ಯಾರಿಗೆ ಎಷ್ಟು ವೋಟ್ ಬಂದಿದೆ? ಬಿಗ್ ಬಾಸ್ ವೇದಿಕೆಯಲ್ಲಿ ಲೆಕ್ಕ ಬಹಿರಂಗ

|

Updated on: Jan 25, 2025 | 7:55 PM

ಈ ವರ್ಷ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ಚಾರ್ಮ್​ ಜಾಸ್ತಿ ಆಗಿತ್ತು. ಇದು ಸುದೀಪ್ ನಿರೂಪಣೆ ಮಾಡುವ ಕೊನೇ ಸೀಸನ್ ಎಂಬ ಕಾರಣಕ್ಕೆ ವೀಕ್ಷಕರು ಭಾರಿ ಆಸಕ್ತಿಯಿಂದ ಈ ಕಾರ್ಯಕ್ರಮವನ್ನು ನೋಡಿದ್ದಾರೆ. 6 ಜನರು ಫೈನಲ್ ತಲುಪಿದ್ದಾರೆ. ಈ ಫೈನಲಿಸ್​ಗಳಿಗೆ ಎಷ್ಟು ವೋಟ್ ಬಂದಿದೆ ಎಂಬುದನ್ನು ಸುದೀಪ್ ಅವರು ಬಿಗ್​ ವೇದಿಕೆಯಲ್ಲಿ ಬಹಿರಂಗಪಡಿಸಿದ್ದಾರೆ.

ಯಾರಿಗೆ ಎಷ್ಟು ವೋಟ್ ಬಂದಿದೆ? ಬಿಗ್ ಬಾಸ್ ವೇದಿಕೆಯಲ್ಲಿ ಲೆಕ್ಕ ಬಹಿರಂಗ
Bbk 11 Voting, Kichcha Sudeep
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮಕ್ಕೆ ಈ ವರ್ಷ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಈ ಮೊದಲು 10ನೇ ಸೀಸನ್ ಯಶಸ್ವಿ ಎನಿಸಿಕೊಂಡಿತ್ತು. ಅದನ್ನೂ ಮೀರಿಸುವ ರೀತಿಯಲ್ಲಿ 11ನೇ ಸೀಸನ್​ ಮೂಡಿಬಂದಿದೆ. ಟಿಆರ್​ಪಿಯಲ್ಲಿ ದಾಖಲೆ ಬರೆದಿದೆ. ಅಲ್ಲದೇ, ಸ್ಪರ್ಧಿಗಳಿಗೆ ಜನರು ಮಾಡಿದ ವೋಟಿಂಗ್ ಪ್ರಮಾಣ ಕೂಡ ಜಾಸ್ತಿ ಆಗಿದೆ. ಈ ವಿಚಾರವನ್ನು ಫಿನಾಲೆ ವೇದಿಕೆಯಲ್ಲಿ ಸುದೀಪ್ ಅವರು ಹೇಳಿದ್ದಾರೆ. ವಿನ್ನಿಂಗ್ ಸ್ಪರ್ಧಿಗೆ ಎಷ್ಟು ಬಂದಿದೆ? ಅದೇ ರೀತಿ ಫಿನಾಲೆಯಿಂದ ಮೊದಲು ಎಲಿಮಿನೇಟ್ ಆಗುವ ಮೊದಲ ಸ್ಪರ್ಧಿಗೆ ಎಷ್ಟು ವೋಟ್ ಬಂದಿದೆ ಎಂಬುದನ್ನು ಕೂಡ ಸುದೀಪ್ ಅವರು ಹೇಳಿದ್ದಾರೆ.

ಅಚ್ಚರಿ ಏನೆಂದರೆ, ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ವಿನ್ ಆಗಲಿರುವ ಸ್ಪರ್ಧಿಗೆ ಬರೋಬ್ಬರಿ 5 ಕೋಟಿ 23 ಲಕ್ಷ 89 ಸಾವಿರದ 318 ವೋಟ್​ಗಳು ಬಂದಿವೆ. ಈ ಸಂಖ್ಯೆಯನ್ನು ನೋಡಿ ಎಲ್ಲರೂ ಹೌಹಾರಿದ್ದಾರೆ. ಜನರಿಂದ ಈ ಪರಿ ಪ್ರೀತಿ ಪಡೆದಿರುವುದಕ್ಕೆ ಬಿಗ್ ಬಾಸ್ ವಿನ್ನರ್​ಗೆ ಖುಷಿಯಾಗಿದೆ. ವೀಕ್ಷಕರು ಈ ಶೋಗೆ ಎಷ್ಟು ಪ್ರೀತಿ ನೀಡಿದ್ದಾರೆ ಎಂಬುದನ್ನು ಈ ಸಂಖ್ಯೆಯೇ ಸಾಕ್ಷಿ.

ಇದನ್ನೂ ಓದಿ: ಸುದೀಪ್ ಬಿಗ್ ಬಾಸ್ ತೊರೆಯಲು ಅಸಲಿ ಕಾರಣ ತಿಳಿಸಿದ ಸ್ನೇಹಿತ ರಾಜೀವ್

ಫೈನಲಿಸ್ಟ್​ಗಳ ಪೈಕಿ ಮೊದಲು ಎಮಿಲಿನೇಟ್ ಆದ ಸ್ಪರ್ಧಿಗೆ 64 ಲಕ್ಷದ 48 ಸಾವಿರದ 853 ವೋಟ್​ಗಳು ಬಂದಿವೆ. ಎಲ್ಲರೂ ಚೆನ್ನಾಗಿ ಆಡಿದ್ದಾರೆ. ಆದರೆ ಟ್ರೋಫಿ ಗೆಲ್ಲುವುದು ಒಬ್ಬರು ಮಾತ್ರ. ಜನವರಿ 25 ಮತ್ತು 26ರಂದು ಅದ್ದೂರಿಯಾಗಿ ಬಿಗ್ ಬಾಸ್ ಫಿನಾಲೆ ನಡೆಯುತ್ತಿದೆ. ಝಗಮಗಿಸುವ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಎಂದಿನ ಜೋಶ್​ನಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

ಇದನ್ನೂ ಓದಿ: ಸುದೀಪ್ ಇಲ್ಲದ ಬಿಗ್​ ಬಾಸ್ ಊಹಿಸೋಕೆ ಆಗಲ್ಲ; ಮುಂದಿನ ಆಯ್ಕೆ ಏನು?

ರಜತ್, ಭವ್ಯಾ ಗೌಡ, ಹನುಮಂತ, ಉಗ್ರಂ ಮಂಜು, ಹನುಮಂತ ಹಾಗೂ ತ್ರಿವಿಕ್ರಮ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಫೈನಲ್ ತಲುಪಿದರು. ಅದಕ್ಕೂ ಮುನ್ನ ಧನರಾಜ್, ಚೈತ್ರಾ ಕುಂದಾಪುರ, ಗೌತಮಿ ಜಾದವ್ ಮುಂತಾದವರು ಕೊನೇ ಹಂತದಲ್ಲಿ ಫಿನಾಲೆಯ ಅವಕಾಶವನ್ನು ತಪ್ಪಿಸಿಕೊಂಡರು. ಎಲ್ಲರೂ ತಮ್ಮದೇ ರೀತಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದರು. ಎಲ್ಲ ಸ್ಪರ್ಧಿಗಳ ಜನಪ್ರಿಯತೆ ಹೆಚ್ಚಾಗಿದೆ. ವಿನ್ ಆಗುವ ಒಬ್ಬರ ಅದೃಷ್ಟವೇ ಬದಲಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.