‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈ ವಾರ (ಡಿಸೆಂಬರ್ 7) ಸುದೀಪ್ ಭರ್ಜರಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅದು ನಿಜವಾಗಿದೆ. ತ್ರಿವಿಕ್ರಂ ಆಡಿದ ಮಾತಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಸುದೀಪ್. ಕಿಚ್ಚನಿಗೆ ತ್ರಿವಿಕ್ರಂ ತುಂಬಾನೇ ಆಪ್ತ. ಆದರೆ, ಈ ಆಪ್ತತೆಯನ್ನು ಬದಿಗಿಟ್ಟು ಸುದೀಪ್ ಅವರು ಮಾತನಾಡಿದ್ದಾರೆ. ಈ ಮಾತುಕತೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಸುದೀಪ್ ಕೇಳುತ್ತಿದ್ದ ಪ್ರತಿ ಮಾತಿಗೆ ತ್ರಿವಿಕ್ರಂ ಅವರು ಬೆವರುತ್ತಿದ್ದುದು ಕಂಡು ಬಂತು.
ಶಿಶಿರ್ನ ಉಳಿಸೋಕೆ ಶೋಭಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರ ಹೋದರು ಎಂಬ ಅರ್ಥ ಬರೋ ರೀತಿಯಲ್ಲಿ ತ್ರಿವಿಕ್ರಂ ಮಾತನಾಡಿದ್ದರು. ಬರುತ್ತಿದ್ದಂತೆ ಸುದೀಪ್ ಅವರು ಈ ವಿಡಿಯೋನ ಪ್ಲೇ ಮಾಡೋಕೆ ಹೇಳಿದರು. ವಿಡಿಯೋ ಮುಗಿಯುತ್ತಿದ್ದಂತೆ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳೋಕೆ ಆರಂಭಿಸಿದರು.
‘ಶಿಶಿರ್ನ ಹೊರಕ್ಕೆ ಕಳುಹಿಸಬೇಕು ಎಂದಿದ್ರೆ ನೇರವಾಗಿ ಅವರನ್ನು ಹೊರಕ್ಕೆ ಕಳುಹಿಸಿ’ ಎಂದು ಸುದೀಪ್ ಅವರು ತ್ರಿವಿಕ್ರಂಗೆ ಸೂಚಿಸಿದರು. ‘ಶಿಶಿರ್ನ ಸೇವ್ ಮಾಡೋಕೆ ಶೋಭಾ ಶೆಟ್ಟಿ ಹೋಗಿಲ್ಲ. ಅವರು ಹೇಗೆ ಹೋದ್ರು ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಅವರಿಗೆ 45 ನಿಮಿಷ ಮಾತನಾಡಿ ಮನ ಒಲಿಸಿದೆ. ಆ ಬಳಿಕ ಮತ್ತೆ ಹೋಗುತ್ತೇನೆ ಎಂದರು. ಅವರನ್ನು ಹೊರಕ್ಕೆ ಕಳಿಸುವ ನಿರ್ಧಾರ ತೆಗೆದುಕೊಂಡಿದ್ದು ಬಿಗ್ ಬಾಸ್ ಅಲ್ಲ, ನಾನು’ ಎಂದರು ಸುದೀಪ್.
ಇದನ್ನೂ ಓದಿ: ತ್ರಿವಿಕ್ರಂಗೆ ಕಿಚ್ಚ ಸುದೀಪ್ ಖಡಕ್ ಎಚ್ಚರಿಕೆ ಕೊಟ್ಟಿದ್ದೇಕೆ?
ವಾರದ ದಿನ ತ್ರಿವಿಕ್ರಂ ಅವರು ಈ ವಿಚಾರವನ್ನು ಗೌತಮಿ ಬಳಿ ಮಾತನಾಡಿದ್ದರು. ಅವರಿಗೂ ಸುದೀಪ್ ಕ್ಲಾಸ್ ತೆಗೆದುಕೊಂಡರು. ‘ಎಲ್ಲವೂ ನಿಮ್ಮ ಎದುರಿಗೆ ನಡೆದಿದೆ. ನನ್ನ ಕೆಲಸ ನನಗೆ ಮಾಡಲು ಬಿಡಿ. ನಿಮ್ಮ ನಾಲಿಗೆ ಡಿಸೈನ್ ಡಿಸೈನ್ ಆಗಿ ಓಡುತ್ತದೆ’ ಎಂದರು ಸುದೀಪ್.
ಶೋಭಾ ಅವರಿಗೆ ನಿರಂತರವಾಗಿ ಹೇಳಿ ಹೇಳಿ ಸುದೀಪ್ಗೆ ಸುಸ್ತಾಗಿತ್ತು. ಸುದೀಪ್ ಅವರಿಗೆ ಬೆನ್ನು ನೋವು ಬಂದಿತ್ತು. ಇದರಿಂದ ಅವರು ಸುಸ್ತಾದರು. ಅಂದು ಸುದೀಪ್ ಅವರ ತಾಳ್ಮೆಯ ಕಟ್ಟೆ ಒಡೆದು ಹೋಗಿತ್ತು. ಪದೇ ಪದೇ ಶೋಭಾ ಕಿರಿಕಿರಿ ಮಾಡಿದ್ದಕ್ಕೆ ಅವರನ್ನು ಹೊರಕ್ಕೆ ಕಳುಹಿಸಿದರು. ಈಗ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳ ವಿರುದ್ಧ ಸಿಟ್ಟಾಗಿದ್ದಾರೆ. ಈ ಕಾರಣಕ್ಕೆ ಎಲ್ಲಾ ಸ್ಪರ್ಧಿಗಳನ್ನು ಎದ್ದು ನಿಲ್ಲಿಸಿಯೇ ಮಾತನಾಡಿಸಿದ್ದಾರೆ. ಆ ಬಳಿಕ ಕ್ಷಮೆ ಕೇಳಿದ ಬಳಿಕ ಕೂರಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ