
‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಇಂದು (ಜನವರಿ 18) ಮುಕ್ತಾಯ ಆಗುತ್ತಿದೆ. 112 ದಿನಗಳ ಕಾಲ ನಡೆದ ಈ ಶೋ ತುಂಬಾ ಜನಪ್ರಿಯತೆ ಪಡದುಕೊಂಡಿದೆ. ಕಿಚ್ಚ ಸುದೀಪ್ (Kichcha Sudeep) ಅವರ ನಿರೂಪಣೆಯಲ್ಲಿ ವೀಕ್ಷಕರಿಗೆ ಸಖತ್ ಮನರಂಜನೆ ಸಿಕ್ಕಿದೆ. ಒಟ್ಟು 24 ಸ್ಪರ್ಧಿಗಳು ಈ ಬಾರಿ ಬಿಗ್ ಬಾಸ್ ಮನೆಗೆ ಬಂದು ಹೋಗಿದ್ದಾರೆ. ಅಂತಿಮವಾಗಿ ಗಿಲ್ಲಿ ನಟ (Gilli Nata), ಕಾವ್ಯಾ ಶೈವ, ಅಶ್ವಿನಿ ಗೌಡ, ಧನುಷ್, ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ ಅವರು ಫಿನಾಲೆಗೆ ಬಂದಿದ್ದಾರೆ. ಯಾರು ವಿನ್ ಎಂಬುದನ್ನು ಕಿಚ್ಚ ಸುದೀಪ್ ಅವರು ಇಂದು ರಾತ್ರಿ ಘೋಷಿಸಲಿದ್ದಾರೆ. ಅದಕ್ಕೂ ಮುನ್ನ ಅವರು ಈ ಸೀಸನ್ ಬಗ್ಗೆ ತಮ್ಮ ಕೊನೆಯ ಮಾತುಗಳನ್ನು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ವಿದಾಯ ಹೇಳಿದ್ದಾರೆ. ‘ಹೀಗೆ.. ಇಂದಿನ ಸೂರ್ಯಾಸ್ತದ ವೇಳೆಗೆ ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯ ಆಗುತ್ತದೆ. ಇದು ಗಮನಾರ್ಹ ಸೀಸನ್. ದೃಶ್ಯ ವೈಭವದಿಂದ ಕೂಡಿದ ಈ ಅದ್ಭುತ ಪಯಣವು ಬಿಗ್ ಬಾಸ್ ಪ್ರತಿ ಸೀಸನ್ನಲ್ಲಿ ಹೇಗೆ ಬೆಳವಣಿಗೆ ಕಾಣುತ್ತಿದೆ ಎಂಬುದಕ್ಕೆ ಸಾಕ್ಷಿ ಆಗಿದೆ’ ಎಂದು ಕಿಚ್ಚ ಸದೀಪ್ ಅವರು ಹೇಳಿದ್ದಾರೆ.
‘ಶ್ರದ್ಧೆಯಿಂದ ಕಾರ್ಯಕ್ರಮ ವೀಕ್ಷಿಸಿ ಬೆಂಬಲ ನೀಡಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಎಲ್ಲ ಸ್ಪರ್ಧಿಗಳಿಗೆ ಮತ್ತು ವಿಜೇತರಿಗೆ ನನ್ನ ಅಭಿನಂದನೆಗಳು. ಈ ಅಗಾಧವಾದ ಯಶಸ್ಸಿಗಾಗಿ ತಂತ್ರಜ್ಞರ ತಂಡಕ್ಕೆ ನನ್ನ ಕಡೆಯಿಂದ ದೊಡ್ಡ ಅಭಿನಂಧನೆ. ನೀವೆಲ್ಲ ಇಲ್ಲ ಎಂದರೆ ಬಿಗ್ ಬಾಸ್ ಕಾರ್ಯಕ್ರಮವೇ ಇಲ್ಲ’ ಎಂದಿದ್ದಾರೆ ಕಿಚ್ಚ ಸುದೀಪ್.
And thus… by sundown today,, #BBK12 shall come to a close. This remarkable season,, an extraordinary voyage of growth and spectacle,, has borne witness to BigBoss’s growth with every passing season. My profound gratitude to every devoted viewer for unwavering support❤️,,… pic.twitter.com/Y9AF5mKFMN
— Kichcha Sudeepa (@KicchaSudeep) January 18, 2026
‘ಬಿಗ್ ಬಾಸ್ ಕನ್ನಡ ಸೀಸನ್ 13 ಶುರು ಆಗುವ ತನಕ ಬಿಗ್ ಬಾಸ್ ವಿಶ್ರಾಂತಿ ಪಡೆಯಲಿ ಎಂದು ಈ ಸೂರ್ಯಾಸ್ತದ ವೇಳೆಗೆ ನಾವು ಬಾಗಿಲುಗಳನ್ನು ಗೌರವದಿಂದ ಮುಚ್ಚುತ್ತೇನೆ’ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರ ಈ ಪೋಸ್ಟ್ ವೈರಲ್ ಆಗಿದೆ. ಕೇವಲ 4 ಗಂಟೆಯಲ್ಲಿ 13 ಸಾವಿರಕ್ಕೂ ಅಧಿಕ ಕಮೆಂಟ್ಗಳು ಬಂದಿವೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಎಷ್ಟು ಜನಪ್ರಿಯತೆ ಎಂಬುದಕ್ಕೆ ಇದೇ ಸಾಕ್ಷಿ.
ಇದನ್ನೂ ಓದಿ: Bigg Boss Kannada Winner: ಗಿಲ್ಲಿ ನಟ ಗೆದ್ದಾಯಿತು; ತೀರ್ಪು ನೀಡಿದ ‘ಬಿಗ್ ಬಾಸ್ ಕನ್ನಡ 12’ ವೀಕ್ಷಕರು
ಬಿಗ್ ಬಾಸ್ ನಿರೂಪಣೆ ಮಾಡುವುದು ಅಷ್ಟು ಸುಲಭವಲ್ಲ. ಎಲ್ಲ ರೀತಿಯ ವ್ಯಕ್ತಿತ್ವ ಇರುವ ಸ್ಪರ್ಧಿಗಳು ನಿಭಾಯಿಸಬೇಕು. ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಪ್ರತಿ ವಾರ ತಪ್ಪದೇ ವಾರಾಂತ್ಯದ ಸಂಚಿಕೆ ನಡೆಸಿಕೊಡಬೇಕು. ಸೋಶಿಯಲ್ ಮೀಡಿಯಾದಲ್ಲಿ ಬರುವ ಕೆಲವು ಟೀಕೆಗಳನ್ನೂ ಎದುರಿಸಬೇಕು. ಇವೆಲ್ಲವನ್ನೂ ಕಿಚ್ಚ ಸುದೀಪ್ ಅವರು ನಿಭಾಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.