ಸಾನ್ಯಾ ಹೆಸರಲ್ಲಿ ಎರಡೆರಡು ಪ್ಲೇಟ್ ಊಟ ಮಾಡಿದ ರೂಪೇಶ್ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್

ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಐಯ್ಯರ್ ಅವರ ಪಾಲಿಗೆ ಒಂದಷ್ಟು ಮೊಟ್ಟೆ ನೀಡಲಾಗಿತ್ತು. ಈ ಮೊಟ್ಟೆಯನ್ನು ರೂಪೇಶ್​ಗೆ ಕೊಟ್ಟು ಹೋಗಿದ್ದರು. ಅದನ್ನು ರೂಪೇಶ್ ತಿಂದಿದ್ದಾರೆ. ಈ ಎಲ್ಲಾ ವಿಚಾರ ಇಟ್ಟುಕೊಂಡು ರೂಪೇಶ್ ಅವರ​ ಕಾಲೆಳೆದಿದ್ದಾರೆ ಕಿಚ್ಚ.

ಸಾನ್ಯಾ ಹೆಸರಲ್ಲಿ ಎರಡೆರಡು ಪ್ಲೇಟ್ ಊಟ ಮಾಡಿದ ರೂಪೇಶ್ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್
ರೂಪೇಶ್-ಸುದೀಪ್
Edited By:

Updated on: Nov 12, 2022 | 9:54 PM

‘ಬಿಗ್ ಬಾಸ್’ ಮನೆಯಲ್ಲಿ ರೂಪೇಶ್ ಶೆಟ್ಟಿ (Roopesh Shetty) ಅವರು ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರ ಜತೆ ಆಪ್ತವಾಗಿದ್ದ ಸಾನ್ಯಾ ಐಯ್ಯರ್ ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇದಾದ ನಂತರದಲ್ಲಿ ಅವರು ಬೇಸರಗೊಂಡಿದ್ದರು. ಕಣ್ಣೀರು ಹಾಕುತ್ತಲೇ ಊಟ ಮಾಡಿದ್ದರು. ಸಾನ್ಯಾ ಐಯ್ಯರ್ ಅವರನ್ನು ನೆನಪಿಸಿಕೊಂಡು ರೂಪೇಶ್ ಶೆಟ್ಟಿ ಎರಡೆರಡು ಪ್ಲೇಟ್​​ ಇಟ್ಟುಕೊಂಡು ಊಟ ಮಾಡಿದ್ದರು. ಈ ವಿಚಾರಕ್ಕೆ ಕಿಚ್ಚ ಸುದೀಪ್ ಅವರು ಕಾಲೆಳೆದಿದ್ದಾರೆ.

ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಒಟಿಟಿಯಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡರು. ನಂತರ ಟಿವಿ ಸೀಸನ್​ಗೂ ಬಂದರು. ಇವರ ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ಬೆಳೆದಿತ್ತು. ಆದರೆ, ಸಾನ್ಯಾ ಐಯ್ಯರ್ ಅವರು ಕಳೆದ ವಾರ ಕಡಿಮೆ ವೋಟ್ ಪಡೆದು ಮನೆಯಿಂದ ಹೊರ ಹೋಗಿದ್ದಾರೆ. ಸಾನ್ಯಾ ಅವರನ್ನು ಕಳೆದುಕೊಂಡು ರೂಪೇಶ್ ಶೆಟ್ಟಿ ತುಂಬಾನೇ ಕೊರಗಿದ್ದಾರೆ.

ಇದನ್ನೂ ಓದಿ
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ರೂಪೇಶ್ ಶೆಟ್ಟಿ ಅವರು ಸಾನ್ಯಾ ಐಯ್ಯರ್ ಬಿಗ್ ಬಾಸ್ ಮನೆಯಲ್ಲಿ ಸಖತ್ ಕ್ಲೋಸ್ ಆಗಿದ್ದರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಊಟ ಮಾಡುತ್ತಿರಲಿಲ್ಲ. ಸಾನ್ಯಾ ಹೋದ ನಂತರದಲ್ಲಿ ರೂಪೇಶ್​ಗೆ ಒಂಟಿತನ ಕಾಡಿದೆ. ಈ ಕಾರಣಕ್ಕೆ ಅವರು ಕಣ್ಣೀರು ಹಾಕಿದ್ದಾರೆ. ಊಟ ಮಾಡುವಾಗ ಸಾನ್ಯಾ ಐಯ್ಯರ್ ಹೆಸರಲ್ಲಿ ಒಂದು ಪ್ಲೇಟ್ ತೆಗೆದುಕೊಂಡು ಬಂದಿದ್ದಾರೆ ರೂಪೇಶ್ ಶೆಟ್ಟಿ. ತಮ್ಮ ಪ್ಲೇಟ್​​ನ ಊಟವನ್ನು ಆ ಪ್ಲೇಟ್​ಗೆ ಹಾಕಿಕೊಂಡು ಊಟ ಮಾಡಿದ್ದಾರೆ. ಸಾನ್ಯಾ ನೆನಪಲ್ಲಿ ಎರಡು ಪ್ಲೇಟ್​ನಲ್ಲಿ ಅವರು ಊಟ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಐಯ್ಯರ್ ಅವರ ಪಾಲಿಗೆ ಒಂದಷ್ಟು ಮೊಟ್ಟೆ ನೀಡಲಾಗಿತ್ತು. ಈ ಮೊಟ್ಟೆಯನ್ನು ರೂಪೇಶ್​ಗೆ ಕೊಟ್ಟು ಹೋಗಿದ್ದರು. ಅದನ್ನು ರೂಪೇಶ್ ತಿಂದಿದ್ದಾರೆ. ಈ ಎಲ್ಲಾ ವಿಚಾರ ಇಟ್ಟುಕೊಂಡು ರೂಪೇಶ್ ಅವರ​ ಕಾಲೆಳೆದಿದ್ದಾರೆ ಕಿಚ್ಚ.

‘ಆಪ್ತರಾದವರು ಬಿಟ್ಟು ಹೋದಾಗ ಊಟ ಮಾಡುವವರು ಊಟ ಬಿಟ್ಟಿದ್ದು ನೋಡಿದ್ದೀನಿ. ಗಡ್ಡ ಬಿಟ್ಟಿದ್ದನ್ನು ನೋಡಿದ್ದೀನಿ. ಆದರೆ, ಆಪ್ತರಾದವರು ಬಿಟ್ಟು ಹೋದಾಗ ಎರಡೆರಡು ಪ್ಲೇಟ್ ಊಟ ಮಾಡಿದ್ದು, ಎಕ್ಸ್​​ಟ್ರಾ ಮೊಟ್ಟೆ ತಿಂದ್ರಿ. ಮಿಸ್ ಮಾಡಿಕೊಂಡ್ರೆ ಹೀಗೆ ಮಿಸ್ ಮಾಡ್ಕೊಬೇಕು’ ಎಂದು ರೂಪೇಶ್ ಅವರ ಕಾಲೆಳೆದರು ಸುದೀಪ್.

Published On - 9:54 pm, Sat, 12 November 22