ನಿಧಿ-ನಿತ್ಯಾ ಮಧ್ಯೆ ಯಾರು ಇಷ್ಟ ಆಗ್ತಾರೆ? ಉತ್ತರಿಸಿದ ಕರ್ಣ

ಕಿರಣ್ ರಾಜ್ ಅವರು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಅವರು ಯಾವಾಗಲೂ ನೇರ ಮಾತುಗಳಿಂದ ಇಷ್ಟ ಆಗುತ್ತಾರೆ. ಕೆಲವೊಮ್ಮೆ ಧಾರಾವಾಹಿಯನ್ನು ಇಷ್ಟಪ್ಟ ಬಳಿಕ ಅಲ್ಲಿನ ಪಾತ್ರಧಾರಿಗಳನ್ನು ಇಷ್ಟಪಟ್ಟ ಉದಾಹರಣೆ ಸಾಕಷ್ಟು ಇದೆ. ಆದರೆ ಕಿರಣ್ ರಾಜ್ ಆ ರೀತಿ ಅಲ್ಲವೇ ಅಲ್ಲ. ಈ ವಿಚಾರವನ್ನು ಸ್ವತಃ ಅವರೇ ರಿವೀಲ್ ಮಾಡಿದರು.

ನಿಧಿ-ನಿತ್ಯಾ ಮಧ್ಯೆ ಯಾರು ಇಷ್ಟ ಆಗ್ತಾರೆ? ಉತ್ತರಿಸಿದ ಕರ್ಣ
ನಿತ್ಯಾ-ಕರ್ಣ ಮದುವೆ
Edited By:

Updated on: Oct 09, 2025 | 8:45 AM

‘ಕರ್ಣ’ ಧಾರಾವಾಹಿಯಲ್ಲಿ (Karna Serial) ಹಲವು ಟ್ವಿಸ್ಟ್​ಗಳು ಎದುರಾಗುತ್ತಾ ಇವೆ. ನಿತ್ಯಾ ಹಾಗೂ ನಿಧಿ ಮಧ್ಯೆ ಪೈಕಿ ಕರ್ಣ ಯಾರನ್ನು ವಿವಾಹ ಆಗುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಕೊನೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ ಎಂದೇ ಹೇಳಬಹುದು. ಕರ್ಣ ಹಾಗೂ ನಿತ್ಯಾ ವಿವಾಹ ನೆರವೇರಲಿದೆ. ಹಾಗಾದರೆ ಕರ್ಣ ಯಾರನ್ನು ಹೆಚ್ಚು ಇಷ್ಟಪಡುತ್ತಾರೆ? ಈ ಪ್ರಶ್ನೆಗೆ ಕಿರಣ್ ರಾಜ್ ಅವರೇ ಉತ್ತರ ನೀಡಿದ್ದಾರೆ. ಅವರ ಉತ್ತರಕ್ಕೆ ಅನೇಕರು ಭೇಷ್ ಎಂದಿದ್ದಾರೆ.

ಕಿರಣ್ ರಾಜ್ ಅವರು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಅವರು ಯಾವಾಗಲೂ ನೇರ ಮಾತುಗಳಿಂದ ಇಷ್ಟ ಆಗುತ್ತಾರೆ. ಕೆಲವೊಮ್ಮೆ ಧಾರಾವಾಹಿಯನ್ನು ಇಷ್ಟಪ್ಟ ಬಳಿಕ ಅಲ್ಲಿನ ಪಾತ್ರಧಾರಿಗಳನ್ನು ಇಷ್ಟಪಟ್ಟ ಉದಾಹರಣೆ ಸಾಕಷ್ಟು ಇದೆ. ಆದರೆ ಕಿರಣ್ ರಾಜ್ ಆ ರೀತಿ ಅಲ್ಲವೇ ಅಲ್ಲ. ಈ ವಿಚಾರವನ್ನು ಸ್ವತಃ ಅವರೇ ರಿವೀಲ್ ಮಾಡಿದರು.

ಕಿರಣ್ ರಾಜ್ ಅವರು ಇತ್ತೀಚೆಗೆ ‘ಕುಟುಂಬ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಭಾಗಿ ಆದರು. ಈ ಕಾರ್ಯಕ್ರಮದ ವೇಳೆ ಕಿರಣ್ ಅವರಿಗೆ ಪ್ರಶ್ನೆ ಒಂದನ್ನು ಕೇಳಲಾಯಿತು. ‘ನಿಮಗೆ ನಿತ್ಯ ಇಷ್ಟ ಆಗುತ್ತಾರೋ ಅಥವಾ ನಿಧಿಯೋ’ ಎಂದು ಕೇಳಿದರು. ಇದಕ್ಕೆ ಕಿರಣ್ ರಾಜ್ ಅವರು ಜಾಣತನದ ಉತ್ತರ ಕೊಟ್ಟರು. ‘ಸ್ಕ್ರಿಪ್ಟ್​ನಲ್ಲಿ ಯಾರು ಹೆಸರು ಬರೆದಿರುತ್ತದೆಯೋ ಅವರನ್ನು ಇಷ್ಟಪಡುತ್ತೇನೆ’ ಎಂದು ಕಿರಣ್ ರಾಜ್ ಹೇಳಿದರು.

ಇದನ್ನೂ ಓದಿ: ‘ಕರ್ಣ’ ಧಾರಾವಾಹಿ: ಅಭಿಮಾನಿಗಳ ಎದುರು ವಿಶೇಷ ಕೋರಿಕೆ ಇಟ್ಟ ನಿತ್ಯಾ-ನಿಧಿ

‘ಕರ್ಣ’ ಧಾರಾವಾಹಿಯಲ್ಲಿ ದೊಡ್ಡ ತಿರುವು

‘ಕರ್ಣ’ ಧಾರಾವಾಹಿಯಲ್ಲಿ ದೊಡ್ಡ ತಿರುವು ಎದುರಾಗಿದೆ. ಈ ಧಾರಾರಾವಾಹಿಯಲ್ಲಿ ನಿತ್ಯಾ ವಿವಾಹ ನಡೆಯುತ್ತಿದೆ. ಈ ವಿವಾಹ ಸೂರಜ್ ಜೊತೆ ನಡೆಯಬೇಕಿತ್ತು. ಆದರೆ, ಕರ್ಣನ ಜೊತೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ಪ್ರೋಮೋನ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಪ್ರೋಮೋದಲ್ಲಿ ಕರ್ಣ ಹಾಗೂ ನಿತ್ಯಾ ವಿವಾಹ ನೆರವೇರುವುದನ್ನು ತೋರಿಸಿದ್ದಾರೆ. ಈ ಧಾರಾವಾಹಿಯ ತಿರುವನ್ನು ಅನೇಕರು ಇಷ್ಟಪಟ್ಟಿಲ್ಲ. ಇವರಿಬ್ಬರು ಮದುವೆ ಆಗಲು ಕಾರಣ ಏನು ಎಂಬ ಪ್ರಶ್ನೆಯೂ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:36 am, Thu, 9 October 25

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us