AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಕಡೆಯಿಂದ ಹೊಸವರ್ಷದ​ ಗಿಫ್ಟ್​​; ಯಾರಿಗೆಲ್ಲ ಸಿಕ್ತು?

ಈ 100 ದಿನಗಳ ಜರ್ನಿಯಲ್ಲಿ ಎಲಿಮಿನೇಟ್ ಆದ 13 ಸ್ಪರ್ಧಿಗಳು ಬಿಗ್ ಬಾಸ್ ಫಿನಾಲೆ ನೋಡಲು ಬಂದಿದ್ದರು. ಅವರಿಗೆ ಮೊದಲು ಸುದೀಪ್ ಗಿಫ್ಟ್ ನೀಡಿದರು.

Kichcha Sudeep: ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಕಡೆಯಿಂದ ಹೊಸವರ್ಷದ​ ಗಿಫ್ಟ್​​; ಯಾರಿಗೆಲ್ಲ ಸಿಕ್ತು?
ಸುದೀಪ್
TV9 Web
| Edited By: |

Updated on: Dec 30, 2022 | 10:38 PM

Share

‘ಬಿಗ್ ಬಾಸ್​ ಕನ್ನಡ ಸೀಸನ್​ 9’ರ (BBK 9)  ಫಿನಾಲೆ ನಡೆಯುತ್ತಿದೆ. ಅದ್ದೂರಿಯಾಗಿ ಸೀಸನ್​​ 9ಕ್ಕೆ ತೆರೆಎಳೆಯಲಾಗುತ್ತಿದೆ. ಶನಿವಾರ (ಡಿಸೆಂಬರ್ 31) ಕಪ್ ಗೆಲ್ಲೋದು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಈಗ ಕಿಚ್ಚ ಸುದೀಪ್  (Kichcha Sudeep) ಅವರು ಬಿಗ್ ಬಾಸ್ ಸ್ಪರ್ಧಿಗೆ ಗಿಫ್ಟ್​ ನೀಡಿದ್ದಾರೆ. ಇದನ್ನು ನೋಡಿ ಮನೆಮಂದಿ ಸಖತ್ ಖುಷಿಪಟ್ಟಿದ್ದಾರೆ. ಫಿನಾಲೆಗೆ ಬಂದ ಸ್ಪರ್ಧಿಗಳಿಗೆ ಸರ್​ಪ್ರೈಸ್ ಸಿಕ್ಕಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ 18 ಸ್ಪರ್ಧಿಗಳು ಬಂದಿದ್ದರು. ಆ ಪೈಕಿ ಫಿನಾಲೆಗೆ ಉಳಿದುಕೊಂಡಿದ್ದು 5 ಸ್ಪರ್ಧಿಗಳು ಮಾತ್ರ. ಈ 100 ದಿನಗಳ ಜರ್ನಿಯಲ್ಲಿ ಎಲಿಮಿನೇಟ್ ಆದ 13 ಸ್ಪರ್ಧಿಗಳು ಬಿಗ್ ಬಾಸ್ ಫಿನಾಲೆ ನೋಡಲು ಬಂದಿದ್ದರು. ಅವರಿಗೆ ಮೊದಲು ಸುದೀಪ್ ಗಿಫ್ಟ್ ನೀಡಿದರು. ನಂತರ ಮನೆ ಒಳಗೆ ಇದ್ದ ಸ್ಪರ್ಧಿಗಳಿಗೂ ಈ ಗಿಫ್ಟ್ ಸಿಕ್ಕಿತು. ಇದನ್ನು ನೋಡಿ ಮನೆ ಮಂದಿ ಖುಷಿಪಟ್ಟರು.

‘ಗಿಫ್ಟ್ ಕೊಟ್ಟಿದ್ದಕ್ಕೆ ಥ್ಯಾಂಕ್ಸ್​’ ಎಂದರು ರೂಪೇಶ್ ಶೆಟ್ಟಿ. ‘ಹೊಸವರ್ಷಕ್ಕೆ ವಿಶ್ ಮಾಡಿದ ಮೊದಲ ವ್ಯಕ್ತಿ ನೀವು’ ಎಂದರು ರೂಪೇಶ್ ರಾಜಣ್ಣ. ಎಲ್ಲಾ ಸ್ಪರ್ಧಿಗಳಿಗೂ ಈ ಗಿಫ್ಟ್ ಸಿಕ್ಕಿದೆ ಅನ್ನೋದು ವಿಶೇಷ. ಉಡುಗೊರೆ ಸ್ವೀಕರಿಸಿದ ಮನೆಮಂದಿ ಸಂತಸ ಹೊರಹಾಕಿದರು.

ಕಿಚ್ಚ ಸುದೀಪ್ ಅವರಿಗೆ ಬಿಗ್ ಬಾಸ್ ಬಗ್ಗೆ ಹಾಗೂ ಬಿಗ್ ಬಾಸ್​ ಸ್ಪರ್ಧಿಗಳ ಕುರಿತು ವಿಶೇಷ ಪ್ರೀತಿ ಇದೆ. ಇದನ್ನು ಅವರು ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಕಷ್ಟದಲ್ಲಿದ್ದ ಬಿಗ್​ ಬಾಸ್ ಮಾಜಿ ಸ್ಪರ್ಧಿಗಳಿಗೆ ಅವರು ಸಹಾಯ ಮಾಡಿದ್ದು ಇದೆ. ಬಿಗ್ ಬಾಸ್ ಸ್ಪರ್ಧಿಗಳನ್ನು ಮನೆ ಮಂದಿ ರೀತಿ ಟ್ರೀಟ್ ಮಾಡುತ್ತಾರೆ.

ಇದನ್ನೂ ಓದಿ: BBK 9 Finale: ಬಿಗ್​ ಬಾಸ್​ ಫಿನಾಲೆ ನಡೆಸಿಕೊಡಲು ಝಗಮಗಿಸುವ ಡ್ರೆಸ್​ ಧರಿಸಿ ವೇದಿಕೆಗೆ ಬಂದ ಕಿಚ್ಚ ಸುದೀಪ್​

ಪ್ರತಿ ಬಾರಿ ಬಿಗ್ ಬಾಸ್​ನಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ವಿಶೇಷ ಅಡುಗೆ ಮಾಡಿ ಕಳುಹಿಸುತ್ತಾರೆ. ಈ ಬಾರಿಯೂ ಸುದೀಪ್ ವಿಶೇಷ ಅಡುಗೆ ತಯಾರಿಸಿ ಮನೆ ಮಂದಿಗೆ ಕಳುಹಿಸಿದ್ದರು. ಈ ಊಟ ಸವಿದು ಮನೆ ಮಂದಿ ಖುಷಿಪಟ್ಟಿದ್ದರು. ಈಗ ಮನೆ ಮಂದಿ ಸುದೀಪ್ ಅವರಿಂದ ಗಿಫ್ಟ್ ತೆಗೆದುಕೊಂಡು ಖುಷಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್