‘ಬಿಗ್ ಬಾಸ್ ಕನ್ನಡ ಸೀಸನ್ 9’ರ (BBK 9) ಫಿನಾಲೆ ನಡೆಯುತ್ತಿದೆ. ಅದ್ದೂರಿಯಾಗಿ ಸೀಸನ್ 9ಕ್ಕೆ ತೆರೆಎಳೆಯಲಾಗುತ್ತಿದೆ. ಶನಿವಾರ (ಡಿಸೆಂಬರ್ 31) ಕಪ್ ಗೆಲ್ಲೋದು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಈಗ ಕಿಚ್ಚ ಸುದೀಪ್ (Kichcha Sudeep) ಅವರು ಬಿಗ್ ಬಾಸ್ ಸ್ಪರ್ಧಿಗೆ ಗಿಫ್ಟ್ ನೀಡಿದ್ದಾರೆ. ಇದನ್ನು ನೋಡಿ ಮನೆಮಂದಿ ಸಖತ್ ಖುಷಿಪಟ್ಟಿದ್ದಾರೆ. ಫಿನಾಲೆಗೆ ಬಂದ ಸ್ಪರ್ಧಿಗಳಿಗೆ ಸರ್ಪ್ರೈಸ್ ಸಿಕ್ಕಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ 18 ಸ್ಪರ್ಧಿಗಳು ಬಂದಿದ್ದರು. ಆ ಪೈಕಿ ಫಿನಾಲೆಗೆ ಉಳಿದುಕೊಂಡಿದ್ದು 5 ಸ್ಪರ್ಧಿಗಳು ಮಾತ್ರ. ಈ 100 ದಿನಗಳ ಜರ್ನಿಯಲ್ಲಿ ಎಲಿಮಿನೇಟ್ ಆದ 13 ಸ್ಪರ್ಧಿಗಳು ಬಿಗ್ ಬಾಸ್ ಫಿನಾಲೆ ನೋಡಲು ಬಂದಿದ್ದರು. ಅವರಿಗೆ ಮೊದಲು ಸುದೀಪ್ ಗಿಫ್ಟ್ ನೀಡಿದರು. ನಂತರ ಮನೆ ಒಳಗೆ ಇದ್ದ ಸ್ಪರ್ಧಿಗಳಿಗೂ ಈ ಗಿಫ್ಟ್ ಸಿಕ್ಕಿತು. ಇದನ್ನು ನೋಡಿ ಮನೆ ಮಂದಿ ಖುಷಿಪಟ್ಟರು.
‘ಗಿಫ್ಟ್ ಕೊಟ್ಟಿದ್ದಕ್ಕೆ ಥ್ಯಾಂಕ್ಸ್’ ಎಂದರು ರೂಪೇಶ್ ಶೆಟ್ಟಿ. ‘ಹೊಸವರ್ಷಕ್ಕೆ ವಿಶ್ ಮಾಡಿದ ಮೊದಲ ವ್ಯಕ್ತಿ ನೀವು’ ಎಂದರು ರೂಪೇಶ್ ರಾಜಣ್ಣ. ಎಲ್ಲಾ ಸ್ಪರ್ಧಿಗಳಿಗೂ ಈ ಗಿಫ್ಟ್ ಸಿಕ್ಕಿದೆ ಅನ್ನೋದು ವಿಶೇಷ. ಉಡುಗೊರೆ ಸ್ವೀಕರಿಸಿದ ಮನೆಮಂದಿ ಸಂತಸ ಹೊರಹಾಕಿದರು.
ಕಿಚ್ಚ ಸುದೀಪ್ ಅವರಿಗೆ ಬಿಗ್ ಬಾಸ್ ಬಗ್ಗೆ ಹಾಗೂ ಬಿಗ್ ಬಾಸ್ ಸ್ಪರ್ಧಿಗಳ ಕುರಿತು ವಿಶೇಷ ಪ್ರೀತಿ ಇದೆ. ಇದನ್ನು ಅವರು ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಕಷ್ಟದಲ್ಲಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಗೆ ಅವರು ಸಹಾಯ ಮಾಡಿದ್ದು ಇದೆ. ಬಿಗ್ ಬಾಸ್ ಸ್ಪರ್ಧಿಗಳನ್ನು ಮನೆ ಮಂದಿ ರೀತಿ ಟ್ರೀಟ್ ಮಾಡುತ್ತಾರೆ.
ಇದನ್ನೂ ಓದಿ: BBK 9 Finale: ಬಿಗ್ ಬಾಸ್ ಫಿನಾಲೆ ನಡೆಸಿಕೊಡಲು ಝಗಮಗಿಸುವ ಡ್ರೆಸ್ ಧರಿಸಿ ವೇದಿಕೆಗೆ ಬಂದ ಕಿಚ್ಚ ಸುದೀಪ್
ಪ್ರತಿ ಬಾರಿ ಬಿಗ್ ಬಾಸ್ನಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ವಿಶೇಷ ಅಡುಗೆ ಮಾಡಿ ಕಳುಹಿಸುತ್ತಾರೆ. ಈ ಬಾರಿಯೂ ಸುದೀಪ್ ವಿಶೇಷ ಅಡುಗೆ ತಯಾರಿಸಿ ಮನೆ ಮಂದಿಗೆ ಕಳುಹಿಸಿದ್ದರು. ಈ ಊಟ ಸವಿದು ಮನೆ ಮಂದಿ ಖುಷಿಪಟ್ಟಿದ್ದರು. ಈಗ ಮನೆ ಮಂದಿ ಸುದೀಪ್ ಅವರಿಂದ ಗಿಫ್ಟ್ ತೆಗೆದುಕೊಂಡು ಖುಷಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ