AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಹಂನಲ್ಲಿ ಕೂರಲುಬಿಟ್ಟು, ನಾಯಿತರ ನಿತ್ಕೊಂಡಿರ್ತನಲ್ಲ’: ಸಿಟ್ಟಲ್ಲಿ ಎಲ್ಲರನ್ನೂ ನಿಲ್ಲಿಸಿಯೇ ಎಪಿಸೋಡ್ ಶುರು ಮಾಡಿದ ಸುದೀಪ್

Kichcha Sudeep: ಬಿಗ್​ಬಾಸ್ ಕನ್ನಡ ವೀಕೆಂಡ್ ಎಪಿಸೋಡ್​ ನಡೆಸಿಕೊಡಲು ಬರುವ ಸುದೀಪ್ ನಿಂತುಕೊಂಡೇ ಶೋ ನಡೆಸಿಕೊಡುತ್ತಾರೆ. ಆದರೆ ಸ್ಪರ್ಧಿಗಳು ಕೂತಿರುತ್ತಾರೆ. ಆದರೆ ಇಂದು ಸ್ಪರ್ಧಿಗಳನ್ನು ನಿಲ್ಲಿಸಿಕೊಂಡೇ ಶೋ ಪ್ರಾರಂಭ ಮಾಡಿದರು.

‘ಅಹಂನಲ್ಲಿ ಕೂರಲುಬಿಟ್ಟು, ನಾಯಿತರ ನಿತ್ಕೊಂಡಿರ್ತನಲ್ಲ’: ಸಿಟ್ಟಲ್ಲಿ ಎಲ್ಲರನ್ನೂ ನಿಲ್ಲಿಸಿಯೇ ಎಪಿಸೋಡ್ ಶುರು ಮಾಡಿದ ಸುದೀಪ್
Sudeep
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 07, 2024 | 10:10 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈ ವಾರ (ಡಿಸೆಂಬರ್ 7) ಸುದೀಪ್ ಭರ್ಜರಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅದು ನಿಜವಾಗಿದೆ. ತ್ರಿವಿಕ್ರಂ ಆಡಿದ ಮಾತಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಸುದೀಪ್. ಕಿಚ್ಚನಿಗೆ ತ್ರಿವಿಕ್ರಂ ತುಂಬಾನೇ ಆಪ್ತ. ಆದರೆ, ಈ ಆಪ್ತತೆಯನ್ನು ಬದಿಗಿಟ್ಟು ಸುದೀಪ್ ಅವರು ಮಾತನಾಡಿದ್ದಾರೆ. ಈ ಮಾತುಕತೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಸುದೀಪ್ ಕೇಳುತ್ತಿದ್ದ ಪ್ರತಿ ಮಾತಿಗೆ ತ್ರಿವಿಕ್ರಂ ಅವರು ಬೆವರುತ್ತಿದ್ದುದು ಕಂಡು ಬಂತು.

ಶಿಶಿರ್​ನ ಉಳಿಸೋಕೆ ಶೋಭಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರ ಹೋದರು ಎಂಬ ಅರ್ಥ ಬರೋ ರೀತಿಯಲ್ಲಿ ತ್ರಿವಿಕ್ರಂ ಮಾತನಾಡಿದ್ದರು. ಬರುತ್ತಿದ್ದಂತೆ ಸುದೀಪ್ ಅವರು ಈ ವಿಡಿಯೋನ ಪ್ಲೇ ಮಾಡೋಕೆ ಹೇಳಿದರು. ವಿಡಿಯೋ ಮುಗಿಯುತ್ತಿದ್ದಂತೆ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳೋಕೆ ಆರಂಭಿಸಿದರು.

‘ಶಿಶಿರ್​ನ ಹೊರಕ್ಕೆ ಕಳುಹಿಸಬೇಕು ಎಂದಿದ್ರೆ ನೇರವಾಗಿ ಅವರನ್ನು ಹೊರಕ್ಕೆ ಕಳುಹಿಸಿ’ ಎಂದು ಸುದೀಪ್ ಅವರು ತ್ರಿವಿಕ್ರಂಗೆ ಸೂಚಿಸಿದರು. ‘ಶಿಶಿರ್​ನ ಸೇವ್ ಮಾಡೋಕೆ ಶೋಭಾ ಶೆಟ್ಟಿ ಹೋಗಿಲ್ಲ. ಅವರು ಹೇಗೆ ಹೋದ್ರು ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಅವರಿಗೆ 45 ನಿಮಿಷ ಮಾತನಾಡಿ ಮನ ಒಲಿಸಿದೆ. ಆ ಬಳಿಕ ಮತ್ತೆ ಹೋಗುತ್ತೇನೆ ಎಂದರು. ಅವರನ್ನು ಹೊರಕ್ಕೆ ಕಳಿಸುವ ನಿರ್ಧಾರ ತೆಗೆದುಕೊಂಡಿದ್ದು ಬಿಗ್ ಬಾಸ್ ಅಲ್ಲ, ನಾನು’ ಎಂದರು ಸುದೀಪ್.

ಇದನ್ನೂ ಓದಿ: ತ್ರಿವಿಕ್ರಂಗೆ ಕಿಚ್ಚ ಸುದೀಪ್ ಖಡಕ್​ ಎಚ್ಚರಿಕೆ ಕೊಟ್ಟಿದ್ದೇಕೆ?

ವಾರದ ದಿನ ತ್ರಿವಿಕ್ರಂ ಅವರು ಈ ವಿಚಾರವನ್ನು ಗೌತಮಿ ಬಳಿ ಮಾತನಾಡಿದ್ದರು. ಅವರಿಗೂ ಸುದೀಪ್ ಕ್ಲಾಸ್ ತೆಗೆದುಕೊಂಡರು. ‘ಎಲ್ಲವೂ ನಿಮ್ಮ ಎದುರಿಗೆ ನಡೆದಿದೆ. ನನ್ನ ಕೆಲಸ ನನಗೆ ಮಾಡಲು ಬಿಡಿ. ನಿಮ್ಮ ನಾಲಿಗೆ ಡಿಸೈನ್ ಡಿಸೈನ್ ಆಗಿ ಓಡುತ್ತದೆ’ ಎಂದರು ಸುದೀಪ್.

ಶೋಭಾ ಅವರಿಗೆ ನಿರಂತರವಾಗಿ ಹೇಳಿ ಹೇಳಿ ಸುದೀಪ್​ಗೆ ಸುಸ್ತಾಗಿತ್ತು. ಸುದೀಪ್ ಅವರಿಗೆ ಬೆನ್ನು ನೋವು ಬಂದಿತ್ತು. ಇದರಿಂದ ಅವರು ಸುಸ್ತಾದರು. ಅಂದು ಸುದೀಪ್ ಅವರ ತಾಳ್ಮೆಯ ಕಟ್ಟೆ ಒಡೆದು ಹೋಗಿತ್ತು. ಪದೇ ಪದೇ ಶೋಭಾ ಕಿರಿಕಿರಿ ಮಾಡಿದ್ದಕ್ಕೆ ಅವರನ್ನು ಹೊರಕ್ಕೆ ಕಳುಹಿಸಿದರು.  ಈಗ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳ ವಿರುದ್ಧ ಸಿಟ್ಟಾಗಿದ್ದಾರೆ. ಈ ಕಾರಣಕ್ಕೆ ಎಲ್ಲಾ ಸ್ಪರ್ಧಿಗಳನ್ನು ಎದ್ದು ನಿಲ್ಲಿಸಿಯೇ ಮಾತನಾಡಿಸಿದ್ದಾರೆ. ಆ ಬಳಿಕ ಕ್ಷಮೆ ಕೇಳಿದ ಬಳಿಕ ಕೂರಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More