ಮನದಲ್ಲಿ ಬೆಟ್ಟದಷ್ಟು ನೋವು ಇದ್ದರೂ ನಗುತ್ತಾ ಬಿಗ್ ಬಾಸ್ ಶೋ ನಡೆಸಿಕೊಟ್ಟ ಸುದೀಪ್

|

Updated on: Nov 03, 2024 | 10:13 PM

ನಟ ಕಿಚ್ಚ ಸುದೀಪ್ ಅವರು ತಾಯಿಯನ್ನು ಕಳೆದುಕೊಂಡು ಕೆಲವೇ ದಿನಗಳು ಆಗಿವೆ. ಒಂದು ವಾರ ಅವರು ಶೋ ನಡೆಸಿಕೊಡಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ವಾರಕ್ಕೆ ಅವರು ತಾಯಿಯ ಅಗಲಿಕೆಯ ನೋವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಬಿಗ್ ಬಾಸ್​ನ ವೇದಿಕೆಗೆ ಬಂದಿದ್ದಾರೆ. ಎದೆಯಲ್ಲಿ ನೋವು ಇದ್ದರೂ ಕೂಡ ಎಲ್ಲರನ್ನೂ ನಗಿಸುತ್ತಾ ಅವರು ಶೋ ನಿರೂಪಣೆ ಮಾಡಿದ್ದಾರೆ.

ಮನದಲ್ಲಿ ಬೆಟ್ಟದಷ್ಟು ನೋವು ಇದ್ದರೂ ನಗುತ್ತಾ ಬಿಗ್ ಬಾಸ್ ಶೋ ನಡೆಸಿಕೊಟ್ಟ ಸುದೀಪ್
ಕಿಚ್ಚ ಸುದೀಪ್
Follow us on

ಸತತ 11ನೇ ಸೀಸನ್​ನಲ್ಲಿ ಕಿಚ್ಚ ಸುದೀಪ್​ ಅವರು ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಅನಾರೋಗ್ಯದಿಂದ ಅಕ್ಟೋಬರ್​ 20ರಂದು ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ನಿಧನರಾಗಿದ್ದು ನೋವಿನ ಸಂಗತಿ. ಆ ಘಟನೆ ಬಳಿಕ ಸುದೀಪ್ ಅವರು ಬ್ರೇಕ್ ತೆಗೆದುಕೊಂಡರು. ಹಾಗಾಗಿ ಅ.26 ಮತ್ತು ಅ.27ರ ಸಂಚಿಕೆಯನ್ನು ನಡೆಸಿಕೊಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ಈ ವಾರ (ನವೆಂಬರ್​ 2 ಮತ್ತು 3) ವೀಕೆಂಡ್​ ಸಂಚಿಕೆಗೆ ಅವರು ನಿರೂಪಣೆ ಮಾಡಿದ್ದಾರೆ. ನಗುನಗುತ್ತಲೇ ಅವರು ಭಾನುವಾರದ (ನ.3) ಎಪಿಸೋಡ್​ ನಡೆಸಿಕೊಟ್ಟಿದ್ದಾರೆ.

ಶನಿವಾರದ ಸಂಚಿಕೆ ಸ್ವಲ್ಪ ಎಮೋಷನಲ್ ಆಗಿತ್ತು. ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಅವರ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಾಡಿನ ಮೂಲಕ ವಾಸುಕಿ ವೈಭವ್​ ಅವರು ಸರೋಜಾ ಸಂಜೀವ್ ಅವರಿಗೆ ನಮನ ಸಲ್ಲಿಸಿದರು. ಆ ಕ್ಷಣದಲ್ಲಿ ಸುದೀಪ್ ಭಾವುಕರಾದರು. ದೊಡ್ಮನೆಯೊಳಗೆ ಇರುವ ಸ್ಪರ್ಧಿಗಳು ಕೂಡ ಕಣ್ಣೀರು ಹಾಕಿದರು. ಆದರೆ ಭಾನುವಾರ ವಾತಾವರಣ ಬದಲಾಯಿತು.

ತಾಯಿಯನ್ನು ಕಳೆದುಕೊಂಡ ನೋವು ಸುದೀಪ್ ಅವರ ಮನದಲ್ಲಿ ಇದೆ. ಆ ನೋವನ್ನು ಮರೆಯುಲು ಸಾಧ್ಯವಿಲ್ಲ. ಹಾಗಂತ ತಮ್ಮ ಕೆಲಸದ ಮೇಲೆ ಆ ನೋವಿನಿಂದ ಪರಿಣಾಮ ಬೀರುವುದು ಸುದೀಪ್ ಅವರಿಗೂ ಇಷ್ಟವಿಲ್ಲ. ಎದೆಯೊಳಗೆ ಬೆಟ್ಟದಷ್ಟು ನೋವು ಇದ್ದರೂ ಕೂಡ ಅವರು ಭಾನುವಾರದ ಎಪಿಸೋಡ್​ ಅನ್ನು ನಗುವಿನ ಮೂಲಕ ತುಂಬಿದ್ದಾರೆ. ಇಂದಿನ ಸಂಚಿಕೆಯಲ್ಲಿ ನಗೋಣ, ನಗಿಸೋಣ ಎನ್ನುತ್ತಲೇ ಅವರು ಎಪಿಸೋಡ್​ ಆರಂಭಿಸಿದರು.

ಇದನ್ನೂ ಓದಿ: ಕಿಚ್ಚ ಸುದೀಪ್ ತಾಯಿ ನಿಧನಕ್ಕೆ ಸಂತಾಪ ಸೂಚಿಸಿ ಪತ್ರ ಬರೆದ ನರೇಂದ್ರ ಮೋದಿ

ದೊಡ್ಮನೆಯೊಳಗೆ ಎಲ್ಲರಿಗೂ ನಗು ಮೂಡಿಸುವ ರೀತಿಯ ಕೆಲಸ ಟಾಸ್ಕ್​ಗಳನ್ನು ಸುದೀಪ್ ಅವರು ನೀಡಿದರು. ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಟೆನ್ಷನ್​ ಇದ್ದರೂ ಕೂಡ ಅದನ್ನು ಮರೆಯುವ ರೀತಿಯಲ್ಲಿ ನಗು ತುಂಬಿಸಿದರು ಸುದೀಪ್​. ಧನರಾಜ್, ಹನುಮಂತ, ಉಗ್ರಂ ಮಂಜು ಮುಂತಾದವರಿಂದ ಕಾಮಿಡಿ ಮಾಡಿಸಿದರು. ಹನುಮಂತ ಮತ್ತು ಚೈತ್ರಾ ಕುಂದಾಪುರ ಅವರಿಂದಲೂ ಸುದೀಪ್ ಡ್ಯಾನ್ಸ್​ ಮಾಡಿಸಿದರು. ಒಟ್ಟಾರೆ ಸಂಚಿಕೆ ಸಿಕ್ಕಾಪಟ್ಟೆ ಫನ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.