಕೆಯನ್ನು ಒಡ್ಡುತ್ತಾನೆ. ಇದರಿಂದ ಭಯಗೊಂಡ ನಕ್ಷತ್ರ ಜೋರಾಗಿ ಭೂಪತಿಯನ್ನು ಕೂಗುತ್ತಾಳೆ. ಆಕೆಯ ಕಿರುಚಾಟಕ್ಕೆ ಭೂಪತಿ ಕೋಣೆಯ ಬಳಿ ಬಂದಾಗ ಮೌರ್ಯ ತಪ್ಪಿಸಿಕೊಂಡು ಹೋಗುತ್ತಿರುವುದು ಕಂಡು ಅವನನ್ನು ಹಿಡಿಯಲು ಆತನ ಹಿಂದೆಯೇ ಓಡಿ ಹೋಗುತ್ತಾನೆ. ಆದರೆ ಮೌರ್ಯ ಸ್ವಲ್ಪದರಲ್ಲಿಯೇ ತಪ್ಪಿಸಿಕೊಳ್ಳುತ್ತಾನೆ. ಭೂಪತಿ ಹೊರಗೆ ಹೋಗಿ ಸೆಕ್ಯುರಿಟಿಯ ಬಳಿ ಮೌರ್ಯ ಇಲ್ಲಿಂದ ಹೋಗಿದ್ದಾನ ಎಂದು ಕೇಳಿದಾಗ ಅವನು ಇಲ್ಲಿಂದ ಒಳಗೂ ಬಂದಿಲ್ಲ, ಹೊರಗೂ ಬಂದಿಲ್ಲ ಎಂದು ಹೇಳುತ್ತಾನೆ.
ನಂತರ ಮನೆಯವರೆಲ್ಲರೂ ಗಾಬರಿಯಿಂದಲೇ ಮೌರ್ಯನನ್ನು ಮನೆಯಿಡಿ ಹುಡುಕಾಡುತ್ತಾರೆ. ಆದರೆ ಶ್ವೇತಾಳಿಗೆ ಮಾತ್ರ ಭಯ ಶುರುವಾಗಿದೆ. ತನ್ನ ಕೋಣೆಗೆ ಬಂದು ಅತ್ತಿಂದ ಇತ್ತ ನಡೆದಾಡುತ್ತಾ ಈ ಮೌರ್ಯನಿಂದಾಗಿ ನನ್ನ ಬಣ್ಣ ಬಯಲಾಗುತ್ತದೋ ಏನೋ, ಅವನಿಂದಾಗಿ ನಾನು ಕೂಡಾ ಸಿಕ್ಕಿ ಹಾಕಿಕೊಳ್ಳಬಹುದು. ಅದು ಯಾಕಾದರೋ ಸಿ.ಎಸ್‌ನ್ನು ಸಾಯಿಸಲು ಅವನ ಜೊತೆ ಕೈ ಜೋಡಿಸಿ ಅವನಿಗೆ ಸಹಾಯ ಮಾಡಲು ಹೋದೆ. ಅವನು ಬಾಯಿ ಬಿಟ್ಟರೆ ನನ್ನ ಬಂಡವಾಳ ಹೊರಗೆ ಬರುತ್ತೆ. ಈ ಪೋಲಿಸ್‌ನವರಿಗೆ ಆ ಕ್ರಿಮಿನಲ್ ಮೌರ್ಯನನ್ನ ಎನ್‌ಕೌಂಟರ್ ಮಾಡಿ ಬಿಸಾಡಲು ಏನು ರೋಗ ಎಂದು ಒಬ್ಬಳೇ ಮಾತನಾಡಿಕೊಳ್ಳುತ್ತಾಳೆ.
ಇವಳ ಮಾತನ್ನೆಲ್ಲಾ ಆಕೆಯ ರೂಮ್‌ನಲ್ಲಿ ಅಡಗಿ ಕುಳಿತಿದ್ದ ಮೌರ್ಯ ಕೇಳಿಸಿಕೊಳ್ಳುತ್ತಾನೆ. ಮತ್ತು ಅವಳ ಎದುರು ಬಂದು ಏನು ನನ್ನನ್ನು ಎನ್‌ಕೌಂಟರ್ ಮಾಡಿ ಸಾಯಿಸಬೇಕಾ, ಏನೇ ಹೇಳಿದ್ದು ನೀನು ಎಂದು ಶ್ವೇತಾಳನ್ನು ಪ್ರಶ್ನೆ ಮಾಡುತ್ತಾನೆ ಮೌರ್ಯ. ಆತನನ್ನು ಕಂಡು ಶ್ವೇತಾಳಿಗೆ ಒಮ್ಮೆಲೇ ಶಾಕ್ ಆಗುತ್ತೆ. ನನ್ನ ಕೋಣೆಗೆ ಯಾಕೆ ಬಂದೆ, ಇಲ್ಲಿಂದ ಹೋದ್ರೆ ಸರಿ. ಇಲ್ಲಂದ್ರೆ ಜೋರಾಗಿ ಕಿರುಚಿ ಮನೆಯವರೆಲ್ಲರನ್ನು ಕರೆಸುತ್ತೇನೆ ಎಂದು ಹೇಳುತ್ತಾಳೆ. ಆಗ ಮೌರ್ಯ ಆಯ್ತು ಮನೆಯವರೆಲ್ಲರನ್ನು ಕರೆಸು. ನಿನ್ನ ಬಂಡವಾಳವನ್ನು ಕೂಡಾ ಮನೆಯವರಿಗೆ ಹೇಳುತ್ತೇನೆ. ಹೇಗಿದ್ದರೂ ನಾವಿಬ್ಬರು ಕ್ರೆಮ್ ಪಾಟ್ನರ್ಸ್ ಅಲ್ವಾ ಅಂತ ಮೌರ್ಯ ಹೇಳಿದಾಗ ಆತನ ಮಾತಿಗೆ ಗಾಬರಿಯಾದ ಶ್ವೇತಾ, ನನ್ನ ವಿಷಯವನ್ನು ಮಾತ್ರ ಮನೆಯವರಿಗೆ ಹೇಳಬೇಡ. ಅದು ಹಿಂದೆ ಆಗಿರುವ ವಿಷಯ ಅದನ್ನು ಮಾತ್ರ ಅತ್ತೆಗೆ ಹೇಳಬೇಡ ಎಂದು ಹೇಳುತ್ತಾಳೆ. ನಿನ್ನ ವಿಷಯ ಯಾರಿಗೂ ಗೊತ್ತಾಗಬಾರದು ಅಂತಿದ್ರೆ ನಕ್ಷತ್ರಳನ್ನು ಸಾಯಿಸಲು ನೀನು ನನಗೆ ಸಹಾಯ ಮಾಡಬೇಕು, ನಾನು ಹೇಳಿದ ಹಾಗೆ ನೀನು ಕೇಳಲೇಬೇಕು ಎಂದು ಕಂಡಿಷನ್ ಹಾಕುತ್ತಾನೆ.
ಇದನ್ನು ಓದಿ:ಸಿ.ಎಸ್‌ನ್ನು ಕಾಪಾಡುವ ಜವಾಬ್ದಾರಿ ನಿನ್ನದು ಭೂಪತಿ ಎಂದ ಶಕುಂತಳಾದೇವಿ
ಆದರೆ ಇವನ ಈ ಮಾತಿಗೆ ಶ್ವೇತಾ ಒಪ್ಪಿಗೆ ನೀಡುವುದಿಲ್ಲ. ಆಗ ಸ್ವತಃ ಮೌರ್ಯನೇ ಜೋರಾಗಿ ಕಿರುಚಿ ಎಲ್ಲರನ್ನು ಶ್ವೇತಾಳ ಕೋಣೆಗೆ ಬರುವಂತೆ ಹೇಳುತ್ತಾನೆ. ಇದರಿಂದ ಇನ್ನಷ್ಟು ಗಾಬರಿಗೊಂಡ ಶ್ವೇತಾ ಮನೆಯವರಿಗೆ ನನ್ನ ವಿಷಯ ಹೇಳಬೇಡ ಎಂದು ಮೌರ್ಯನ ಕಾಲಿಗೆ ಬೀಳುತ್ತಾಳೆ. ಅಷ್ಟರಲ್ಲಿ ಎಲ್ಲರು ಶ್ವೇತಾಳ ಕೋಣೆಗೆ ಬರುತ್ತಾರೆ.
ಮನೆಯವರೆಲ್ಲಾ ಬಂದಾಗ ಮೌರ್ಯ ಚಾಕುವನ್ನು ಶ್ವೇತಾಳ ಕುತ್ತಿಗೆಗೆ ಹಿಡಿದು ನನ್ನ ಹತ್ತಿರ ಬಂದರೆ ಈಕೆಯನ್ನು ಸಾಯಿಸಿ ಬಿಡುತ್ತೇನೆ ಎಂದು ಹೇಳುತ್ತಾನೆ. ಅವಳಿಗೇನು ತೊಂದರೆ ಮಾಡಬೇಡ ಎಂದು ಶಕುಂತಳಾದೇವಿ ಹೇಳುತ್ತಾರೆ. ದಯವಿಟ್ಟು ಪೋಲಿಸರಿಗೆ ಸೆರೆಂಡರ್ ಆಗೂ ಎಂದರೂ ಮಾತು ಕೇಳದ ಮೌರ್ಯ, ಆ ನಕ್ಷತ್ರಳನ್ನು ಸಾಯಿಸಿಯೇ ನಾನು ಜೈಲಿಗೆ ಹೋಗಿ ನನ್ನ ಪಾಲಿನ ಶಿಕ್ಷೆಯನ್ನು ಅನುಭವಿಸುತ್ತೇನೆ ಎಂದು ಹೇಳುತ್ತಾ.
ಶ್ವೇತಾಳ ಕುತ್ತಿಗೆಗೆ ಚಾಕು ಹಿಡಿಯುತ್ತಾ ಮನೆಯ ಹೊರಗಡೆ ಬಂದು ಭೂಪತಿಯ ಬಳಿ ಕಾರ್ ಕೀ ಕೇಳಿ ಅವರದೇ ಕಾರ್‌ನಲ್ಲಿ ತಪ್ಪಿಸಿಕೊಂಡು ಹೋಗುತ್ತಾನೆ. ಹೋಗುವ ಮುಂಚೆ ಶ್ವೇತಾಳ ಕಿವಿಯಲ್ಲಿ ನಾನು ಹೇಳಿದ ಹಾಗೆ ನೀನು ಕೇಳಲೇಬೇಕು ಅಂತ ಹೇಳಿ ಹೋಗುತ್ತಾನೆ. ಆದರೆ ಮನೆಯವರಿಗೆ ಆತನನ್ನು ಹಿಡಿಯಲು ಆಗಲಿಲ್ಲ. ಈಗ ಶ್ವೇತಾ ವಿಧಿಯಿಲ್ಲದೆ ಮೌರ್ಯನ ಮಾತನ್ನು ಕೇಳಲೇಬೇಕಾದ ಪರಿಸ್ಥಿತಿ ಬಂದೊದಗಿದೆ. ಇನ್ನು ಇವರಿಂದ ಏನೆಲ್ಲಾ ಅವಾಂತರ ಆಗಲಿದೆಯೋ ಎಂದು ಮುಂದೆ ನೋಡಬೇಕಾಗಿದೆ.
ಮಧುಶ್ರೀ ಅಂಚನ್
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:01 am, Wed, 23 November 22